ಸಿನಿಮಾ ಸುದ್ದಿ

ಉಪ್ಪಿ ರುಪಿ ಚಿತ್ರದಲ್ಲಿ ಉಪೇಂದ್ರರದ್ದು ನೆಗೆಟಿವ್ ಪಾತ್ರ

ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪ್ಪಿ ರುಪಿ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಶುರುವಾಗಿದ್ದು ಚಿತ್ರವನ್ನು ಕೆ. ಮಾದೇಶ ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ...

ಉಪ್ಪಿ ರುಪಿ ಚಿತ್ರದಲ್ಲಿ ಉಪೇಂದ್ರರದ್ದು ನೆಗೆಟಿವ್ ಪಾತ್ರ
ಉಪೇಂದ್ರ
Published On :
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪ್ಪಿ ರುಪಿ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಶುರುವಾಗಿದ್ದು ಚಿತ್ರವನ್ನು ಕೆ. ಮಾದೇಶ ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 
ಚಿತ್ರದಲ್ಲಿ ಉಪ್ಪಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಾದೇಶ್ ಅವರು, ಉಪ್ಪಿ ಲುಕ್ ಬಗ್ಗೆ ನಾವು ಹೆಚ್ಚು ಗಮನ ಹರಿಸಿದ್ದೇವೆ. ಉಪ್ಪಿಯನ್ನು ಭಿನ್ನವಾಗಿ ಕಾಣಿಸುವ ಪ್ರಯತ್ನ ನಮ್ಮದು. ನೋಟು ನಿಷೇಧದ ಪರಿಣಾಮವನ್ನು ಚಿತ್ರದಲ್ಲಿ ಕಾಣಬಹುದು.ಇಲ್ಲಿ ಉಪೇಂದ್ರ ಸಾಮಾನ್ಯ ಪ್ರಜೆಯಾಗಿ ಕಾಣಿಸಿಕೊಳ್ಳಲಿದ್ದಾರೆ. 
ಚಿತ್ರದಲ್ಲಿ ಉಪೇಂದ್ರ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಪೇಂದ್ರ ಚಿತ್ರದಲ್ಲಿ ಹೀರೋ ಆದರೂ ಪ್ರೇಕ್ಷಕರಿಗೆ ಮಾತ್ರ ಆತ ವಿಲನ್ ನಂತೆ ಕಾಣುತ್ತಾರೆ ಇದೇ ಚಿತ್ರದ ಟ್ವಿಸ್ಟ್. ಚಿತ್ರದಲ್ಲಿ ರಚಿತಾ ರಾಮ್ ಬ್ಯಾಂಕ್ ನೌಕರಳಾಗಿ ಕಾಣಿಸಿಕೊಳ್ಳಲಿದ್ದಾರೆ  ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.