ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಲೆಳೆದ ನಟಿ ಟ್ವಿಂಕಲ್ ಖನ್ನಾ
ಬಾಲಿವುಡ್ ನಟಿ ಹಾಗೂ ಬರಹಗಾರ್ತಿ ಟ್ವಿಂಕಲ್ ಖನ್ನಾ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡಿದ್ದಾರೆ. ಟ್ವಿಂಕಲ್ ಖನ್ನಾ ಅವರ ಪ್ರಸಿದ್ಧ ಮಿಸ್ಟರ್. ಫನ್ನಿಬೋನ್ಸ್ ನಲ್ಲಿ ..

ನವದೆಹಲಿ: ಮಹಿಳೆಯರ ರಕ್ಷಣೆ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆಗೆದು ಕೊಳ್ಳುತ್ತಿರುವ ಕ್ರಮಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತಿದೆ.
ಇದೇ ವೇಳೆ ಬಾಲಿವುಡ್ ನಟಿ ಹಾಗೂ ಬರಹಗಾರ್ತಿ ಟ್ವಿಂಕಲ್ ಖನ್ನಾ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡಿದ್ದಾರೆ. ಟ್ವಿಂಕಲ್ ಖನ್ನಾ ಅವರ ಪ್ರಸಿದ್ಧ ಮಿಸ್ಟರ್. ಫನ್ನಿಬೋನ್ಸ್ ನಲ್ಲಿ ಸಿಎಂ ಆದಿತ್ಯನಾಥ್ ಅವರಿಗೆ ಸಲಹೆ ನೀಡಿ ಕಾಲೆಳೆದಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಯೋಗ ಮಾಡುವಾಗ ಗ್ಯಾಸ್ ರಿಲೀಸ್ ಮಾಡಲು ಸಹಾಯವಾಗುವಂತ ಆಸನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದ್ದಾರೆ. (Yogi Adityanath should do gas-releasing asana)
ಮಹಿಳೆಯರ ಬಗ್ಗೆ ಅವರು ಅದ್ಭುತ ಟ್ರ್ಯಾಕ್ ರೆಕಾರ್ಡ್ ಮಾಡುವಂತ ಹೇಳಿಕೆಗಳನ್ನು ನೀಡಿಲ್ಲ. ಅವರು ಗ್ಯಾಸ್ ಬಿಡುಗಡೆ ಮಾಡುವಂತ ಯೋಗಾಸನ ಮಾಡಬೇಕು ಎಂದು ಹೇಳಿದ್ದಾರೆ.
ಜೊತೆಗೆ ಅವರು ತಮ್ಮ ಫ್ಯಾಶನ್ ಕೂಡ ಬದಲಾಯಿಸಿಕೊಳ್ಳಬೇಕಿದೆ. ಏಷ್ಯನ್ ಪೈಂಟ್ಸ್ ಈ ಸೀಸನ್ ಗಾಗಿ ಒಂದು ಹೊಸ ಬಣ್ಣ ಪ್ರಕಟಿಸಬೇಕಿದೆ. Beguiling Saffron ಎಂಬ ಹೊಸ ಬಣ್ಣವನ್ನು Orange is the new brown ಎಂಬ ಟ್ಯಾಗ್ ಲೈನ್ ನಡಿಯಲ್ಲಿ ಪರಿಚಯಸಬೇಕಿದೆ ಎಂದು ಗೇಲಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


