ಭಂಡಾರಿ ಬ್ರದರ್ಸ್‌ಗೆ ಸಿನಿಮಾದ ಜತೆ ಜತೆಗೆ ಕ್ರಿಕೆಟ್ ಗೀಳು!
ಕನ್ನಡಕ್ಕೆ ರಂಗೀತರಂಗದಂತ ಅದ್ಭುತ ಚಿತ್ರ ನೀಡಿದ ಭಂಡಾರಿ ಬ್ರದರ್ಸ್ ಇದೀಗ ರಾಜರಥ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬಿಡುವಿನ ವೇಳೆಯಲ್ಲಿ ಭಂಡಾರಿ ಬ್ರದರ್ಸ್ ಕ್ರಿಕೆಟ್...

Published On :
ಕನ್ನಡಕ್ಕೆ ರಂಗೀತರಂಗದಂತ ಅದ್ಭುತ ಚಿತ್ರ ನೀಡಿದ ಭಂಡಾರಿ ಬ್ರದರ್ಸ್ ಇದೀಗ ರಾಜರಥ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬಿಡುವಿನ ವೇಳೆಯಲ್ಲಿ ಭಂಡಾರಿ ಬ್ರದರ್ಸ್ ಕ್ರಿಕೆಟ್ ಆಡುವ ಮೂಲಕ ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುತ್ತಾರಂತೆ.
ಇತ್ತೀಚೆಗೆ ಅಮೆರಿಕದ ಮಿಚಿಂಗನ್ ನಲ್ಲಿ ನಡೆದ ಟ್ರೋಯ್ ಕ್ರಿಕೆಟ್ ಅಸೋಸಿಯೇಷನ್ ಟೂರ್ನಿಯಲ್ಲಿ ಭಾಗವಹಿಸಿರುವುದಾಗಿ ಭಂಡಾರಿ ಬ್ರದರ್ಸ್ ಹೇಳಿಕೊಂಡಿದ್ದಾರೆ. ಈ ಮಧ್ಯೆ ಕ್ರಿಕೆಟ್ ಜೆರ್ಸಿಯಲ್ಲಿ ಫೋಸ್ ಕೊಟ್ಟಿರುವ ಚಿತ್ರಗಳನ್ನು ಪ್ರಕಟಿಸಿದ್ದಾರೆ.
ಮೈಸೂರು ಝೋನ್ ಜೂನಿಯರ್ ಲೆವೇಲ್ ತಂಡವನ್ನು ಪ್ರತಿನಿಧಿಸಿದ್ದು ಅಂಡರ್ 19 ಕರ್ನಾಟಕ ಪ್ರೀ ಯುನಿವರ್ಸಿಟಿ ಟೀಮ್ ನ ನಾಯಕನಾಗಿದೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ. ಇನ್ನು ಸಹೋದರ ನಿರೂಪ್ ಭಂಡಾರಿ ಅಂಡರ್ 16 ಕರ್ನಾಟಕ ಪ್ರೀ ಯುನಿವರ್ಸಿಟಿ ತಂಡದಲ್ಲಿ ಆಡಿದ್ದ. ಮುಂದೆ ಇಂಜಿನಿಯರಿಂಗ್ ಕೋರ್ಸ್ ತೆಗೆದುಕೊಂಡಿದ್ದರಿಂದ ಕ್ರಿಕೆಟ್ ಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ ಗೋಡೆ ಎಂದೇ ಖ್ಯಾತಿ ಪಡೆದಿರುವ ರಾಹುಲ್ ದ್ರಾವಿಡ್ ರೀತಿ ಸಹೋದರ ನಿರೂಪ್ ಬ್ಯಾಟ್ ಬೀಸುತ್ತಾನೆ. ಮೂರನೇ ಕ್ರಮಾಂಕದಲ್ಲಿ ಆಡುವ ನಿರೂಪ್ ಕವರ್ ಡ್ರೈವ್ ಮತ್ತು ಆನ್ ಡ್ರೈವ್ ಗಳು ದ್ರಾವಿಡ್ ರಂತೆ ಆಡುತ್ತಾನೆ ಎಂದು ಅನೂಪ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


