ಸಿನಿಮಾ ಸುದ್ದಿ

ಸಾಮಾಜಿಕ ಜಾಲತಾಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ದೊಡ್ಡ ತಪ್ಪು: ರಾಮ್ ಗೋಪಾಲ್ ವರ್ಮಾ

ಸಾಮಾಜಿಕ ಜಾಲತಾಣಗಳು ಕೇವಲ ಗಮನ ಸೆಳೆಯುವುದಕ್ಕೆ ಅಷ್ಟೇ ಅವುಗಳನ್ನು ಯಾವುದೇ ಹಂತದಲ್ಲೂ ಗಂಭೀರವಾಗಿ ಪರಿಗಣಿಸಬಾರದು ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಶನಿವಾರ ಹೇಳಿದ್ದಾರೆ...

ಸಾಮಾಜಿಕ ಜಾಲತಾಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ದೊಡ್ಡ ತಪ್ಪು: ರಾಮ್ ಗೋಪಾಲ್ ವರ್ಮಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Published On :
ಮುಂಬೈ: ಸಾಮಾಜಿಕ ಜಾಲತಾಣಗಳು ಕೇವಲ ಗಮನ ಸೆಳೆಯುವುದಕ್ಕೆ ಅಷ್ಟೇ ಅವುಗಳನ್ನು ಯಾವುದೇ ಹಂತದಲ್ಲೂ ಗಂಭೀರವಾಗಿ ಪರಿಗಣಿಸಬಾರದು ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಶನಿವಾರ ಹೇಳಿದ್ದಾರೆ. 
ವೆಬ್ ಸೀರಿಸ್ 'ಗನ್ಸ್ ಆ್ಯಂಡ್ ಥಿಗ್ಸ್' ನ ಟೀಸರ್-ಟ್ರೈಲರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅವರು, ಸಾಮಾಜಿಕ ಜಾಲತಾಣಗಳು ಕೇವಲ ಗಮನ ಸೆಳೆಯುವ ವೇದಿಕೆಯಷ್ಟೇ. ಇಂತಹ ವೇದಿಕೆಯನ್ನು ಗಂಭೀರವಾಗಿ ಪರಿಗಣಿಸಿದರೆ ಅದು ನಿಜಕ್ಕೂ ತಪ್ಪ. ನಮ್ಮಲ್ಲಿ ಪ್ರಜಾಪ್ರಭುತ್ವಿದೆ. ಪ್ರತೀಯೊಬ್ಬರಿಗು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಹಕ್ಕಿದೆ. ಸಾಮಾಜಿಕ ಜಾಲತಾಣಗಳು ಈ ದನಿಗಳು ಇದಕ್ಕೆ ವೇದಿಕೆಯಾಗಿದೆ. ಅಭಿಪ್ರಾಯಗಳನ್ನು ಹಾಗೂ ಅನಿಸಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಜನರು, ವ್ಯಕ್ತಿಗಳನ್ನು ಬ್ಲಾಕ್ ಮಾಡಬಹುದು. ಸಾಮಾಜಿಕ ಜಾಲತಾಣ ಕೇವಲ ಗೀಚುಬರಹವಷ್ಟೇ ಎಂದು ಹೇಳಿದ್ದಾರೆ. 
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಬರೆಯುತ್ತಿದ್ದಾರೆ. ಅಂತರ ಜನರು ಅವರ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆಷ್ಟೇ. ಅಂತಹುದ್ದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ತಮ್ಮ ಚಿತ್ರಗಳಲ್ಲಿ ಹೊಸ ನಟರನ್ನು ಪರಿಚಯಿಸುವುದರ ಕುರಿತಂತೆ ಮಾತನಾಡಿರುವ ಅವರು, ವಾಸ್ತವತೆಯ ನೈಜತೆಯನ್ನು ನೋಡುವುದಕ್ಕೆ ನಾನು ಬಯಸುತ್ತೇನೆ. ಗೊತ್ತಿರುವ ನಟ-ನಟಿಯರನ್ನು ಹಾಕಿದರೆ, ಜನರು ಪಾತ್ರವನ್ನು ನೋಡುವುದರ ಬದಲು ನಟರನ್ನಷ್ಟೇ ಗಮನಿಸುತ್ತಾರೆ. ಪ್ರಸಿದ್ಧಿಗೊಂಡಿರುವ ನಟ-ನಟಿಯರು ಇತರೆ ಸಿನಿಮಾಗಳಲ್ಲೂ ನೋಡಿರುತ್ತಾರೆ. ಆದರೆ, ಹೊಸಬರನ್ನು ಪರಿಚಯಿಸಿದಾಗ ಜನರು ಪಾತ್ರವನ್ನು ಗಮನಿಸಲು ಆರಂಭಿಸುತ್ತಾರೆ. ಸತ್ಯದಲ್ಲಿ ಚಿತ್ರದಲ್ಲಿ ಆಗಿದ್ದು ಕೂಡ ಇದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.