ಸಿನಿಮಾ ಸುದ್ದಿ

ಭಾವ ಪ್ರೇಮ್ ನಿಂದ ಸಿನೆಮಾ ಪಾಠಗಳನ್ನು ಪಡೆಯುತ್ತಿರುವ ಅಭಿಷೇಕ್!

ತಾಯಿ ಮಮತಾ ರಾವ್, ಸಹೋದರಿ ರಕ್ಷಿತಾ ಮತ್ತು ಭಾವ ಪ್ರೇಮ್ ಹೀಗೆ ನಟನೆಯ ಕುಟುಂಬದಿಂದ ಹೊರಹೊಮ್ಮುತ್ತಿರುವ ಹೊಸಪ್ರತಿಭೆ ಅಭಿಷೇಕ್ ರಾವ್, 'ದ ವಿಲನ್' ಸೆಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾವ ಪ್ರೇಮ್ ನಿಂದ ಸಿನೆಮಾ ಪಾಠಗಳನ್ನು ಪಡೆಯುತ್ತಿರುವ ಅಭಿಷೇಕ್!
ಅಭಿಷೇಕ್ ರಾವ್
Published On :
ಬೆಂಗಳೂರು: ತಾಯಿ ಮಮತಾ ರಾವ್, ಸಹೋದರಿ ರಕ್ಷಿತಾ ಮತ್ತು ಭಾವ ಪ್ರೇಮ್ ಹೀಗೆ ನಟನೆಯ ಕುಟುಂಬದಿಂದ ಹೊರಹೊಮ್ಮುತ್ತಿರುವ ಹೊಸಪ್ರತಿಭೆ ಅಭಿಷೇಕ್ ರಾವ್, 'ದ ವಿಲನ್' ಸೆಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಅವರಿಗೆ ಸಹಾಯಕರಾಗಿ ದುಡಿಯುತ್ತಿರುವುದಲ್ಲದೆ ನಟರಾದ ಶಿವರಾಜ್ ಕುಮಾರ್ ಹಾಗು ಸುದೀಪ್ ಅವರಿಂದ ಸಾಕಷ್ಟು ಸಲಹೆಗಳನ್ನು ಕೂಡ ಪಡೆಯುತ್ತಿದ್ದಾರೆ. 
ನ್ಯೂಯಾರ್ಕ್ ಫಿಲಂ ಇನ್ಸ್ಟಿಟ್ಯೂಟ್ ನ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ನ ನಟನ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅಭಿಶೇಕ್ ಈ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದನ್ನು ಸಹೋದರಿ ರಕ್ಷಿತಾ ಧೃಢೀಕರಿಸುತ್ತಾರೆ. "ಈಗ ಕ್ಯಾಮರಾ ಮುಂದೆ ನಿಂತು ಅಗತ್ಯವಾದ ಪಾಠಗಳನ್ನು ಕಲಿಯುತ್ತಿದ್ದಾನೆ. 'ದ ವಿಲನ್' ಸೆಟ್ ನಲ್ಲಿ ಅಭಿಷೇಕ್, ಸುದೀಪ್ ಅವರ ಸಾಲುಗಳನ್ನು ನಟಿಸುವ ಮೂಲಕ ತರಬೇತಿ ಪಡೆಯುತ್ತಿದ್ದಾನೆ  ಕೂಡ. ಸುದೀಪ್ ಕೂಡ ಇದಕ್ಕೆ ಸಹಕರಿಸುತ್ತಿದ್ದು, ಅಭಿಷೇಕ್ ವೃತ್ತಿಜೀವನದಲ್ಲಿ ಇದು ಸಹಕರಿಸಲಿದೆ" ಎನ್ನುತ್ತಾರೆ. 
ಅಭಿಷೇಕ್ ತಮ್ಮ ವೃತ್ತಿಯನ್ನು ಬದಲಿಸಲು ಇಚ್ಛಿಸಿದಾಗ ಕುಟುಂಬದಿಂದ ಸಾಕಷ್ಟು ಬೆಂಬಲ ದೊರಕಿತು ಎಂದು ತಿಳಿಸುವ ರಕ್ಷಿತಾ "ನಟನೆಗೆ ಬರುವುದು ಅಭಿಯ ಆಸೆಯಾಗಿತ್ತು ಮತ್ತು ಇದಕ್ಕೆ ನಮ್ಮೆಲ್ಲರ ಬೆಂಬಲ ಇದೆ. ಅವನು ಸಾಮಾನ್ಯ ವಿದ್ಯಾರ್ಥಿಯಾಗಿರಲಿಲ್ಲ ಮತ್ತು ಪರೀಕ್ಷೆಗಳಲ್ಲಿ ಒಳ್ಳೆಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದ. ಅವನ ಗೆಳೆಯರಂತೆ ವಿದೇಶದಲ್ಲಿ ಎಂಬಿಎ ಮಾಡುವ ಕನಸು ನಮ್ಮದಾಗಿತ್ತು ಆದರೆ ಅವನು ನಟನೆಯನ್ನು ಆಯ್ಕೆ ಮಾಡಿಕೊಂಡ. ಕುಟುಂಬದವರು ಯಾರಾದರೂ ಸಿನೆಮಾ ರಂಗದಲ್ಲಿ ಇರದ ಹೊರತು ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಶಾಲೆಯಲ್ಲಿ ಕಲಿಯುವ ಅವಾಕಾಶ ಸಿಗುವುದಿಲ್ಲ. ರಣಬೀರ್ ಕಪೂರ್, ಆಲ್ ಪಚಿನೋ ಮುಂತಾದವರು ಕಲಿತ ಶಾಲೆ ಅದು" ಎನ್ನುತ್ತಾರೆ ನಟಿ-ನಿರ್ಮಾಪಕಿ. 
'ದ ವಿಲನ್' ಸಿನೆಮಾ ಸೆಟ್ ನಲ್ಲಿ ಪ್ರೇಮ್ ಅವರಿಗೆ ಸಹಾಯ ಮಾಡುತ್ತಾ ಒಳ್ಳೆಯ ಸಮಯವನ್ನು ಕಳೆಯುತ್ತಿರುವುದಾಗಿ ತಿಳಿಸುವ ಅಭಿ "ಇದು ಅದ್ಭುತ ಅನುಭವ. ಸೂಪರ್ ನಟರಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಇವರುಗಳಿಂದ ಕಲಿಯುವ ಅವಕಾಶ ಸಿಗುತ್ತಿದೆ" ಎನ್ನುತ್ತಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.