'ಬಾಹುಬಲಿ ೨' ೨೦೦೦ ಕೋಟಿ ರೂ ಗಳಿಕೆ ದಾಟುವ ಭರವಸೆ ವ್ಯಕ್ತಪಡಿಸಿದ ಎ ಆರ್ ರಹಮಾನ್
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨: ಅಂತ್ಯ' ಬಾಕ್ಸ್ ಆಫೀಸ್ ನಲ್ಲಿ ೨೦೦೦ ಕೋಟಿ ರೂ ಗಳಿಕೆ ದಾಟಲಿ ಎಂದು ಎರಡು ಬಾರಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಸೋಮವಾರ

Published On :
ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨: ಅಂತ್ಯ' ಬಾಕ್ಸ್ ಆಫೀಸ್ ನಲ್ಲಿ ೨೦೦೦ ಕೋಟಿ ರೂ ಗಳಿಕೆ ದಾಟಲಿ ಎಂದು ಎರಡು ಬಾರಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಸೋಮವಾರ ಹಾರೈಸಿದ್ದಾರೆ.
ಇಲ್ಲಿಯವರೆಗೂ ೧೫೦೦ ಕೋಟಿ ರುಗಳಿಗೂ ಹೆಚ್ಚು ಗಳಿಸಿರುವ 'ಬಾಹುಬಲಿ ೨' ದಾಖಲೆ ನಿರ್ಮಿಸಿ, ವೇಗವಾಗಿ ಮುನ್ನುಗ್ಗಿದೆ.
"ರಾಜಮೌಳಿ, ಕೀರವಾಣಿ ಮತ್ತು ಇಡೀ 'ಬಾಹುಬಲಿ೨' ತಂಡಕ್ಕೆ: ಈಗಷ್ಟೇ ಚೆನ್ನೈನಲ್ಲಿ ಸಿನೆಮಾ ನೋಡಿ ಮುಗಿಸಿದೆ. ಬಾಕ್ಸ್ ಆಫೀಸ್ ನಲ್ಲಿ ೨೦೦೦ ಕೋಟಿ ರೂ ಗಳಿಕೆ ದಾಟುವ ಭರವಸೆ ನನಗಿದೆ" ಎಂದು ರಹಮಾನ್ ಫೇಸ್ಬುಕ್ ಪುಟದಲ್ಲಿ ಬರೆದಿದ್ದಾರೆ.
"ದಕ್ಷಿಣ ಭಾರತದ ಚಿತ್ರರಂಗವನ್ನು ವಿಶ್ವದ ಮುಂದೆ ತೆರೆದಿಟ್ಟು ಅದಕ್ಕೆ ಹೊಸ ಅಸ್ಮಿತೆಯನ್ನು ನೀವು ನೀಡಿದಿರಿ" ಎಂದು ಕೂಡ ಅವರು ಬರೆದಿದ್ದಾರೆ.
ಪ್ರಭಾಸ್, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿರುವ ಈ ಸಿನೆಮಾ ಜಗತ್ತಿನಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


