ಸಿನಿಮಾ ಸುದ್ದಿ

ಬಾಹುಬಲಿ-2 ಇದುವರೆಗೂ ಯಾವುದೇ ದಾಖಲೆ ಮಾಡಿಲ್ಲ: ನಿರ್ದೇಶಕ ಅನಿಲ್ ಶರ್ಮಾ

ಬಿಡುಗಡೆಯಾದ ದಿನದಿಂದ ಹಲವು ದಾಖಲೆಗಳನ್ನು ಮುರಿದು ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ-2 ಸಿನಿಮಾ ಬಗ್ಗೆ ನಿರ್ದೇಶಕ ಅನಿಲ್ ಶರ್ಮಾ .

ಬಾಹುಬಲಿ-2 ಇದುವರೆಗೂ ಯಾವುದೇ ದಾಖಲೆ ಮಾಡಿಲ್ಲ: ನಿರ್ದೇಶಕ ಅನಿಲ್ ಶರ್ಮಾ
ಅನಿಲ್ ಶರ್ಮಾ
Published On :
ಮುಂಬಯಿ: ಬಿಡುಗಡೆಯಾದ ದಿನದಿಂದ ಹಲವು ದಾಖಲೆಗಳನ್ನು ಮುರಿದು ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ-2 ಸಿನಿಮಾ ಬಗ್ಗೆ ನಿರ್ದೇಶಕ ಅನಿಲ್ ಶರ್ಮಾ ಮಾತನಾಡಿದ್ದಾರೆ.
ಬಾಹುಬಲಿ-2 ಸಿನಿಮಾ ಇದುವರೆಗೂ ಯಾವುದೇ ಹೊಸ ದಾಖಲೆಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಗದಾರ್: ಏಕ್ ಪ್ರೇಮ್ ಕಥಾ, ಅಪ್ನೆ ಸೇರಿದಂತೆ ಹಲವು ಹಿಟಿ ಫಿಲ್ಮ್ ಗಳನ್ನು ನೀಡಿರುವ ಅನಿಲ್ ಶರ್ಮಾ, 1 ಸಾವಿರ ಕೋಟಿ ಗಳಿಕೆ ದೊಡ್ಡ ದಾಖಲೆಯಲ್ಲ, ಇದೊಂದು ಸಮಯ ಅಷ್ಟೆ ಎಂದು ಹೇಳಿದ್ದಾರೆ.
ಗದಾರ್: ಏಕ್ ಪ್ರೇಮ್ ಕಥಾ ಸಿನಿಮಾ ಬಿಡುಗೆಡಯಾದಾಗ 265 ಕೋಟಿ ರು ಹಣಗಳಿಸಿತ್ತು. ಆ ಮೊತ್ತವನ್ನು ಇಂದಿನ ದರಕ್ಕೆ ಲೆಕ್ಕಾಚಾರ ಮಾಡಿದರೇ 5 ಸಾವಿರ ಕೋಟಿ ರು ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 
ಗದಾರ್ ಸಿನಿಮಾ 2001 ರಲ್ಲಿ ರಿಲೀಸ್ ಆಗಿತ್ತು, ಅಂದು ಟಿಕೆಟ್ ಬೆಲೆ 25 ರು ಮಾತ್ರ ಇತ್ತು. ಬಾಹುಬಲಿ -2 ಸಿನಿಮಾ 1.500 ಕೋಟಿ ಗಳಿಸಿರುವುದು ಯಾವುದೇ ಹೊಸ ದಾಖಲೆಯಲ್ಲ ಎಂದು ಹೇಳಿದ್ದಾರೆ. 
ತಮ್ಮ ಪುತ್ರ ಉತ್ಕರ್ಷ್ ಅಭಿನಯದ ಜೀನಿಯಸ್ ಸಿನಿಮಾದ ಮೂಹೂರ್ಥ ಸಮಾರಂಭದಲ್ಲಿ ಅನಿಲ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.