ಸಿನಿಮಾ ಸುದ್ದಿ

ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್' ನ ಮೊದಲ ಪೋಸ್ಟರ್ ಬಿಡುಗಡೆ!

ನಟ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್' ಚಿತ್ರದ ಮೊದಲ ಅಧಿಕೃತ ಪೋಸ್ಟರ್ ಬಿಡುಗಡೆಯಾಗಿದ್ದು, ಉದ್ದನೆಯ ಗಡ್ಡ-ಕೂದಲು ಬಿಟ್ಟ ನಟನ ಕೋಪೋದ್ರೇಕದ ನೋಟ ಪ್ರೇಕ್ಷಕರ ಗಮನ ಸೆಳೆದಿದೆ.

ರಾಕಿಂಗ್ ಸ್ಟಾರ್ ಯಶ್ 'ಕೆ.ಜಿ.ಎಫ್' ನ ಮೊದಲ ಪೋಸ್ಟರ್ ಬಿಡುಗಡೆ!
'ಕೆ.ಜಿ.ಎಫ್' ಸಿನೆಮಾ ಪೋಸ್ಟರ್
Published On :
ಬೆಂಗಳೂರು: ನಟ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್' ಚಿತ್ರದ ಮೊದಲ ಅಧಿಕೃತ ಪೋಸ್ಟರ್ ಬಿಡುಗಡೆಯಾಗಿದ್ದು, ಉದ್ದನೆಯ ಗಡ್ಡ-ಕೂದಲು ಬಿಟ್ಟ ನಟನ ಕೋಪೋದ್ರೇಕದ ನೋಟ ಪ್ರೇಕ್ಷಕರ ಗಮನ ಸೆಳೆದಿದೆ. ಯಶ್ ಪಾತ್ರದ ಬಗ್ಗೆ ಹೆಚ್ಚು ಗುಟ್ಟು ಬಿಚ್ಚಿಡಲು ನಿರಾಕರಿಸುವ ಚಿತ್ರತಂಡ, ಈ ಪೋಸ್ಟರ್ ನ ಹಿನ್ನಲೆಯಲ್ಲಿ ಕಾಣುವ ಎಲ್ಲ ಜನರೂ ಕೂಡ ನಿಜವಾದವರೇ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ್.
ಈ ಪೋಸ್ಟರ್ ಬಗ್ಗೆ ಹೆಚ್ಚಿನ ವಿವರ ತಿಳಿಸುವಂತೆ ಕೇಳಿದರೆ "ಇದು ಭಾವೋದ್ರೇಕ. ಅಲ್ಲಿ ತೀವ್ರ ಭಾವನೆ, ಪ್ಯಾಷನ್ ಇದೆ. ಸದ್ಯಕ್ಕೆ ೧೮% ಚಿತ್ರೀಕರಣ ಮುಗಿದಿದ್ದು, ಕೆ.ಜಿ.ಎಫ್ ಬಗ್ಗೆ ಇಷ್ಟೇ ಮಾಹಿತಿ ನೀಡಲು ಸಾಧ್ಯ. ಆದರೆ ಇನ್ನು ಹೆಚ್ಚಿನದು ಕಾದಿದೆ ಎಂದಷ್ಟೇ ತಿಳಿಸಬಲ್ಲೆ" ಎನ್ನುತ್ತಾರೆ ಪ್ರಶಾಂತ್. 
ಚಿನ್ನದ ಬಣ್ಣದಲ್ಲಿ ಬರೆದಿರುವ ಶೀರ್ಷಿಕೆಯ ಜೊತೆಗೆ ಅಡಿ ಶೀರ್ಷಿಕೆಯಲ್ಲಿ  'ಇದು ನೈಜ ಕಥೆ ಆಧಾರಿತ' ಎಂದಿರಿವುದು ಕೂಡ ಎಲ್ಲ ಕುತೂಹಲ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಕೆಂಪು ಅಕ್ಷರಗಳಲ್ಲಿ ಬರೆದು ಬಿಳಿಯ ಬಣ್ಣದಲ್ಲಿ ಗೀಚಿರುವ ಈ ಅಕ್ಷರಗಳ ಹಿಂದೆ ಸಾಕಷ್ಟು ಚಿಂತನೆ ಇದೆ ಎನ್ನುವ ನಿರ್ದೇಶಕ "ಇದು ರೌಡಿ ತಂಗಂ ಜೀವನದ ಕಥೆಯಲ್ಲ" ಎಂದು ಸ್ಪಷ್ಟೀಕರಿಸುತ್ತಾರೆ. ಪೋಸ್ಟರ್ ನೋಡಿ ಇದು ತಂಗಂ ಕತೆ ಇರಬಹುದು ಎಂದು ಹಲವರು ಊಹಿಸಿದ್ದಾರೆ ಮತ್ತು "ಕೋಲಾರದ ಒಂದು ತಂಡ, ತಂಗಂ ಜೀವನವನ್ನು ತೆರೆಗೆ ಅಳವಡಿಸುವುದಕ್ಕೆ ಅವರ ಬಳಿ ಹಕ್ಕುಗಳು ಇರುವುದಾಗಿ ತಿಳಿಸಿ ನಮ್ಮನ್ನು ಪ್ರಶ್ನಿಸಿದ್ದರು. ನನ್ನ ಸಿನೆಮಾಗೂ ತಂಗಂ ಜೀವನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರಿಗೆ ಕೂಡ ತಿಳಿಸಿದ್ದೇನೆ. ಅವರ ನಿಜ ಜೀವನದ ಬಗ್ಗೆ ನನಗೇನು ತಿಳಿದಿಲ್ಲ" ಎಂದು ಕೂಡ ಪ್ರಶಾಂತ್ ತಿಳಿಸತ್ತಾರೆ. 
ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ದೊಡ್ಡ ಬಜೆಟ್ ಚಿತ್ರ 'ಕೆ.ಜಿ.ಎಫ್'. ಶ್ರೀನಿಧಿ ಶೆಟ್ಟಿ ನಾಯಕ ನಟಿಯಾಗಿದ್ದು ನೈನಾ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿ ಬಸರೂರ್ ಸಂಗೀತ ನೀಡಿದ್ದು, ಭುವನ್ ಗೌಡ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.