ಟೆಕ್ಕಿಗಳು ನಿರ್ಮಿಸಿದ ಕನ್ನಡದ ಚಿತ್ರ 'ಡೇಸ್ ಆಫ್ ಬೊರಾಪುರ್'
ಕನ್ನಡದ ಹಿಟ್ ಚಿತ್ರ ಲೂಸಿಯಾ ಮಾದರಿಯಲ್ಲಿ ಮತ್ತೊಂದು ಚಿತ್ರ 'ಡೇಸ್ ಆಫ್ ಬೊರಾಪುರ'...

Published On :
ಬೆಂಗಳೂರು:ಕನ್ನಡದ ಹಿಟ್ ಚಿತ್ರ ಲೂಸಿಯಾ ಮಾದರಿಯಲ್ಲಿ ಮತ್ತೊಂದು ಚಿತ್ರ 'ಡೇಸ್ ಆಫ್ ಬೊರಾಪುರ್' ಜೂನ್ ಅಂತ್ಯಕ್ಕೆ ಬಿಡುಗಡೆಯಾಗಲು ಸಿದ್ಧವಾಗಿದೆ.
6 ತಿಂಗಳ ಹಿಂದೆ ಹಲವರು ಬಂಡವಾಳ ಹೂಡಿ ಚಿತ್ರ ನಿರ್ಮಾಣ ಆರಂಭಿಸಿದ್ದರು. ಚಿತ್ರ ಪ್ರಾರಂಭಕ್ಕೆ ಮುನ್ನ ಸುಮಾರು 200 ಮಂದಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದೆವು ಎನ್ನುತ್ತಾರೆ ಚಿತ್ರದ ಇಬ್ಬರು ನಿರ್ಮಾಪಕರಲ್ಲಿ ಒಬ್ಬರಾದ ಮಧು ಬಸವರಾಜ್.
ಮಧು ಮತ್ತು ಮತ್ತೊಬ್ಬ ನಿರ್ಮಾಪಕರಾದ ಅಜಿತ್ ಕುಮಾರ್ ಗಡ್ಡಿ ಹೆಚ್ಚಿನ ಬಂಡವಾಳ ಹಾಕಿದ್ದರೆ ಇನ್ನು ಕೆಲವು ಸಿನಿಮಾ ಪ್ರಿಯರು ಕೂಡ ಹಣ ಹೂಡಿದ್ದಾರೆ. ಸುಮಾರು 15 ಮಂದಿ ಹಣ ಹಾಕಿದ್ದಾರೆ. ಅವರಲ್ಲಿ ಸುಮಾರು 10 ಜನ ಟೆಕ್ಕಿಗಳು.ಇವರಲ್ಲಿ ಅನೇಕರು ನಮ್ಮ ಚಿತ್ರದ ಪರಿಕಲ್ಪನೆಯನ್ನು ನಂಬಿ ಹಣ ಹೂಡಿದ್ದಾರೆ ಎನ್ನುತ್ತಾರೆ ಮಧು.
ಚಿತ್ರದ ಸಂಗೀತ ರಚನೆಕಾರ ವಿವೇಕ್ ಚಕ್ರವರ್ತಿ ಮಾಜಿ ಟೆಕ್ಕಿ. 6 ವರ್ಷಗಳ ಹಿಂದೆ ಸಿನಿಮಾ ಮೇಲಿನ ಪ್ರೀತಿಯಿಂದ ಕೆಲಸ ಬಿಟ್ಟರು.
ಸ್ ಆಫ್ ಬೊರಾಪುರ್ ಕರ್ನಾಟಕದ ಬೊರಾಪುರ ಗ್ರಾಮದಲ್ಲಿ ಚಿತ್ರಿಸಲಾಗಿದೆ. ಗ್ರಾಮೀಣ ಸಾಮಾನ್ಯ ನಾಗರಿಕರ ಸಂತಸದ ಜೀವನದ ಸುತ್ತ ಕಥೆ ಸಾಗುತ್ತದೆ. ಹಳ್ಳಿಯ ಸಹಜ ಜೀವನದಲ್ಲಿ ಸಾಗುತ್ತಿದ್ದ ಜನತೆಯಲ್ಲಿ ವಿದೇಶಿಯರ ಆಗಮನ ಹೇಗೆ ತಲ್ಲಣವನ್ನುಂಟುಮಾಡಿತು ಎಂಬುದರ ಕುರಿತು ಕಥೆ ಸಾಗುತ್ತದೆ.
ಸ್ ಆಫ್ ಬೊರಾಪುರ್ ವಿಭಿನ್ನ ಚಿತ್ರವಾದರೂ ಕೂಡ ಹಿಂದಿಯ ಲಗಾನ್ ಚಿತ್ರದ ಭಾವನೆ ತರಿಸುತ್ತದೆ. ಪ್ರಯೋಗಾತ್ಮಕ ಚಿತ್ರವಾಗಿರುವ ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ ಎನ್ನುತ್ತಾರೆ ಮಧು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


