ಸಿನಿಮಾ ಸುದ್ದಿ

ಕೇವಲ 24 ಗಂಟೆಗಳಲ್ಲೇ ಬಾಹುಬಲಿ-2 ದಾಖಲೆ ಮುರಿದ ಪದ್ಮಾವತಿ ಟ್ರೈಲರ್

ಬಿಡುಗಡೆಯಾದ ಒಂದೇ ದಿನದಲ್ಲಿ ಪದ್ಮಾವತಿ ಚಿತ್ರದ ಟ್ರೈಲರ್ ಬಾಹುಬಲಿ ದಾಖಲೆಯನ್ನು ಮುರಿದಿದೆ.

ಕೇವಲ 24 ಗಂಟೆಗಳಲ್ಲೇ ಬಾಹುಬಲಿ-2 ದಾಖಲೆ ಮುರಿದ ಪದ್ಮಾವತಿ ಟ್ರೈಲರ್
Published On :
ನವದೆಹಲಿ: ಬಿಡುಗಡೆಯಾದ ಒಂದೇ ದಿನದಲ್ಲಿ ಪದ್ಮಾವತಿ ಚಿತ್ರದ ಟ್ರೈಲರ್ ಬಾಹುಬಲಿ ದಾಖಲೆಯನ್ನು ಮುರಿದಿದೆ. 
ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬಾಹುಬಲಿಯ ದಾಖಲೆಯನ್ನು ಮುರಿದಿದೆ. 
ಟ್ರೈಲರ್ ನ್ನು ನೋಡಿದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಜಯ್ ಲೀಲಾ ಬನ್ಸಾಲಿಯವರ ಅತ್ಯುತ್ತಮವಾದುದ್ದರಲ್ಲಿ ಒಂದು ಅಭಿಪ್ರಾಯಪಟ್ಟಿದ್ದಾರೆ. ಅ.09 ರಂದು ಪದ್ಮಾವತಿ ಟ್ರೈಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 15 ಮಿಲಿಯನ್ ಯೂಟ್ಯೂಬ್ ಬಳಕೆದಾರರು ವೀಕ್ಷಿಸಿದ್ದಾರೆ. ಬಾಹುಬಲಿ ಟ್ರೈಲರ್ ಬಿಡುಗಡೆಯಾದಾಗ 24 ಗಂಟೆಗಳಲ್ಲಿ 11 ಮಿಲಿಯನ್ ಜನರು ವೀಕ್ಷಿಸಿದ್ದರು. 
ಪದ್ಮಾವತಿ ಚಿತ್ರ ಡಿ.1 ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.