ಸಿನಿಮಾ ಸುದ್ದಿ

ನನ್ನ ಮುಂದಿನ ಸಿನೆಮಾದ ಹೆಸರು 'ಅರ್ಧ ಸತ್ಯ' ಅಲ್ಲ: ಹೇಮಂತ ರಾವ್

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ನಿರ್ದೇಶನದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ ನಿರ್ದೇಶಕ ಹೇಮಂತ್ ಎಂ ರಾವ್, ಕಳೆದ ವಾರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಘೋಷಿಸಿ,

ನನ್ನ ಮುಂದಿನ ಸಿನೆಮಾದ ಹೆಸರು 'ಅರ್ಧ ಸತ್ಯ' ಅಲ್ಲ: ಹೇಮಂತ ರಾವ್
ಹೇಮಂತ್ ಎಂ ರಾವ್
Published On :
ಬೆಂಗಳೂರು: 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ನಿರ್ದೇಶನದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ ನಿರ್ದೇಶಕ ಹೇಮಂತ್ ಎಂ ರಾವ್, ಕಳೆದ ವಾರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಘೋಷಿಸಿ, ಪೋಸ್ಟರ್ ಒಂದನ್ನು ಪ್ರಕಟಿಸಿದ್ದರು. ಈಗ ಆ ಶೀರ್ಷಿಕೆಯನ್ನು ಬದಲಿಸಲು ಅವರು ಮುಂದಾಗಿದ್ದಾರೆ. 
ನಿರ್ದೇಶಕ ಈಗ ನಿರ್ಮಾಪಕ ಕಾರ್ತಿಕ್ ಗೌಡ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಈ ಸಿನೆಮಾವನ್ನು ನಟ ಪುನೀತ್ ರಾಜಕುಮಾರ್ ಸಹನಿರ್ಮಿಸಲಿದ್ದಾರೆ. 
ಈ ವಿಷಯವನ್ನು ಧೃಢೀಕರಿಸಿರುವ ಹೇಮಂತ್ "'ಅರ್ಧ ಸತ್ಯ' ಶೀರ್ಷಿಕೆಯನ್ನು ಈಗಾಗಲೇ ಮತೊಬ್ಬರು ನೊಂದಾಯಿಸಿರುವುದನ್ನು ತಿಳಿದ ಮೇಲೆ ಶೀರ್ಷಿಕೆಯನ್ನು ಬದಲಿಸಲು ಚಿಂತಿಸಿದೆ. ಆದುದರಿಂದ ಶೀಘ್ರದಲ್ಲೇ ಹೊಸ ಶೀರ್ಷಿಕೆ ನಿಶ್ಚಯಿಸಲಿದ್ದೇನೆ" ಎನ್ನುತ್ತಾರೆ. 
"ಅಲ್ಲದೆ, ವಾಣಿಜ್ಯ ಮಂಡಳಿ ಈ ಶೀರ್ಷಿಕೆ ಬಳಸಲು ಅವಕಾಶ ನೀಡಿದ್ದರೂ, ಶೀರ್ಷಿಕೆಯ ಸಲುವಾಗಿ ವಿವಾದದಲ್ಲಿ ಸಿಕ್ಕಿಕೊಳ್ಳಲು ನನಗೆ ಇಷ್ಟವಿಲ್ಲ" ಎನ್ನುತ್ತಾರೆ ಅವರು. 
ಸ್ಕ್ರಿಪ್ಟ್ ಕೆಲವನ್ನು ಬಹುತೇಕ ಮುಗಿಸಿರುವ ಹೇಮಂತ್, ತಾರಾಗಣದ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಮುಖ್ಯಪಾತ್ರದಲ್ಲಿ ಬಹುತೇಕ ಮನೀಶ್ ರಿಷಿ ನಟಿಸಲಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.