ಹರ್ಷ ನಿರ್ದೇಶನದ ನಿಖಿಲ್ 3ನೇ ಚಿತ್ರಕ್ಕೆ ರಿಯಾ ನಲ್ವಾಡೆ ನಾಯಕಿ?
ಜಾಗ್ವರ್ ಚಿತ್ರದ ನಾಯಕ ನಿಖಿಲ್ ಕುಮಾರ್ ಅಭಿನಯದ ಮೂರನೇ ಚಿತ್ರವನ್ನು ಹರ್ಷ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಸಿಟಿ ಎಕ್ಸ್ ಪ್ರೆಸ್ ವರದಿ ಮಾಡಿದ್ದು...

Published On :
ಜಾಗ್ವರ್ ಚಿತ್ರದ ನಾಯಕ ನಿಖಿಲ್ ಕುಮಾರ್ ಅಭಿನಯದ ಮೂರನೇ ಚಿತ್ರವನ್ನು ಹರ್ಷ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಸಿಟಿ ಎಕ್ಸ್ ಪ್ರೆಸ್ ವರದಿ ಮಾಡಿದ್ದು ಇದನ್ನು ದೃಢಪಡಿಸಿರುವ ನಿರ್ದೇಶಕ ಹರ್ಷ ಚಿತ್ರದ ಪಾತ್ರದಾರಿಗಳ ಆಯ್ಕೆಯಲ್ಲಿ ತೊಡಗಿದ್ದಾರೆ.
ನಿಖಿಲ್ ಕುಮಾರ್ ಮುನಿರತ್ನ ನಿರ್ಮಾಣದ ಪೌರಾಣಿಕ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಂತರ ನಿಖಿಲ್ ಹರ್ಷ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ನಿಖಿಲ್ ಗೆ ನಾಯಕಿಯಾಗಿ ನವನಟಿ ರಿಯಾ ನಲ್ವಾಡೆ ಅಭಿನಯಿಸುತ್ತಿದ್ದು ನಿಖಿಲ್ ತಂದೆಯಾಗಿ ಖ್ಯಾತ ನಟ ಶರತ್ ಕುಮಾರ್ ನಟಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ನಿರ್ದೇಶಕ ಹರ್ಷ ಮೊದಲಿಗೆ ರಿಯಾ ನಲ್ವಾಡೆ ಅವರನ್ನು ಸ್ಕ್ರೀನ್ ಟೆಸ್ಟ್ ಮಾಡಲಿದ್ದು ಅಂದುಕೊಂಡಂತೆ ಆದರೆ ರಿಯಾ ನಲ್ವಾಡೆ ಅವರು ನಿಖಿಲ್ ಗೆ ನಾಯಕಿಯಾಗಲಿದ್ದಾರೆ. ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


