ಸಿನಿಮಾ ಸುದ್ದಿ

ಚಿತ್ರರಂಗ ಬಿಡುತ್ತೇನೆ ಎಂದೂ ಎಲ್ಲಿಯೂ ಹೇಳಿಲ್ಲ, ಸಿನಿಮಾ ನನ್ನ ಮೊದಲ ಆದ್ಯತೆ: ಉಪೇಂದ್ರ

ನಟ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿ ರಾಜಕೀಯ ಪ್ರವೇಶಿಸಿದ್ದಾರೆ, ಇದೇ ವೇಳೆ ತಾವು ಎಂದಿಗೂ ಚಿತ್ರರಂಗ ಬಿಡುವುದಿಲ್ಲ...

ಚಿತ್ರರಂಗ ಬಿಡುತ್ತೇನೆ ಎಂದೂ ಎಲ್ಲಿಯೂ ಹೇಳಿಲ್ಲ, ಸಿನಿಮಾ ನನ್ನ ಮೊದಲ ಆದ್ಯತೆ: ಉಪೇಂದ್ರ
ಉಪೇಂದ್ರ
Published On :
ಬೆಂಗಳೂರು: ನಟ ಉಪೇಂದ್ರ  ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿ ರಾಜಕೀಯ ಪ್ರವೇಶಿಸಿದ್ದಾರೆ, ಇದೇ ವೇಳೆ ತಾವು ಎಂದಿಗೂ ಚಿತ್ರರಂಗ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಶನಿವಾರ ತಮ್ಮ ಪಕ್ಷದ ಪೊಲಿಟಿಕಲ್ ಆ್ಯಪೆ ಬಿಡುಗಡೆ ಮಾಡಿದ ಉಪೇಂದ್ರ ಅದೇ ದಿನ ಸಂಜೆ ಉಪೇಂದ್ರ ಮತ್ತೆ ಬಾ ಸಿನಿಮಾದ ಮಾದ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದರು. 
ಒಬ್ಬ ನಿರ್ದೇಶಕನಾಗಿ ತೆರೆಯ ಮೇಲೆ ಅಭಿಮಾನಿಗಳು ಉಪೇಂದ್ರ ಅವರನ್ನು  ನೋಡಲು ಬಯಸುತ್ತಾರೆ, ರಾಜಕೀಯ ಸೇರಿದ ಮೇಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಉಳಿದ ಕೆಲವು ಕಲಾವಿದರು ನಮ್ಮ ಇದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ರಾಜಕೀಯ ಪ್ರವೇಶಿಸುವ ಮುನ್ನ ಹಾಗೂ ನಂತರ ಜನತೆಗಾಗಿ ಏನನ್ನಾದರೂ ಮಾಡಲು ಬಯಸಿದ್ದೆ, ಆದರೆ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ನಾನು ಸಿನಿಮಾ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಆದರೆ ನನಗೆ ಸ್ವಲ್ಪ ಬಿಡುವು ಬೇಕು,ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂಬ ವಾಕ್ಯದಂತೆ ನಡೆಯುತ್ತೇನೆ, ಜನರಿಗೆ ನಾನು ಬೇಕಾದರೇ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ, ನಟನೆ ಬೇಕೆಂದರೆ ಅದಕ್ಕಾಗಿಯೂ ನಾನು ವಾಪಸ್ ಬರುತ್ತೇನೆ ಎಂದು ಉಪೇಂದ್ರ ಹೇಳುತ್ತೇನೆ.
ಸದ್ಯ ಉಪೇಂದ್ರ ಮತ್ತೆ ಬಾ ಸಿನಿಮಾ ಪ್ರಮೋಷನ್ ಗಾಗಿ ಕಾಯುತ್ತಿದ್ದಾರೆ, ಕೆ. ಮಾದೇಶ್ ಅವರ ಹೋಮ್ ಮಿನಿಸ್ಟರ್ ಸಿನಿಮಾಗಾಗಿ ಇಂದು ಹೈದರಾಬಾದ್ ಗೆ ತೆರಳಲಿದ್ದಾರೆ. ನಾನು ಇಂದಿಗೂ ಕೆಲ ಸಿನಿಮಾಗಳಿಗಾಗಿ ಶೆಡ್ಯೂಲ್ ಹಾಕಿಕೊಂಡಿದ್ದೇನೆ, ಉಪ್ಪಿ- ರುಪ್ಪಿ ಸಿನಿಮಾಗಾಗಿಯೂ ಡೇಟ್ಸ್ ನೀಡಿದ್ದಾರೆ.
ಎಚ್2ಓ ನಂತರ  ಅರುಣ್ ಲೋಕನಾಥ್ ಜೊತೆ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ.  ನಿರ್ದೇಶಕ ಲೋಕನಾಥ್ ಸ್ನೇಹಿತನಿದ್ದಂತೆ.  ಅವರ ಜೊತೆ ಕೆಲಸ ಮಾಡುವಾಗ ನನದೆ ಮನೆಯಲ್ಲಿದ್ದಂತೆ ಭಾವನೆಯಾಗುತ್ತದೆ,  ಇದರ ಕ್ರೆಡಿಟ್ ತಂತ್ರಜ್ಞರಿಗೂ ಕೂಡ ಸಲ್ಲಬೇಕು ಎಂದು ಹೇಳಿದ್ದಾರೆ.
ಇನ್ನೂ ಸಿನಿಮಾದಲ್ಲಿ ಅಪ್ಪ-ಮಗನಾಗಿ ದ್ವಿಪಾತ್ರದಲ್ಲಿ ನಟಿಸಿರುವ ಬಗ್ಗೆ ಮಾತನಾಡಿರುವ ಉಪೇಂದ್ರ, ಇದೊಂದು ತಮಾಷೆಯಾಗಿದೆ. ತಂದೆ-ಮಗನಂತೆ ಇರಲು ಬಯಸುವುದು,  ಎರಡು ಪೀಳಿಗೆಯ ತದ್ವಿರುದ್ಧ ಮನಸ್ಥಿತಿಗಳ ಕಥೆಯಾಗಿದೆ.
ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ  ಪ್ರೇಮಾ, ಶೃತಿ ಹರಿಹರನ್ ಮತ್ತು ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು ನಟಿಸಿದ್ದಾರೆ.
ಉಪೇಂದ್ರ ಸಿನಿಮಾ ನಂತರ ನಟ ಉಪೇಂದ್ರ ಮತ್ತು ಪ್ರೇಮಾ 15 ವರ್ಷಗಳ ನಂತರ ತೆರೆಯ ಮೇಲೆ  ಒಂದಾಗಿದ್ದಾರೆ, ಪ್ರೇಮಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಾನಲ್ಲ, ಪಾರ್ಮತಮ್ಮ ರಾಜ್ ಕುಮಾರ್ ಎಂದು ಹೇಳುವ ಮೂಲಕ ತಮ್ಮ ವಿಧೇಯತೆ ಮೆರೆದಿದ್ದಾರೆ. 

ಓಂ ಮತ್ತು ಉಪೇಂದ್ರ ಸಿನಿಮಾದಲ್ಲಿ ಪ್ರೇಮಾ ನಟಿಸಿದ್ದರು. ಅವರು ಲಕ್ಕಿ ಸ್ಟಾರ್, ಅವರು ನಟಿಸಿದ ಆ 2 ಸಿನಿಮಾಗಳು ಸೂಪರ್ ಹಿಟ್ ಆದವು. ಈ ಸಿನಿಮಾದಲ್ಲೂ ಅವರು ಎಲ್ಲರಿಗೂ ಅದೃಷ್ಟ ತರಲಿ ಎಂದು ಉಪೇಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.