ಸಿನಿಮಾ ಸುದ್ದಿ

ಗೋವಾ: ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಟಾಲಿವುಡ್ ಜೋಡಿ ನಾಗ ಚೈತನ್ಯ- ಸಮಂತಾ

ಟಾಲಿವುಡ್‌ನ ಸೂಪರ್ ಸ್ಟಾರ್ ನಾಗರ್ಜುನ್ ಅವರ ಪುತ್ರ ನಾಗ ಚೈತನ್ಯ ಹಾಗೂ ಸಮಂತಾ ರುಥ್ ಪ್ರಭು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ...

ಗೋವಾ: ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ  ಟಾಲಿವುಡ್ ಜೋಡಿ ನಾಗ ಚೈತನ್ಯ- ಸಮಂತಾ
ನಾಗ ಚೈತನ್ಯ- ಸಮಂತಾ ವಿವಾಹ
Published On :
ಗೋವಾ: ಟಾಲಿವುಡ್‌ನ  ಸೂಪರ್ ಸ್ಟಾರ್ ನಾಗರ್ಜುನ್ ಅವರ ಪುತ್ರ ನಾಗ ಚೈತನ್ಯ ಹಾಗೂ ಸಮಂತಾ ರುಥ್ ಪ್ರಭು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿಪತಿಗಳಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ
ಕೆಲವೇ ಗಣ್ಯರ ಸಮ್ಮುಖದಲ್ಲಿ ಇಂದು ಹಿಂದೂ ಸಂಪ್ರದಾಯದಂತೆ ಸರಳವಾಗಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಳೆ ಗೋವಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮತ್ತೆ ಮದುವೆಯಾಗಲಿದ್ದಾರೆ. ನಂತರ ಅ ೯ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ.
ಮದುವೆಗೆ ಆಗಮಿಸುವ ಸಂಬಂಧಿಕರ ಪಟ್ಟಿಯಲ್ಲಿ ಕೇವಲ ೧೦೦ ಜನರ ಹೆಸರು ಮಾತ್ರವಿದೆ. ಕುಟುಂಬಸ್ಥರು, ಹತ್ತಿರದ ಸಂಬಂಧಿಕರು ಹಾಗೂ ಕೆಲವೇ ಕೆಲವು ಸ್ನೇಹಿತರು ಮದುವೆಗೆ ಬರಲಿದ್ದಾರೆ.
ಶನಿವಾರ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಗಾಗಿ ವಿಶೇಷ ಡಿಸೈನ್ ಡ್ರೆಸ್ ಸಿದ್ಧಪಡಿಸಲಾಗಿದೆ. ವಿವಾಹದ ಫೋಟೋಗಳನ್ನು ನಾಗರ್ಜುನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.