ಸಿನಿಮಾ ಸುದ್ದಿ

ಆರ್ ಜಿ ವಿ ನಿರ್ದೇಶನದ 'ಸರ್ಕಾರ್ ೩' ಬಿಡುಗಡೆ ಮತ್ತೆ ಮುಂದಕ್ಕೆ

ಬಾಲಿವುಡ್ ಸಿನೆಮಾ 'ಸರ್ಕಾರ್ ೩' ಬಿಡುಗಡೆಗೆ ಹಾದಿ ಇನ್ನು ಸುಗಮವಾಗಿಲ್ಲ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಸರ್ಕಾರ್ ೩' ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದಾಗಿ ನಿರ್ಮಾಣ ಸಂಸ್ಥೆ ಎರೋಸ್ ನೌ

ಆರ್ ಜಿ ವಿ ನಿರ್ದೇಶನದ 'ಸರ್ಕಾರ್ ೩' ಬಿಡುಗಡೆ ಮತ್ತೆ ಮುಂದಕ್ಕೆ
'ಸರ್ಕಾರ್ ೩' ಸಿನೆಮಾದ ಪೋಸ್ಟರ್
Published On :
ನವದೆಹಲಿ: ಬಾಲಿವುಡ್ ಸಿನೆಮಾ 'ಸರ್ಕಾರ್ ೩' ಬಿಡುಗಡೆಗೆ ಹಾದಿ ಇನ್ನು ಸುಗಮವಾಗಿಲ್ಲ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಸರ್ಕಾರ್ ೩' ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದಾಗಿ ನಿರ್ಮಾಣ ಸಂಸ್ಥೆ ಎರೋಸ್ ನೌ ಟ್ವಿಟ್ಟರ್ ನಲ್ಲಿ ಘೋಷಿಸಿದೆ.
"@ಎರೋಸ್ ನೌ ವಿ, @ಎಸ್ಆರ್ ಬಚ್ಚನ್ @ಆರ್ ಜಿ ವಿ ಜೂಮ್ ಇನ್  ಸರ್ಕಾರ್ ೨ ಬಿಡುಗಡೆಯನ್ನು ೧೨ ಮೇ ೨೦೧೭ಕ್ಕೆ ಮುಂದೂಡಲು ನಾವೆಲ್ಲರೂ ಪರಸ್ಪರ ಒಪ್ಪಿಕೊಂಡು ನಿರ್ಣಯಿಸಿದ್ದೇವೆ" ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. 
ಸಿನೆಮಾ ಮುಂದೂಡಲಾಗುತ್ತಿರುವುದು ಇದು ಮೂರನೇ ಬಾರಿ. ಇದು ಮೊದಲು ಮಾರ್ಚ್ ೧೭ಕ್ಕೆ ಬಿಡುಗಡೆಯಾಗಬೇಕಾಗಿತ್ತು ನಂತರ ಏಪ್ರಿಲ್ ೭ಕ್ಕೆ ಮುಂದೂಡಲಾಗಿತ್ತು. 
'ಸರ್ಕಾರ್' ಸರಣಿ ಸಿನೆಮಾಗಳಲ್ಲಿ ಇದು ಮೂರನೇ ಭಾಗ. ಮೊದಲನೇ ಭಾಗ 'ಸರ್ಕಾರ್' ೨೦೦೫ರಲ್ಲೂ ಮತ್ತು 'ಸರ್ಕಾರ್ ರಾಜ್' ೨೦೦೮ ರಲ್ಲೂ ಬಿಡುಗಡೆಯಾಗಿತ್ತು. 
ಆರ್ ಜಿ ವಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಜಾಕಿ ಶ್ರಾಫ್, ಮನೋಜ್ ಬಾಜಪಾಯಿ ಮತ್ತು ಯಾಮಿ ಗೌತಮ್ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.