ಸಿನಿಮಾ ಸುದ್ದಿ

ಬಾಹುಬಲಿ-2 ಅಭೂತಪೂರ್ವ ಯಶಸ್ಸು; ಪ್ರಭಾಸ್ ಸಂಭಾವನೆ 30 ಕೋಟಿಗೆ ಏರಿಕೆ!

ವಿಶ್ವಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ-2 ಚಿತ್ರದ ಯಶಸ್ಸಿನ ಬಳಿಕ ಟಾಲಿವುಡ್ ನಟ ಪ್ರಭಾಸ್ ಅವರಿಗೆ ಬೇಡಿಕೆ ಹೆಚ್ಚಾಗಿದ್ದು, ಅವರ ಚಿತ್ರ ಸಂಭಾವನೆ ಕೂಡ ಬರೊಬ್ಬರಿ 30 ಕೋಟಿ ರು.ಗಳಿಗೆ ಏರಿಕೆಯಾಗಿದೆ.

ಬಾಹುಬಲಿ-2 ಅಭೂತಪೂರ್ವ ಯಶಸ್ಸು; ಪ್ರಭಾಸ್ ಸಂಭಾವನೆ 30 ಕೋಟಿಗೆ ಏರಿಕೆ!
ಸಂಗ್ರಹ ಚಿತ್ರ
Published On :

ಹೈದರಾಬಾದ್: ವಿಶ್ವಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ-2 ಚಿತ್ರದ ಯಶಸ್ಸಿನ ಬಳಿಕ ಟಾಲಿವುಡ್ ನಟ ಪ್ರಭಾಸ್ ಅವರಿಗೆ ಬೇಡಿಕೆ ಹೆಚ್ಚಾಗಿದ್ದು, ಅವರ ಚಿತ್ರ ಸಂಭಾವನೆ ಕೂಡ ಬರೊಬ್ಬರಿ 30 ಕೋಟಿ ರು.ಗಳಿಗೆ ಏರಿಕೆಯಾಗಿದೆ.

ನಟ ಪ್ರಭಾಸ್ ಇದೀಗ ಬಾಲಿವುಡ್ ಹೀರೋಗಳಿಗೂ ಸಡ್ಡು ಹೊಡಿದ್ದು, ಟಾಲಿವುಡ್ ನಟ ಇದೀಗ ಬಾಲಿವುಡ್ ಹೀರೋಗಳ ಮಟ್ಟಿಗೆ ಸಂಭಾವನೆ ಪಡೆಯಲು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ಬಾಹುಬಲಿ-2 ಚಿತ್ರದ ಬಳಿಕ ಪ್ರಭಾಸ್  ತಮ್ಮ ಸಂಭಾವನೆಯನ್ನು 30 ಕೋಟಿ ರುಗಳಿಗೆ ಏರಿಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಬಾಹುಬಲಿ ಚಿತ್ರಕ್ಕಾಗಿ ನಟ ಪ್ರಭಾಸ್ 5 ಕೋಟಿ ರು. ಸಂಭಾವನೆ ಕೇಳಿದ್ದರಂತೆ. ಚಿತ್ರ ತೆರೆಕಂಡು ಭಾರಿ ಯಶಸ್ಸು ಗಳಿಸಿದ ಹಿನ್ನಲೆಯಲ್ಲಿ ಚಿತ್ರ  ನಿರ್ಮಾಪಕರು ಪ್ರಭಾಸ್ 20ರಿಂದ 25 ಕೋಟಿ ರು. ಸಂಭಾವನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಬಾಹುಬಲಿ-2 ಕೂಡ ಯಶಸ್ವಿಯಾದ ಹಿನ್ನಲೆಯಲ್ಲಿ ಪ್ರಭಾಸ್ ತಮ್ಮ ಸಂಭಾವನೆಯನ್ನು ಇನ್ನೂ 5 ಕೋಟಿ ಏರಿಕೆ ಮಾಡಿಕೊಂಡಿದ್ದು, ಚಿತ್ರವೊಂದಕ್ಕೆ 30 ಕೋಟಿ ರು.ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಹೀರೋಗಳಿಗೆ ಟಾಲಿವುಡ್ ನಟ ಸಡ್ಡು
ಇನ್ನು ನಟ ಪ್ರಭಾಸ್ ಬಾಹುಬಲಿ ಚಿತ್ರದ ಮೂಲಕ ಬಾಲಿವುಡ್ ಹೀರೋಗಳನ್ನೂ ಮೀರಿಸುವಂತೆ ಸಂಭಾವನೆ ಪಡೆಯುತ್ತಿದ್ದು, ಸೈಫ್ ಅಲಿಖಾನ್, ಶಾಹಿದ್ ಕಪೂರ್, ರಣ್ ವೀರ್ ಸಿಂಗ್, ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ರಣ್  ಬೀರ್ ಕಪೂರ್ ಅವರನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ಬಾಲಿವುಡ್ ನಲ್ಲಿ ನಟ ಸಲ್ಮಾನ್ ಖಾನ್ ಅತೀ ಹೆಚ್ಚು ಅಂದರೆ 60 ಕೋಟಿ ರು. ಸಂಭಾವನೆ ಪಡೆಯುತ್ತಿದ್ದು, ಬಳಿಕದ ಸ್ಥಾನದಲ್ಲಿ ನಟ ಅಮೀರ್ ಖಾನ್ (55 ಕೋಟಿ)ಇದ್ದಾರೆ. ಇನ್ನು  ನಟ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅವರು ಚಿತ್ರವೊಂದಕ್ಕೆ 40-45 ಕೋಟಿ ರು.ಪಡೆಯುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ 35-40 ಕೋಟಿ ರು ಪಡೆಯುತ್ತಿದ್ದು, ಅಜಯ್ ದೇವಗನ್ 25-35 ಕೋಟಿ ರು.ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.