ಸನ್ನಿ ಲಿಯೋನ್ ಮೈಮೇಲೆ ಹಾವು ಹಾಕಿದ ಸಹೋದ್ಯೋಗಿ: ಹೀಗಿತ್ತು ನೋಡಿ ಆಕೆಯ ರಿಯಾಕ್ಷನ್
ಸಿನಿಮಾ ಶೂಟಿಂಗ್ ವೇಳೆಯಲ್ಲಿ ಕಲಾವಿದರ ತಂಡಗಳಲ್ಲಿ ತಮಾಷೆಯ ಘಟನೆಗಳು ನಡೆದಿರುವ ಉದಾಹರಣೆ ಸಾಕಷ್ಟಿವೆ, ಅಂತಹದ್ದೇ ಘಟನೆ ಸನ್ನಿ ಲಿಯೋನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸೆಟ್ ನಲ್ಲಿಯೂ ಇದೇ..

Published On :
ಮುಂಬೈ: ಸಿನಿಮಾ ಶೂಟಿಂಗ್ ವೇಳೆಯಲ್ಲಿ ಕಲಾವಿದರ ತಂಡಗಳಲ್ಲಿ ತಮಾಷೆಯ ಘಟನೆಗಳು ನಡೆದಿರುವ ಉದಾಹರಣೆ ಸಾಕಷ್ಟಿವೆ, ಅಂತಹದ್ದೇ ಘಟನೆ ಸನ್ನಿ ಲಿಯೋನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸೆಟ್ ನಲ್ಲಿಯೂ ಇದೇ ಮಾದರಿಯ ಘಟನೆ ನಡೆದಿದೆ.
ಚಿತ್ರೀಕರಣದ ಬಿಡುವಿನ ವೇಳೆ ಕುಳಿತು ಏನನ್ನೋ ಓದುತ್ತಿದ್ದ ಸನ್ನಿ ಲಿಯೋನ್ ಮೇಲೆ ಹಿಂಬದಿಯಿಂದ ಬಂದ ವ್ಯಕ್ತಿಯೋರ್ವ ಹಾವೊಂದನ್ನು ಹರಿಬಿಡುತ್ತಾನೆ ಇದರಿಂದ ಭಯಗೊಂಡ ಸನ್ನಿ ಹಾವಿನಿಂದ ತಪ್ಪಿಸಿಕೊಳ್ಳಲು ಓಡುತ್ತಾರೆ. ಈ ವಿಡಿಯೋವನ್ನು ಸನ್ನಿ ಲಿಯೋನ್ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 11 ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


