ಜಾನಿ ಜಾನಿಯಲ್ಲಿ ಅಭಿಮಾನಿಗಳಿಗೆ ದುನಿಯಾ ವಿಜಯ್ 'ಸಿಕ್ಸ್ ಪ್ಯಾಕ್' ದರ್ಶನ
ಜಾನಿ ಜಾನಿ ಯಲ್ಲಿ ಸಿಕ್ಸ್ ಪ್ಯಾಕ್ ತೋರಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಆರು ಬಾರಿ ಒಲಂಪಿಕ್ ಚ್ಯಾಂಪಿಯನ್ ಆಗಿರುವ ದಾವಣಗೆರೆ ಮೂಲದ ಮಂಜುನಾಥ್ ...

Published On :
ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ ಸಿಕ್ಸ್ ಪ್ಯಾಕ್ ತೋರಿಸಲು ಯಾವಾಗಲೂ ಉತ್ಸುಕರಾಗಿರುತ್ತಾರೆ, ಸದ್ಯ ಕನಕ ಶೂಟಿಂಗ ಮುಗಿಸಿರುವ ವಿಜಯ್, ಜಾನಿ ಜಾನಿ ಎಸ್ ಪಾಪಾ ಸಿನಿಮಾಗಾಗಿ ಸಿದ್ದತೆ ನಡೆಸುತ್ತಿದ್ದಾರೆ.
ಜಾನಿ ಜಾನಿ ಯಲ್ಲಿ ಸಿಕ್ಸ್ ಪ್ಯಾಕ್ ತೋರಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ. ಆರು ಬಾರಿ ಒಲಂಪಿಕ್ ಚ್ಯಾಂಪಿಯನ್ ಆಗಿರುವ ದಾವಣಗೆರೆ ಮೂಲದ ಮಂಜುನಾಥ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ವಿಜಯ್ ಉತ್ತಮ ಬಾಡಿ ಶೇಪ್ ಪಡೆದಿದ್ದಾರೆ. ಫೈಟ್ ಸನ್ನಿವೇಶಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ, ವಿಜಯ್ ಒಪ್ಪಿಗೆ ನೀಡಿದ ತಕ್ಷಣ ಈ ತಿಂಗಳಿನಲ್ಲಿ ಯಾವಾಗ ಬೇಕಾದರೂ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದಾರೆ.
ಎಲ್ಲಾ ಚಿತ್ರಗಳಲ್ಲೂ ನಿರ್ದೇಶಕರು ವಿಜಯ್ ಬಾಡಿ ತೋರಿಸಲು ಏಕೆ ಬಯಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರೀತಂ ಗುಬ್ಬಿ, ವಿಜಯ್ ತಮ್ಮ ಬಾಜಿ ಬಿಲ್ಡಿಂಗ್ ಮಾಡಲು ತುಂಬಾ ಡೆಡಿಕೇಟ್ ಮಾಡಿದ್ದಾರೆ. ಹಾಗಾಗಿ ನಾವು ಅದನ್ನು ತೋರಿಸಲು ಬಯಸುತ್ತೇವೆ. ಕಳೆದ ಮೂರು ತಿಂಗಳಿನಿಂದ ವಿಜಯ್ ವರ್ಕ್ ಔಟ್ ಮಾಡುತ್ತಿದ್ದಾರೆ. ಸಿನಿಮಾ ಟ್ರೆಂಡಿ ಕಥೆಗೆ ಇದು ಅವಶ್ಯಕತೆಯಿದೆ. ಜೊತೆಗೆ ವಿಭಿನ್ನವಾದ ಹೇರ್ ಸ್ಟೈಲ್ ಮತ್ತು ಡಿಫರೆಂಟ್ ಕ್ಲಾಥ್ ಡಿಸೈನ್ ಮಾಡಲಾಗಿದೆ. ಯೋಗಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ವಿಜಯ್ ಹೋಂ ಬ್ಯಾನರ್ ದುನಿಯಾ ಟಾಕೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ, ಸಿನಿಮಾಗೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದುನಿಯಾ ವಿಜಯ್duniya vijayಸಿಕ್ಸ್ ಪ್ಯಾಕ್Preetham GubbiJohnny Johnny Yes PapaSix-packಜಾನಿ ಜಾನಿ ಎಸ್ ಪಾಪ. ಪ್ರೀತಂ ಗುಬ್ಬಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


