ನಿಖಿಲ್ ಮುಂದಿನ ಸಿನೆಮಾದಲ್ಲಿ ಸುಧಾರಾಣಿ ಮತ್ತು ಸಾಯಿಕುಮಾರ್
ಚೇತನ್ ಕುಮಾರ್ ನಿರ್ದೇಶಿಸಲಿರುವ ನಿಖಿಲ್ ಕುಮಾರ್ ಅವರ ಎರಡನೇ ಸಿನೆಮಾದ ಚಿತ್ರೀಕರಣ ಜೂನ್ ೫ ಕ್ಕೆ ಪ್ರಾರಂಭವಾಗಲಿದೆ. ಚಿತ್ರೀಕರಣಕ್ಕಾಗಿ ತಾಣಗಳ ಹುಡುಕಾಟದಲ್ಲಿರುವ ತಂಡ ದುಬೈ,

Published On :
ಬೆಂಗಳೂರು: ಚೇತನ್ ಕುಮಾರ್ ನಿರ್ದೇಶಿಸಲಿರುವ ನಿಖಿಲ್ ಕುಮಾರ್ ಅವರ ಎರಡನೇ ಸಿನೆಮಾದ ಚಿತ್ರೀಕರಣ ಜೂನ್ ೫ ಕ್ಕೆ ಪ್ರಾರಂಭವಾಗಲಿದೆ. ಚಿತ್ರೀಕರಣಕ್ಕಾಗಿ ತಾಣಗಳ ಹುಡುಕಾಟದಲ್ಲಿರುವ ತಂಡ ದುಬೈ, ಹಾಂಗ್ಕಾಂಗ್ ಮತ್ತು ಬ್ಯಾಂಗ್ಕಾಕ್ ಗೆ ತ್ವರಿತ ಭೇಟಿ ನೀಡಿ ಅಲ್ಲಿ ಸಿನಿಮಾಗಾಗಿ ವಸ್ತ್ರಗಳ ಖರೀದಿ ನಡೆಸಿದೆಯಂತೆ.
ದೊಡ್ಡ ದೊಡ್ಡ ನಟರ ತಾರಾದಂಡೆ ನೆರೆಯಲಿದೆ ಎನ್ನಲಾಗಿರುವ ಈ ಸಿನೆಮಾಗೆ ಈಗ ಸುಧಾರಾಣಿ ಮತ್ತು ಸಾಯಿಕುಮಾರ್ ಹೊಸ ಸೇರ್ಪಡೆ. ಇನ್ನು ಹೆಸರಿಡದ ಈ ಚಿತ್ರದ ವಿವರಗಳನ್ನು ಚಿತ್ರತಂಡ ತಿಳಿಸಿಲ್ಲವಾದರೂ, ಇವರಿಬ್ಬರಿಗೂ ಪ್ರಮುಖ ಪಾತ್ರ ಇರಲಿದೆ ಎನ್ನಲಾಗಿದೆ.
ಈ ಸಿನೆಮಾದ ಮೂಲಕ ನಿಖಿಲ್ ಎದುರು ನಟಿಸಲಿರುವ ರಿಯಾ ನಾಲ್ವಡೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧುಕೋಕಿಲ ಕೂಡ ಸಿನೆಮಾದಲ್ಲಿ ನಟಿಸುತ್ತಿದ್ದು, ಉಳಿದ ನಟರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಚಿತ್ರತಂಡ. ವಿ ಹರಿಕೃಷ್ಣ ಸಂಗೀತ ನೀಡಲಿದ್ದು, ಶ್ರೀಶ ಕುಡುವಲ್ಲಿ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


