ಸ್ಟಾಲಿನ್ ಪುತ್ರ ಉದಯನಿಧಿಗೆ ಶ್ರದ್ಧಾ ಶ್ರೀನಾಥ್ ನಾಯಕಿ?
ಸ್ಯಾಂಡಲ್ವುಡ್ ಸೂಪರ್ ಹಿಟ್ ಯೂ-ಟರ್ನ್ ಚಿತ್ರದ ಮೂಲಕ ಭರವಸೆ ಮೂಡಿಸಿದ ಶ್ರದ್ಧಾ ಶ್ರೀನಾಥ್ ಸದ್ಯ ಕಾಲಿವುಡ್ ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅದಾಗಲೇ ತಮಿಳಿನ ಎರಡು...

Published On :
ಸ್ಯಾಂಡಲ್ವುಡ್ ಸೂಪರ್ ಹಿಟ್ ಯೂ-ಟರ್ನ್ ಚಿತ್ರದ ಮೂಲಕ ಭರವಸೆ ಮೂಡಿಸಿದ ಶ್ರದ್ಧಾ ಶ್ರೀನಾಥ್ ಸದ್ಯ ಕಾಲಿವುಡ್ ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಅದಾಗಲೇ ತಮಿಳಿನ ಎರಡು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಶ್ರದ್ಧಾ ಮೂರನೇ ಚಿತ್ರ ಮಾಜಿ ಸಿಎಂ ಕರುಣಾನಿಧಿ ಮೊಮ್ಮಗನ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ.
ತಮಿಳಿನ ಸೂಪರ್ ಹಿಟ್ ವಿಕ್ರಂ ವೇದಾ ಮತ್ತು ಇವನ್ ತಂದಿರನ್ ಚಿತ್ರಗಳಲ್ಲಿ ಶ್ರದ್ಧಾ ತಮ್ಮ ಛಾಪು ಮೂಡಿಸಿದ್ದಾರೆ. ಹೀಗಾಗಿ ಉದಯನಿಧಿ ಸ್ಟಾಲಿನ್ ಅಭಿನಯದ ಮುಂದಿನ ಚಿತ್ರದಲ್ಲಿ ಶ್ರದ್ಧಾ ಅಭಿನಯಿಸುವ ಸಾಧ್ಯತೆ ಇದೆ. ಚಿತ್ರವನ್ನು ಪಿಎಸ್ ಮಿತ್ರನ್ ಎಂಬುವರು ನಿರ್ದೇಶಿಸುತ್ತಿದ್ದು ಚಿತ್ರದಲ್ಲಿ ಉದಯನಿಧಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಮಿತ್ರನ್ ಶ್ರದ್ಧಾ ಶ್ರೀನಾಥ್ ಜತೆ ಮಾತುಕತೆ ನಡೆಸಿದ್ದಾರೆ. ಸದ್ಯ ಮಿತ್ರನ್ ತಮ್ಮ ನಿರ್ದೇಶನದ ಇರುಂಬು ತಿರೈ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದಲ್ಲಿ ವಿಶಾಲ್ ಮತ್ತು ಸಮಂತಾ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯ ನಂತರ ಮಿತ್ರನ್ ಮುಂದಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉದಯನಿಧಿ ಜತೆ ನಟಿಸುವ ಅವಕಾಶ ಸಿಕ್ಕರೆ ತಮಿಳಿನಲ್ಲಿ ಶ್ರದ್ಧಾಗೆ ಇದು ದೊಡ್ಡ ಸಿನಿಮಾವಾಗಲಿದೆ. ಶ್ರದ್ಧಾ ಅಭಿನಯದ ತಮಿಳಿನ ರಿಚ್ಚಿ ಚಿತ್ರ ಡಿಸೆಂಬರ್ 8ರಂದು ಬಿಡುಗಡೆಯಾಗಲಿದೆ. ರಿಚ್ಚಿ ಚಿತ್ರ ಕನ್ನಡದ ಉಳಿದವರು ಕಂಡಂತೆ ಚಿತ್ರದ ರಿಮೇಕ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


