ಸಿನಿಮಾ ಸುದ್ದಿ

ಶುಕ್ರವಾರದಿಂದ ತಮಿಳುನಾಡು ರೂಪದರ್ಶಿ ನಾಪತ್ತೆ: ಆನ್ ಲೈನ್ ನಲ್ಲಿ ವ್ಯಾಪಕ ಶೋಧ

ತಮಿಳುನಾಡಿನ ಮಾಡೆಲ್ 28 ವರ್ಷದ ಗಾನಂ ನಾಯರ್‌ ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದು, ಪೊಲೀಸರಿಗೂ ಇದುವರೆಗೂ...

ಶುಕ್ರವಾರದಿಂದ ತಮಿಳುನಾಡು ರೂಪದರ್ಶಿ ನಾಪತ್ತೆ:  ಆನ್ ಲೈನ್ ನಲ್ಲಿ ವ್ಯಾಪಕ ಶೋಧ
ಗಾನಂ ನಾಯರ್
Published On :
ಚೆನ್ನೈ: ತಮಿಳುನಾಡಿನ ಮಾಡೆಲ್ 28 ವರ್ಷದ ಗಾನಂ ನಾಯರ್‌ ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದು, ಪೊಲೀಸರಿಗೂ ಇದುವರೆಗೂ ಸುಳಿವು ಸಿಕ್ಕಿಲ್ಲ.
ಚೆನ್ನೈನಲ್ಲಿ  ಸಲೂನ್ ವೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಗಾನಂ ನಾಯರ್‌ ಮೇ 26ರಂದು ವಿರುಗಂಬಾಕ್ಕಂನ ತಮ್ಮ ನಿವಾಸದಿಂದ ಹೋಂಡಾ ಆಕ್ವಿವಾದಲ್ಲಿ ಹೊರ ಹೋದವರು ನಾಲ್ಕು ದಿನಗಳಾದ್ರೂ ಮನೆಗೆ ಹಿಂತಿರುಗಿಲ್ಲ. 
ದೆಹಲಿ ಮೂಲದ ಗಾನಂ ಚೆನ್ನೈನಲ್ಲಿ ತಮ್ಮ ಸಂಬಂಧಿಗಳ ಜೊತೆ ವಾಸಿಸುತ್ತಿದ್ದರು. ನಾಲ್ಕು ದಿನಗಳಾದ್ರೂ ಪತ್ತೆ ಆಗದ ಹಿನ್ನೆಲೆಯಲ್ಲಿ ಕುಟುಂಬದವರು, ಆಪ್ತರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. 
ನಾಗಂ ನಾಯರ್‌ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದ್ದು, ಗಾಬರಿಗೊಂಡು ಸಂಬಂಧಿಕರು ಇಲ್ಲಿನ ಕೆಕೆ ನಗರ್‌ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದಾರೆ. 
ನಾಗಂ ಗೆಳತಿಯೊಬ್ಬರು ಗಾನಂ ನಾಪತ್ತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಗಾನಂ ಅವರಿಗೆ ಆರೋಗ್ಯ ಸಮಸ್ಯೆಗಳಿತ್ತು ಹಾಗೆಯೇ ವೈವಾಹಿಕ ಜೀವನದ ಸಮಸ್ಯೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.