ತಾಯ್ತನ ನನ್ನ ವೃತ್ತಿ ಜೀವನವನ್ನು ಬದಲಾಯಿಸಿಲ್ಲ: ಕರೀನಾ ಕಪೂರ್ ಖಾನ್
ತಾಯ್ತನದಿಂದ ನನ್ನ ವೃತ್ತಿ ಜೀವನದ ಮೇಲೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ನಟಿ ಕರೀನಾ ಕಪೂರ್ ಖಾನ್ ..

Published On :
ನವದೆಹಲಿ: ತಾಯ್ತನದಿಂದ ನನ್ನ ವೃತ್ತಿ ಜೀವನದ ಮೇಲೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ನಟಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.
ನಿಯತಕಾಲಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕರೀನಾ, ನಾನು ಯಾವಾಗಲೂ ಕುಟುಂಬ ಆಧರಿತ ವ್ಯಕ್ತಿಯಾಗಿದ್ದೇನೆ, ಸಂಸಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ, ನಾನು ನನ್ನ ವೃತ್ತಿ ಜೀವನ ಆರಂಭಿಸಿದಾಗನಿಂದಲೂ ಕುಟುಂಬ ಮತ್ತು ಕೆಲಸವನ್ನು ಸಮಾನವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಕುಟುಂಬಕ್ಕೆ ನನ್ನ ಮೊದಲ ಆದ್ಯತೆ, ನಾನು ತುಂಬಾ ಮಹಾತ್ವಾಕಾಂಕ್ಷೆ ಹೊಂದಿದ್ದೇನೆ, ಆದರೂ ನಾನು ಕುಟುಂಬಕ್ಕೋಸ್ಕರ ಸಮಯ ಮೀಸಲಿಡುತ್ತೇನೆ, ಯಾವಾಗಲೂ ಕೆಲಸ, ಕೆಲಸ ಎಂದು ನಾನು ಬಯಸುವುದಿಲ್ಲ, ಹೀಗಾಗಿ ವೃತ್ತಿ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲಕ ಕಾಪಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪುತ್ರ ತೈಮೂರ್ ಜನಿಸಿದ 1 ತಿಂಗಳಲ್ಲೇ ಸಿನಿಮಾ ಕಮಿಟ್ ಮೆಂಟ್ ಗಳನ್ನು ಪೂರ್ಣಗೊಳಿಸಿದ್ದಾರೆ. ಸೈಫ್ ಅಲಿ ಖಾನ್ ಇತ್ತೀಚೆಗೆ ತಡರಾತ್ರಿ ಪಾರ್ಟಿಗಳಿಗೆ ಹೋಗುವುದನ್ನು ನಿಯಂತ್ರಿಸುತ್ತಿದ್ದಾರೆ, ಏಕೆಂದರೆ ಮಗ ತೈಮೂರ್ ಗಾಗಿ ಕರೀನಾ ಬೆಳಗ್ಗಿನ ಜಾವವೇ ಎದ್ದೇಳುತ್ತಾರಂತೆ.
ತೈಮೂರ್ ನಿಂದಾಗಿ ನನ್ನ ಹಾಗೂ ಸೈಫ್ ಜೀವನ ಶೈಲಿಯೇ ಬದಲಾಗಿದೆ ಎಂದು ಹೇಳಿರುವ ಕರೀನಾ ಸದ್ಯ ವೀರ್ ದೇ ವೆಡ್ಡಿಂಗ್ ಎಂಬ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಶಶಾಂಕ್ ಘೋಷ್ ನಿರ್ದೇಶನದ ಈ ಸಿನಿಮಾ ಮೇ 18 ಕ್ಕೆ ರಿಲೀಸ್ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


