ಚೈನಾದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨'
ಜಾಗತಿಕ ಬಾಕ್ಸ್ ಆಫೀಸ್ ಅನ್ನು ಗೆದ್ದ ಮೇಲೆ ಈಗ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ೨: ಅಂತ್ಯ' ಚೈನಾದಾದ್ಯಂತ ಬಿಡುಗಡೆ ಕಾಣಲು ಸಿದ್ಧವಾಗಿದೆ.
Published On :
ನವದೆಹಲಿ: ಜಾಗತಿಕ ಬಾಕ್ಸ್ ಆಫೀಸ್ ಅನ್ನು ಗೆದ್ದ ಮೇಲೆ ಈಗ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ೨: ಅಂತ್ಯ' ಚೈನಾದಾದ್ಯಂತ ಬಿಡುಗಡೆ ಕಾಣಲು ಸಿದ್ಧವಾಗಿದೆ.
ಬಾಲಿವುಡ್ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು "ಬಾಹುಬಲಿ ೨ ಚೈನಾ ಬಿಡುಗಡೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು... ಅಪ್ಡೇಟ್: ಚೈನಾದಲ್ಲಿ ಬಿಡುಗಡೆ ಮಾಡುವ ಯೋಜನೆಯ ಮಾತುಕತೆಯನ್ನು ಬಾಹುಬಲಿ ೨ ನಿರ್ಮಾಪಕರು ಪ್ರಾರಂಭಿಸಿದ್ದಾರೆ" ಎಂದಿದ್ದಾರೆ.
ಬಿಡುಗಡೆಗೆ ಯಾವುದೇ ದಿನಾಂಕರವನ್ನು ಇನ್ನು ನಿರ್ಧರಿಸಿಲ್ಲ ಎಂದು ಕೂಡ ಅವರು ತಿಳಿಸಿದ್ದು, ಆದಷ್ಟು ಬೇಗೆ ಬಿಡುಗಡೆ ಮಾಡಲು ನಿರ್ಮಾಪಕರು ಎದುರು ನೋಡುತ್ತಿದ್ದಾರೆ ಎಂದಷ್ಟೇ ಹೇಳಿದ್ದಾರೆ.
ಇತ್ತೀಚೆಗಷ್ಟೇ ಚೈನಾದಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನೆಮಾ 'ದಂಗಾಲ್' ಬಾಕ್ಸ್ ಆಫಿಸ್ ನಲ್ಲಿ ಅಭೂತಪೂರ್ವ ಗಳಿಕೆ ಕಂಡಿತ್ತು. ೯೦೦೦ ತೆರೆಗಳಲ್ಲಿ ಬಿಡುಗಡೆಯಾಗಿದ್ದ 'ದಂಗಾಲ್' ಚೈನಾದಲ್ಲಿಯೇ 778 ಕೋಟಿ ರೂ ಗಳಿಸಿತ್ತು. ಅದರ ಜಾಗತಿಕ ಗಳಿಕೆ ೧೪೭೧ ಕೋಟಿ ರೂ.
ಚೈನಾದಲ್ಲಿ ಹೊರತುಪಡಿಸಿ ವಿಶ್ವದಾದ್ಯಂತ ೧೫೦೦ ಕೋಟಿಗಿಂತಲೂ ಹೆಚ್ಚು ಗಳಿಕೆ ಕಂಡ ಮೊದಲ ಭಾರತೀಯ ಸಿನೆಮಾ ಬಾಹುಬಲಿ೨ ಎಂಬ ಹೆಗ್ಗಳಿಕೆ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

