ಕ್ರೈಂ ಹಾಸ್ಯ ಚಲನಚಿತ್ರ 'ರಿಲ್ಯಾಕ್ಸ್ ಸತ್ಯ' ದಲ್ಲಿ ಮಾನ್ವಿತಾ ಹರೀಶ್ ಭಿನ್ನ ಅವತಾರ
'ರಿಲ್ಯಾಕ್ಸ್ ಸತ್ಯ' ಸಿನೆಮಾದಲ್ಲಿ ನಟಿಸುತ್ತಿರುವ ನಟಿ ಮಾನ್ವಿತಾ ಹರೀಶ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Published On :
ಬೆಂಗಳೂರು: 'ರಿಲ್ಯಾಕ್ಸ್ ಸತ್ಯ' ಸಿನೆಮಾದಲ್ಲಿ ನಟಿಸುತ್ತಿರುವ ನಟಿ ಮಾನ್ವಿತಾ ಹರೀಶ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
"ಈ ಸಿನೆಮಾದಲ್ಲಿ ನನ್ನನ್ನು ಮಾಯಾ ದೇವತೆಯಾಗಿ ತೋರಿಸುತ್ತಿದ್ದಾರೆ. ಪಾತ್ರದ ಹೆಸರು ಕೂಡ ಮಾಯಾ. ಆದುದರಿಂದ ನನ್ನ ಕೂದಲನ್ನು ಸುರಳಿ ಸುತ್ತಿಕೊಂಡಿದ್ದೇನೆ" ಎನ್ನುತ್ತಾರೆ ಮಾನ್ವಿತಾ.
'ರಿಲ್ಯಾಕ್ಸ್ ಸತ್ಯ' ನವೀನ್ ರೆಡ್ಡಿ ಅವರ ಎರಡನೇ ಸಿನೆಮಾ. ಇದು ಕ್ರೈಂ ಹಾಸ್ಯ ಚಲನಚಿತ್ರ ಎನ್ನುವ ನವೀನ್ "ಸಾಮಾಜಿಕ ಸಮಸ್ಯೆಯನ್ನು ಮನರಂಜನೆಯ ಮೂಲಕ ಏಕೆ ಚರ್ಚಿಸಬಾರದು? ಆದುದರಿಂದ ಕ್ರೈಂ ಹಾಸ್ಯ ಚಲನಚಿತ್ರ ನಿರ್ದೇಶಿಲಸು ನಿರ್ಧರಿಸಿದೆ" ಎನ್ನುತ್ತಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನು ಹಾಡುಗಳಷ್ಟೇ ಬಾಕಿ ಉಳಿದಿವೆಯಂತೆ.
'ರಿಲ್ಯಾಕ್ಸ್ ಸತ್ಯ' ಸಿನೆಮಾಗೆ ಪ್ರಭು ನಾಯಕ ನಟ. 'ಕೆಂಡಸಂಪಿಗೆ', 'ಟಗರು' ಸಿನೆಮಾಗಳಲ್ಲಿ ನಟಿಸಿರುವ ಮಾನ್ವಿತಾ, ಈ ಸಿನೆಮಾದ ಚಿತ್ರೀಕರಣ 'ಕೆಂಡಸಂಪಿಗೆ' ದಿನಗಳನ್ನು ನೆನಪಿಸಿದ್ದಾಗಿ ತಿಳಿಸುತ್ತಾರೆ. "ಸೆಟ್ ನಲ್ಲಿ ಕೆಲವೇ ಜನರಿದ್ದರು. ಇದು ಸಣ್ಣ ಬಜೆಟ್ ಚಿತ್ರ. ವಿಷಯ ತಾಜಾತನದಿಂದ ಕೂಡಿದೆ. ಮತ್ತೆ ವೃತ್ತಿಜೀವನ ಪ್ರಾರಂಭಿಸಿದ ಭಾವನೆ ಮೂಡಿದೆ. ಹಾಸ್ಯಮಯವಾಗಿರುವ ಕ್ರೈಮ್ ಥ್ರಿಲ್ಲರ್ ಭಾಗವಾಗಿರುವುದಕ್ಕೆ ಉತ್ಸುಕಳಾಗಿದ್ದೇನೆ. ನಾನು 'ಬಿಗ್ ಬ್ಯಾಂಗ್ ಥಿಯರಿ' ಇಂಗ್ಲಿಷ್ ಧಾರಾವಾಹಿಯ ಅತಿ ದೊಡ್ಡ ಅಭಿಮಾನಿ. ಇದು ಕೂಡ ನಗೆಯ ದಂಗೆಯನ್ನು ಎಬ್ಬಿಸಲಿದೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


