ನಟ ಕಮಲ್ ಹಾಸನ್ ಅವರ ಹಿರಿಯ ಸಹೋದರ ಚಂದ್ರ ಹಾಸನ್ ನಿಧನ
ಖ್ಯಾತ ನಟ ಕಮಲ್ ಹಾಸನ್ ಅವರ ಹಿರಿಯ ಸೋದರ, ನಿರ್ಮಾಪಕ ಚಂದ್ರಹಾಸನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸನ್ ಅವರಿಗೆ 82 ವರ್ಷ...

ನವದೆಹಲಿ: ಖ್ಯಾತ ನಟ ಕಮಲ್ ಹಾಸನ್ ಅವರ ಹಿರಿಯ ಸೋದರ, ನಿರ್ಮಾಪಕ ಚಂದ್ರಹಾಸನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸನ್ ಅವರಿಗೆ 82 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಚಂದ್ರಹಾಸನ್ ಅವರು ಲಂಡನ್‌ಗೆ ತೆರಳಿದ್ದು ಅಲ್ಲಿ ಮಗಳು ಅನು ಹಾಸನ್ ಜೊತೆ ನೆಲೆಸಿದ್ದರು. ಅನು ಹಾಸನ್ ನಿವಾಸದಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಜನವರಿ ತಿಂಗಳಿನಲ್ಲಿಯಷ್ಟೇ ಚಂದ್ರಹಾಸನ್ ಅವರ ಪತ್ನಿ ಗೀತಾಮಣಿ ನಿಧನರಾಗಿದ್ದರು.
ವೃತ್ತಿಯಲ್ಲಿ ವಕೀಲರಾಗಿದ್ದ ಚಂದ್ರಹಾಸನ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ರಾಜ್‍ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್‌ನನ್ನು ನೋಡಿಕೊಳ್ಳುತ್ತಿದ್ದರು. ಕಮಲ್ ಹಾಸನ್ ಅವರ 'ವಿಶ್ವರೂಪಂ', ತೂಂಗಾವನಂ' ಮತ್ತು 'ಶಬಾಷ್ ನಾಯ್ಡು' ಸಿನಿಮಾಗಳ ನಿರ್ಮಾಣದಲ್ಲಿ ಚಂದ್ರಹಾಸನ್ ಕಾರ್ಯವಹಿಸಿದ್ದರು.
ಚಂದ್ರ ಹಾಸನ್ ಅವರ ಪುತ್ರಿ ಅನುಹಾಸನ್ ಖ್ಯಾತ ಟಿವಿ ನಿರೂಪಕಿಯಾಗಿದ್ದಾರೆ. ಚಂದ್ರ ಹಾಸನ್ ಅವರ ನಿಧನದಿಂದ ಕಮಲ್ ಹಾಸನ್ ಅವರ ನಟನೆಯ ಶಹಬಾಸ್ ನಾಯ್ಡು ಸಿನಿಮಾ ಶೂಟಿಂಗ್ ಅನ್ನು ಅನಿರ್ಧಿಷ್ಟಕಾಲ ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


