ಸಿನಿಮಾ ಸುದ್ದಿ

ನನ್ನ ಬಗೆಗಿನ ಪ್ರತಿಯೊಂದು ಗಾಸಿಪ್ ನನ್ನ ಇನ್ನಷ್ಟು ಸಾಧನೆಗೆ ಶಕ್ತಿ ಕೊಡುತ್ತದೆ: ಧ್ರುವ ಸರ್ಜಾ

ಇಂದು ಸಿನಿಮಾ ಮಾಡುವುದು ಒಂದು ಉದ್ಯಮವಾಗಿ ಮಾರ್ಪಾಡಾಗಿರುವಾಗ ನಿರ್ದಿಷ್ಟ ಸಿನಿಮಾ ಥಿಯೇಟರ್ ನಲ್ಲಿ ಬಹಳ ದಿನದವರೆಗೆ ...

ನನ್ನ ಬಗೆಗಿನ ಪ್ರತಿಯೊಂದು ಗಾಸಿಪ್ ನನ್ನ ಇನ್ನಷ್ಟು ಸಾಧನೆಗೆ ಶಕ್ತಿ ಕೊಡುತ್ತದೆ: ಧ್ರುವ ಸರ್ಜಾ
ಭರ್ಜರಿ ಚಿತ್ರದ 50 ದಿನಗಳ ಸಂಭ್ರಮವನ್ನು ಆಚರಿಸುತ್ತಿರುವ ನಟ ಧ್ರುವ ಸರ್ಜಾ ಮತ್ತು ನಟಿ ರಚಿತಾ ರಾಮ್
Published On :
ಬೆಂಗಳೂರು: ಇಂದು ಸಿನಿಮಾ ಮಾಡುವುದು ಒಂದು ಉದ್ಯಮವಾಗಿ ಮಾರ್ಪಾಡಾಗಿರುವಾಗ ನಿರ್ದಿಷ್ಟ ಸಿನಿಮಾ ಥಿಯೇಟರ್ ನಲ್ಲಿ ಬಹಳ ದಿನದವರೆಗೆ ಪ್ರದರ್ಶನಗೊಂಡರೆ ಅದಕ್ಕೆ ಸಂಭ್ರಮಾಚರಣೆ ಮಾಡಲಾಗುತ್ತದೆ. ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾದ ಚಿತ್ರಗಳಲ್ಲೊಂದು ಧ್ರುವ ಸರ್ಜಾ ಅಭಿನಯದ ಚೇತನ್ ಕುಮಾರ್ ನಿರ್ದೇಶನದ ಚಿತ್ರ ಭರ್ಜರಿ. ರಾಜ್ಯದ 71 ಕೇಂದ್ರಗಳಲ್ಲಿ 50 ದಿನಗಳ ಪ್ರದರ್ಶನ ಕಂಡು ಮಲ್ಟಿಪ್ಲೆಕ್ಸ್ ಗಳಲ್ಲಿ 3,000 ಕ್ಕೂ ಅಧಿಕ ಶೋಗಳನ್ನು ಪೂರೈಸಿದೆ.
ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡ ನಿನ್ನೆ ಥಿಯೇಟರ್ ಗಳಿಗೆ ಭೇಟಿ ನೀಡಿ ಸಂಭ್ರಮಾಚರಣೆ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಟ ಧ್ರುವ ಸರ್ಜಾ, ಭರ್ಜರಿ ಸಿನಿಮಾ ಇನ್ನೂ 50 ದಿನಗಳ ಪ್ರದರ್ಶನ ಕಂಡು ಶತದಿನೋತ್ಸವ ಆಚರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮಧ್ಯೆ ಧ್ರುವ ಸರ್ಜಾ ಅವರು ನಾಯಕನಾಗಬೇಕಿದ್ದ ಪೊಗರು ಚಿತ್ರ ಶೂಟಿಂಗ್ ಆರಂಭಕ್ಕೆ ವಿಳಂಬವಾಗುತ್ತಿದೆ ಮತ್ತು ಅದರ ಕಥೆಯನ್ನು ಧ್ರುವ ಅವರು ಇಷ್ಟಪಟ್ಟಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಉತ್ತರಿಸಿದ ನಟ ಧ್ರುವ ಸರ್ಜಾ, ನನ್ನ ಬಗೆಗಿನ ಪ್ರತಿಯೊಂದು ಗಾಸಿಪ್ ನನ್ನ ಇನ್ನಷ್ಟು ಸಾಧನೆಗೆ ಶಕ್ತಿ ಕೊಡುತ್ತದೆ. ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಎಂದು ನನ್ನಲ್ಲಿ ನೀವು ಕೇಳಿದರೆ ಪೊಗರು ಎಂದು ಹೇಳುತ್ತೇನೆ. ಪ್ರಾಜೆಕ್ಟ್ ವಿಳಂಬವಾಗುತ್ತಿರುವುದು ನಿಜ. ಅದಕ್ಕೆ ಕಾರಣಗಳು ಬೇರೆ ಇದೆ ಎಂದು ಹೇಳಿದರು.
ಚಿತ್ರದ ನಿರ್ಮಾಣ ತಂಡದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರೇಕ್ಷಕರು ಯಾವುದೇ ಪ್ರಶ್ನೆ ಕೇಳಲಿ ಅದನ್ನು ನಾನು ಚಿತ್ರ ನಿರ್ಮಾಪಕರ ಮುಂದಿಡುತ್ತೇನೆ. ಯಾವ ಕೆಲಸ ಮಾಡುವುದಾದರೂ ನಾವು ಶೇಕಡಾ 100ರಷ್ಟು ಶ್ರಮ ಹಾಕಿದರೆ ಮುಂದೆ ಅಸಮಂಜಸ ಪ್ರಶ್ನೆಗಳನ್ನು ಎದುರಿಸಬೇಕಾಗುವುದಿಲ್ಲ. ಚಿತ್ರ ವಿಳಂಬವಾಗುತ್ತಿರುವುದಕ್ಕೆ ಕೇಳಿಬರುತ್ತಿರುವ ಗಾಳಿಸುದ್ದಿಗಳು ನಿಜವಲ್ಲ. ಚಿತ್ರದ ಪಾತ್ರಕ್ಕಾಗಿ ನಾನು ತಯಾರಿ ನಡೆಸುತ್ತಿದ್ದು ಚಿತ್ರದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದರು.
Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.