ಸಿನಿಮಾ ಸುದ್ದಿ

ನಟಿ ಸನ್ನಿಲಿಯೋನ್ ಇದ್ದ ವಿಮಾನ ಸ್ವಲ್ಪದರಲ್ಲೇ ಅಪಘಾತದಿಂದ ಪಾರು

ಖಾಸಗಿ ವಿಮಾನವೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ಆಕೆಯ ಪತಿ ಡೇನಿಯಲ್ ವೆಬರ್ ಅವರು ಸ್ವಲ್ಪದರಲ್ಲಿಯೇ ಅಪಘಾತವೊಂದರಿಂದ ಪಾರಾಗಿದ್ದಾರೆ...

ನಟಿ ಸನ್ನಿಲಿಯೋನ್ ಇದ್ದ ವಿಮಾನ ಸ್ವಲ್ಪದರಲ್ಲೇ ಅಪಘಾತದಿಂದ ಪಾರು
ಬಾಲಿವುಡ್ ನಟಿ ಸನ್ನಿಲಿಯೋನ್
Published On :
ನವದೆಹಲಿ: ಖಾಸಗಿ ವಿಮಾನವೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ಆಕೆಯ ಪತಿ ಡೇನಿಯಲ್ ವೆಬರ್ ಅವರು ಸ್ವಲ್ಪದರಲ್ಲಿಯೇ ಅಪಘಾತವೊಂದರಿಂದ ಪಾರಾಗಿದ್ದಾರೆ. 
ಖಾಸಗಿ ವಿಮಾನವೊಂದರಲ್ಲಿ ಮುಂಬೈಗೆ ತೆರಳುತ್ತಿದ್ದ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ಸನ್ನಿಲಿಯೋನ್ ಅವರಿದ್ದ ವಿಮಾನ ಪತನಗೊಳ್ಳುವ ಭೀತಿ ಎದುರಾಗಿತ್ತು. 
ವಿಮಾನ ಪೈಲಟ್ ಮುಂಜಾಗ್ರತೆವಹಿಸಿ ಸಂಭವನೀಯ ಅವಘಡವನ್ನು ತಪ್ಪಿಸಿದ್ದಾರೆ. ಮಹಾರಾಷ್ಟ್ರದ ದುರ್ಗಮ ಪ್ರದೇಶವೊಂದರಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದು ರಸ್ತೆ ಮಾರ್ಗದ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. 
ತಮಗೆ ಎದುರಾದ ಅಪಾಯದ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿರುವ ಸನ್ನಿಲಿಯೋನ್ ಅವರು, ಹವಾಮಾನ ವೈಪರೀತ್ಯದಿಂದಾಗಿ ಮಹಾರಾಷ್ಟ್ರದ ಬಳಿ ನಾವು ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತಕ್ಕೀಡಾಗುತ್ತಿತ್ತು. ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದೇವೆ. ದೇವರ ದಯೆಯಿಂದ ಜೀವಂತವಾಗಿದ್ದೇವೆ. ವಿಮಾನದಲ್ಲಿ ನನ್ನೊಂದಿಗೆ ನನ್ನ ಪತಿ ಡೇನಿಯರ್ ವೆಬರ್ ಕೂಡ ಇದ್ದರು. ವಿಮಾನದಲ್ಲಿದ್ದ ಪ್ರತಿಯೊಬ್ಬರೂ ಸಾಕಷ್ಟು ಭಯಭೀತರಾಗಿದ್ದರು. ಇದೀಗ ಎಲ್ಲರೂ ಸುರಕ್ಷಿತರಾಗಿದ್ದು, ಮನೆಗಳಿಗೆ ತೆರಳುತ್ತಿದ್ದೇವೆ. ಪೈಲಟ್ ಗಳ ಕಾರ್ಯವನ್ನು ಶ್ಲಾಘಿಸಲೇಬೇಕು. ಎಲ್ಲರ ಪ್ರಾಣವನ್ನು ಕಾಪಾಡಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.