ಸಿನಿಮಾ ಸುದ್ದಿ

ಇಶಾನ್ ಮುಂದಿನ ಸಿನೆಮಾ 'ಪಿಚ್ಚೈಕ್ಕಾರನ್' ರಿಮೇಕ್?

ಇಶಾನ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದವರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬಂದಿದ್ದ ಈ

ಇಶಾನ್ ಮುಂದಿನ ಸಿನೆಮಾ 'ಪಿಚ್ಚೈಕ್ಕಾರನ್' ರಿಮೇಕ್?
ಇಶಾನ್
Published On :
ಬೆಂಗಳೂರು: ಇಶಾನ್ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದವರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬಂದಿದ್ದ ಈ ಸಿನೆಮಾ ನಿರೀಕ್ಷಿತ ಮಟ್ಟಕ್ಕೆ ಸದ್ದು ಮಾಡಲು ವಿಫಲವಾಯಿತು. ಈಗ ನಟ ಮುಂದಿನ ಸಿನೆಮಾಗೆ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದ್ದು, ತಮಿಳು ಹಿಟ್ ಚಲನಚಿತ್ರ 'ಪಿಚ್ಚೈಕ್ಕಾರನ್'ನ ರಿಮೇಕ್ ನಲ್ಲಿ ನಟಿಸುವುದನ್ನು ಪರಿಗಣಿಸಿದ್ದಾರೆ ಎನ್ನಲಾಗಿದೆ. ಸಸಿ ನಿರ್ದೇಶನದ ಈ ತಮಿಳು ಸಿನೆಮಾದಲ್ಲಿ ವಿಜಯ್ ಆಂಟನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 
ಈ ಸಿನೆಮಾದ ರಿಮೇಕ್ ಹಕ್ಕುಗಳು ಸದ್ಯಕ್ಕೆ ದ್ವಾರಕೀಶ್ ಅವರ ಪುತ್ರ ಯೋಗಿಯವರ ಬಳಿಯಿದ್ದು, ಇದನ್ನು ಅವರೇ ನಿರ್ಮಿಸಲಿದ್ದಾರೆಯೇ ಅಥವಾ ನಟನ ಸಹೋದರ ಸಂಬಂಧಿ ಸಿ ಆರ್ ಮನೋಹರ್ ಅವರ ಒಡೆತನದ ತನ್ವಿ ಪ್ರೊಡಕ್ಷನ್ಸ್ ಸಂಸ್ಥೆಗೆ ಮಾರಲಿದ್ದಾರೆಯೇ ಎಂದು ತಿಳಿಯಬೇಕಿದೆ. ಈ ಸಿನೆಮಾವನ್ನು ಮೊದಲಿಗೆ ಕೃಷ್ಣ ಅಜಯ್ ರಾವ್ ಜೊತೆ ಮಾಡಬೇಕಿತ್ತು ಆದರೆ ಇದರ ಬಗ್ಗೆ ಯಾವ ಧೃಢೀಕರಣ ಸಿಕ್ಕಿಲ್ಲ. 
ಮೂಲಗಳು ತಿಳಿಸುವ ಪ್ರಕಾರ "ಸಿನೆಮಾ ನೋಡಿದ ಇಶಾನ್ ಕಥೆಗೆ ಮಾರುಹೋಗಿದ್ದಾರೆ, ತಾಯಿ ಕೋಮಾದಿಂದ ಹೊರಬರಲು ನಾಯಕನಟ ಬಿಕ್ಷುಕನಾಗಿ ಬೇಡುವ ಭಾಗ ಅವರಿಗೆ ಬಹಳ ಇಷ್ಟವಾಗಿದೆ" ಎನ್ನುತ್ತವೆ. 
ಪಿಚ್ಚೈಕಾರನ್ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಈಗ ಕನ್ನಡ ಅವತಾರಿಣಿಕೆಗೆ ನಿರ್ದೇಶಕ, ತಾರಾಗಣ ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಬೇಕಿದೆ. ಮುಂದಿನ ಎರಡು ವಾರಗಳಲ್ಲಿ ಈ ಕೆಲಸ ಮುಗಿಯಲಿದ್ದು ಜುಲೈ ಅಂತ್ಯಕ್ಕೆ ಸಿನೆಮಾ ಚಿತ್ರೀಕರಣ ಪ್ರಾರಂಭಿಸಲಿದೆ ಎನ್ನಲಾಗಿದೆ. 
ಈಮಧ್ಯೆ ಮತ್ತೊಂದು ತೆಲುಗು ಸಿನೆಮಾಗೆ ನಟ ಸಿದ್ಧನಾಗುತ್ತಿದ್ದು, ವಿಜಯ್ ಕುಮಾರ್ ಕೊಂಡ ಅವರ ನಿರ್ದೇಶನದಲ್ಲಿ ನಟಿಸಲಿದ್ದಾರಂತೆ. ವಿಜಯ್ ತಮ್ಮ ಸಿನೆಮಾಗಳಾದ 'ಒಕ ಲೈಲಾ ಕೋಸಂ', 'ಗುಂಡೆ ಜಾರಿ ಗಲ್ಲಂತಾಯಿಂದೆ' ಸಿನೆಮಾಗಳಿಗೆ ಹೆಸರುವಾಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.