ಸನ್ನಿಲಿಯೋನ್ ಗೆ ತಪ್ಪಿದ ಅವಕಾಶ ಶಾನ್ವಿ ಶ್ರೀವಾತ್ಸವ್ ಮಡಿಲಿಗೆ!
ಕನ್ನಡ ಮತ್ತು ತೆಲುಗು ನಟಿ ಶಾನ್ವಿ ಶ್ರೀವಾತ್ಸವ ಪಾರ್ನ್ ಸ್ಟಾರ್ ಸನ್ನಿಲಿಯೋನ್ ಹಿಂದಿಕ್ಕಿ ಅಂತಾರಾಷ್ಟ್ರೀಯ ಪ್ರಾಜೆಕ್ಟ್ ತಮ್ಮದಾಗಿಸಿಕೊಂಡಿದ್ದಾರೆ...

Published On :
ಬೆಂಗಳೂರು: ಕನ್ನಡ ಮತ್ತು ತೆಲುಗು ನಟಿ ಶಾನ್ವಿ ಶ್ರೀವಾತ್ಸವ ಪಾರ್ನ್ ಸ್ಟಾರ್ ಸನ್ನಿಲಿಯೋನ್ ಹಿಂದಿಕ್ಕಿ ಅಂತರಾಷ್ಟ್ರೀಯ ಪ್ರಾಜೆಕ್ಟ್ ತಮ್ಮದಾಗಿಸಿಕೊಂಡಿದ್ದಾರೆ.
ಚೈನೀಸ್ ಟೆಲಿವಿಷನ್ ನಲ್ಲಿ ಪ್ರಸಾರವಾಗುವ ವೆಬ್ ಸಿರೀಸ್ ನಲ್ಲಿ ದಿ ಡಾರ್ಕ್ ಲಾರ್ಡ್ ಎಂಬ ಶೋನಲ್ಲಿ ಭಾರತೀಯ ರಾಜಕುಮಾರಿ ಪಾತ್ರದಲ್ಲಿ ಶಾನ್ವಿ ಅಭಿನಯಿಸಲಿದ್ದಾರೆ. ಇತ್ತೀಚೆಗೆ ಚೀನಾಗೆ ತೆರಳಿದ್ದ ಶಾನ್ವಿ ಶೋನ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಮೊದಲಿಗೆ ಈ ಪಾತ್ರಕ್ಕಾಗಿ ನಿರ್ಮಾಣ ತಂಡ ಸನ್ನಿ ಲಿಯೋನ್ ಆಯ್ಕೆ ಮಾಡಿತ್ತು. ಆದರೆ ಬೇಬಿ ಡಾಲ್ ಸ್ಟಾರ್ ಸನ್ನಿ ಈ ಪಾತ್ರಕ್ಕೆ ಒಗ್ಗುವುದಿಲ್ಲ, ತೀರಾ ವೆಸ್ಟ್ರನ್ ಆಗಿ ಕಾಣುತ್ತಾರೆ ಎಂದು ನಿರ್ಧರಿಸಿದ ತಂಡ ಶಾನ್ವಿ ಆಯ್ಕೆ ಮಾಡಿದೆ.
ತಾರಕ್ ಸಿನಿಮಾದಲ್ಲಿ ಎನ್ ಆರ್ ಐ ಪಾತ್ರ ಮಾಡಿ ಶಾನ್ವಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ತಂಡದ ಜೊತೆಗೆ ಶೂಟಿಂಗ್ ಅನುಭವವಿದೆ. ಸೆಪ್ಟಂಬರ ತಿಂಗಳ ಮೊದಲ ಅರ್ಧದಲ್ಲಿ ಚೀನಾಗೆ ತೆರಳಿದ್ದ ಶಾನ್ವಿ ಭಾರತೀಯ ರಾಜಕುಮಾರಿ ಪಾತ್ರಕ್ಕಾಗಿ ಟೆಸ್ಟ್ ನೀಡಿ ಬಂದಿದ್ದರು, ಪಾತ್ರಕ್ಕಾಗಿ ನಾನು ಚೀನಿ ಭಾಷೆ ಕಲಿತೆ ಎಂದು ಶಾನ್ವಿ ಹೇಳಿದ್ದಾರೆ.
ವೆಬ್ ಸಿರೀಸ್ ಚೀನಾದಲ್ಲಿ ಬಹುದೊಡ್ಡ ಸಿನಿಮಾದಂತಾಗಿದೆ. ಚೀನಿಯರು ಕೇವಲ ಬುದ್ಧಿವಂತರು ಮಾತ್ರವಲ್ಲ, ಕಠಿಣ ಶ್ರಮ ಜೀವಿಗಳು ಎಂಬುದು ನನಗೆ ಶೂಟಿಂಗ್ ವೇಳೆ ತಿಳಿಯಿತು. ಅದೊಂದು ಮರೆಯಲಾಗದ ಅನುಭವ ಎಂದು ಶಾನ್ವಿ ತಿಳಿಸಿದ್ದಾರೆ.
ಭಾರತ-ಚೀನಾ ಸಂಬಂಧಗಳ ಕುರಿತಾದ ಕಥೆಯುಳ್ಳ ಶೋ ಇದಾಗಿದೆ. ಈ ಪ್ರಾಜೆಕ್ಟ್ ನ ಭಾಗವಾಗಿರುವುದು ನನಗೆ ಹೆಮ್ಮೆ ತಂದಿದೆ. ನಟನಾ ವೃತ್ತಿ ಬೇರೆ ಎಲ್ಲಾ ವ್ಯತ್ಯಾಸಗಳನ್ನು ಮರೆ ಮಾಡಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಭಾರತದ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದು ಚೀನಾ ಭಾಷೆ ಕಲಿಯು ಶಾನ್ವಿಗೆ ನೆರವಾಗಿದೆ, ಸಂಭಾಷಣೆಗಳನ್ನು ನಾನು ಶೀಘ್ರವಾಗಿ ಕಲಿತೆ, ಚೀನಾ ಭಾಷಾಂತರಕಾರರು ಕೂಡ ನನಗೆ ಸಹಾಯ ಮಾಡಿದ್ದಾರೆ. ಮಲೇಶಿಯನ್ ನಿರ್ದೇಶಕ ಚಾಂಗ್ ಈ ವೆಬ್ ಸಿರೀಸ್ ಅನ್ನು ಚೀನಾದಲ್ಲಿ ಹೊರ ತರುತ್ತಿದ್ದಾರೆ.
ನಿರ್ದೇಶಕ ಚಾಂಗ್ ಗೆ ಕೇವಲ ಇಂಗ್ಲೀಷ್ ಮಾತ್ರ ಗೊತ್ತು, ಸೆಟ್ ನಲ್ಲಿ ಕಥೆಯನ್ನು ಇಂಗ್ಲೀಷಿನಲ್ಲಿ ವಿವರಿಸುತ್ತಾರೆ ಎಂದು ಹೇಳಿದ್ದಾರೆ. ಸದ್ಯ ತಾರಕ್ ಮತ್ತು ಮುಫ್ತಿ ಸಿನಿಮಾ ಶೂಟಿಂಗ್ ಮುಗಿಸಿರುವ ಶಾನ್ವಿ ಮುಂದಿನ ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sunny Leoneಸನ್ನಿ ಲಿಯೋನ್Shanvi Srivastavaಶಾನ್ವಿ ಶ್ರೀವಾತ್ಸವChinese web seriesThe Dark LordIndian princessಚೈನೀಸ್ ವೆಬ್ ಸಿರೀಸ್ದಿ ಡಾರ್ಕ್ ಲಾರ್ಡ್ಭಾರತೀಯ ರಾಜಕುಮಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


