ಸಿನಿಮಾ ಸುದ್ದಿ

ಪುನೀತ್‌ಗೆ 'ಪವರ್ ಸ್ಟಾರ್' ಬಿರುದು ಕೊಟ್ಟಿದ್ದು ಯಾರು ಗೊತ್ತಾ! ಕೇಳಿದ್ರೆ ಅಚ್ಚರಿ ಪಡುತ್ತೀರಿ..!

ಸ್ಯಾಂಡಲ್ವುಡ್ ಪವರ್ ಸ್ಟಾರ್ ಯಾರು ಎಂದರೆ ಇಡೀ ಚಿತ್ರರಂಗದಿಂದ ಹಿಡಿದು ಅಭಿಮಾನಿ ವರ್ಗ ಪುನೀತ್ ರಾಜಕುಮಾರ್ ರತ್ತ ಬೆರಳು ತೋರಿಸುತ್ತದೆ...

ಪುನೀತ್‌ಗೆ 'ಪವರ್ ಸ್ಟಾರ್' ಬಿರುದು ಕೊಟ್ಟಿದ್ದು ಯಾರು ಗೊತ್ತಾ! ಕೇಳಿದ್ರೆ ಅಚ್ಚರಿ ಪಡುತ್ತೀರಿ..!
ಪುನೀತ್ ರಾಜಕುಮಾರ್
Published On :
ಸ್ಯಾಂಡಲ್ವುಡ್ ಪವರ್ ಸ್ಟಾರ್ ಯಾರು ಎಂದರೆ ಇಡೀ ಚಿತ್ರರಂಗದಿಂದ ಹಿಡಿದು ಅಭಿಮಾನಿ ವರ್ಗ ಪುನೀತ್ ರಾಜಕುಮಾರ್ ರತ್ತ ಬೆರಳು ತೋರಿಸುತ್ತದೆ. 
ಪುನೀತ್ ರಾಜಕುಮಾರ್ ಎಲ್ಲೇ ಹೋದರೂ ಅವರನ್ನು ಅಭಿಮಾನಿಗಳು ಪವರ್ ಸ್ಟಾರ್ ಪವರ್ ಸ್ಟಾರ್ ಎಂದು ಕೂಗುತ್ತಾರೆ. ಅಂತಹ ಪವರ್ ಸ್ಟಾರ್ ಪಟ್ಟ ಪುನೀತ್ ರಾಜಕುಮಾರ್ ಗೆ ನೀಡಿದ್ದು ಬೇರ್ಯಾರು ಅಲ್ಲ ಸ್ಯಾಂಡಲ್ವುಡ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್. 
ಹೌದು ಹಾಗಂತ ಶಿವರಾಜ್ ಕುಮಾರ್ ಅವರೇ ಹೇಳಿದ್ದಾರೆ. ಇತ್ತೀಚೆಗೆ ಪುನೀತ್ ಅಭಿನಯದ ಅಂಜನಿಪುತ್ರ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ವೇದಿಕೆ ಮೇಲೆ ಪುನೀತ್ ರಾಜಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳೆಲ್ಲಾ ಪವರ್ ಸ್ಟಾರ್, ಪವರ್ ಸ್ಟಾರ್ ಎನ್ನುತ್ತಾ ತಮ್ಮ ಹರ್ಷ ವ್ಯಕ್ತಪಡಿಸಿದರು. 
ಈ ವೇದಿಕೆ ಮೇಲೆ ಪುನೀತ್ ಪಕ್ಕ ನಿಂತಿದ್ದ ಶಿವರಾಜ್ ಕುಮಾರ್ ನೀವಿವತ್ತು ಪವರ್ ಸ್ಟಾರ್ ಎಂದು ಕೂಗುತ್ತಿದ್ದೀರಿ. ಈ ಪವರ್ ಸ್ಟಾರ್ ಗೆ ಪವರ್ ಕೊಟ್ಟಿದ್ದು ಈ ಟವರ್ ಎಂದು ಹೇಳಿದರು. ಆಗ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತ್ತು. 
ಚಿಕ್ಕಂದಿನಿಂದಲು ಅಪ್ಪು ತುಂಬಾ ಆ್ಯಕ್ಟೀವ್. ಎಲ್ಲರಿಗಿಂತ ಆತ ಡಿಫರೆಂಟ್ ಆಗಿದ್ದ. ತನ್ನ 6ನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪಡೆದ ಖ್ಯಾತಿ ಅವನಿಗಿದೆ. ಅಪ್ಪು ಪವರ್ ಇದ್ದಂತೆ. ಆತನ ಟ್ಯಾಲೆಂಟ್, ಎನರ್ಜಿ ನೋಡಿ ಪವರ್ ಸ್ಟಾರ್ ಟೈಟಲ್ ಇಟ್ಟರೆ ಚನ್ನಾಗಿರುತ್ತದೆ ಎಂದಿದ್ದೆ. ನಂತರ ಸ್ಯಾಂಡಲ್ವುಡ್ ನಲ್ಲಿ ಪುನೀತ್ ಪವರ್ ಸ್ಟಾರ್ ಆಗಿ ಬೆಳೆದರು ಎಂದು ಶಿವಣ್ಣ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.