ಸಿನಿಮಾ ಸುದ್ದಿ

ಟಗರು ಸಿನಿಮಾದಲ್ಲಿ ಹೆಚ್ಚಿನ ರೋಮ್ಯಾನ್ಸ್ ಇಲ್ಲ: ಸೂರಿ

: ಹ್ಯಾಟ್ರಿಕ್ ಹೀರೋ ಅಭಿನಯದ ಟಗರು ಸಿನಿಮಾ ಶೂಟಿಂಗ್ ಈ ತಿಂಗಳ ಅಂತ್ಯದೊಳಗೆ ಮುಗಿಸಲು ನಿರ್ದೇಶಕ ಸೂರಿ ನಿರ್ಧರಿಸಿದ್ದಾರೆ....

ಟಗರು ಸಿನಿಮಾದಲ್ಲಿ ಹೆಚ್ಚಿನ ರೋಮ್ಯಾನ್ಸ್ ಇಲ್ಲ: ಸೂರಿ
ಟಗರು ಸಿನಿಮಾ ಸ್ಟಿಲ್
Published On :
ಬೆಂಗಳೂರು: ಹ್ಯಾಟ್ರಿಕ್ ಹೀರೋ ಅಭಿನಯದ ಟಗರು ಸಿನಿಮಾ ಶೂಟಿಂಗ್ ಈ ತಿಂಗಳ ಅಂತ್ಯದೊಳಗೆ ಮುಗಿಸಲು ನಿರ್ದೇಶಕ ಸೂರಿ ನಿರ್ಧರಿಸಿದ್ದಾರೆ.
ಇತ್ತೀಚೆಗೆ ಶಿವರಾಜ್ ಕುಮಾರ್ ಮತ್ತು ಭಾವನಾ ಅಭಿನಯದ ರೋಮ್ಯಾಂಟಿಕ್ ಸಾಂಗ್ ವೊಂದನ್ನು ಇತ್ತೀಚೆಗೆ ಚಿತ್ರೀಕರಿಸಲಾಗಿದೆ.
ಪ್ರತಿಯೊಂದು ಹಾಡು ವಿಭಿನ್ನವಾಗಿದೆ, ಚರಣ್ ರಾಜ್ ಸಂಯೋಜಿಸಿರುವ ಗೀತೆಗಳಿಗೆ ಸುಂದರವಾದ ಪಿಕ್ಚರೈಸೇಶನ್ ಮಾಡಲು ಬಯಸಿದ್ದೇವೆ, ಬದುಕಿನ ಬಣ್ಣವೇ ಬದಲಾದರೇ ಅದು ಪ್ರೇಮ ಎಂಬ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎಂದು ಸೂರಿ ವಿವರಿಸಿದ್ದಾರೆ.
ಮುಂದಿನ ಶೆಡ್ಯೂಲ್ ನಲ್ಲಿ ಧನಂಜಯ್ ಮತ್ತು ವಿಶಿಷ್ಠ ಸಿಂಹ  ಅವರ ಕಾಂಬಿನೇಷನ್ ನಲ್ಲಿರುವ ಸನ್ನಿವೇಶದ ಶೂಟಿಂಗ್ ನಡೆಯಲಿದೆ.  ಶಿವಣ್ಣ ಮತ್ತು ಮಾನ್ವಿತಾ ಹರೀಶ್ ಹಾಡಿನ ಶೂಟಿಂಗ್ ಗಾಗಿ ಹೊಸಪೇಟೆ ಸಮೀಪ ಅದ್ಭುತವೆನಿಸುವ ಸ್ಥಳ ಗುರುತಿಸಲಾಗಿದೆ, ಇದೊಂದು ಅದ್ಭುತ ಹಾಡಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಶಿವಣ್ಣ ಮತ್ತು ಮಾನ್ವಿತಾ ಲಂಬಾಣಿಗರ ಉಡುಪು ಧರಿಸಲಿದ್ದಾರೆ, ಕೊನೆಯ ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಲಾಗುವುದು ಎಂದು ಹೇಳಿದ್ದಾರೆ.
ಟಗರು ಸಿನಿಮಾದ ಬಗ್ಗೆ ಅತಿಯಾಗಿ ನಿರೀಕ್ಷೆಗಳು ಹೆಚ್ಚಿವೆ ಸೂರಿ ಶಿವಣ್ಣ ಕಾಂಬಿನೇಶನ್ ನಲ್ಲಿ ಪ್ರೇಕ್ಷಕರು ಉತ್ತಮವಾದದ್ದನ್ನು ಬಯಸುತ್ತಿದ್ದಾರೆ. ಮೊದಲ ಬಾರಿಗೆ ಧನಂಜಯ್ ಈ ಸಿನಿಮಾ ಮೂಲಕ ವಿಲ್ಲನ್ ಆಗಿ ಪರಿಚಿತರಾಗುತ್ತಿದ್ದಾರೆ, ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.