ಮಹಿಳಾ ದಿನದಂದು ಕೀಳು ಶುಭಾಶಯ: ತೀವ್ರ ವಿರೋಧದ ಬಳಿಕ ಕ್ಷಮೆಯಾಚಿಸಿದ ಆರ್'ಜಿವಿ
ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಕೀಳು ಮಟ್ಟದಲ್ಲಿ ಶುಭಾಶಯ ಕೋರಿ ತೀವ್ರ ಟೀಕೆ ಹಾಗೂ ವಿರೋಧಗಳಿಗೆ ಗುರಿಯಾಗಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ಕೊನೆಗೂ ತಮ್ಮ ಹೇಳಿಕೆ ಕುರಿತಂತೆ ಗುರುವಾರ...

Published On :
ನವದೆಹಲಿ: ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಕೀಳು ಮಟ್ಟದಲ್ಲಿ ಶುಭಾಶಯ ಕೋರಿ ತೀವ್ರ ಟೀಕೆ ಹಾಗೂ ವಿರೋಧಗಳಿಗೆ ಗುರಿಯಾಗಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, ಕೊನೆಗೂ ತಮ್ಮ ಹೇಳಿಕೆ ಕುರಿತಂತೆ ಗುರುವಾರ ಕ್ಷಮೆಯಾಚಿಸಿದ್ದಾರೆ.
ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಅವರು, ಪ್ರತಿಯೊಬ್ಬ ಮಹಿಳೆಯೂ ಸನ್ನಿ ಲಿಯೋನ್ ರೀತಿ ಪುರುಷರನ್ನು ಹೇಗೆ ಸಂತೋಷವಾಗಿಡಬೇಕೆಂಬುದನ್ನು ಕಲಿಯಬೇಕು ಎಂದು ಹೇಳಿದ್ದರು. ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣದಾದ್ಯಂತ ಭಾರೀ ಟೀಕೆಗಳಿಗೆ ಗುರಿಯಾಗಿತ್ತು.
ಇದೀಗ ತಮ್ಮ ಟ್ವೀಟ್ ಕುರಿತಂತೆ ಕ್ಷಮೆಯಾಚಿಸಿರುವ ಅವರು, ನಾನು ನನ್ನಲ್ಲಿರುವ ಭಾವನೆ ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದೆ. ಮಹಿಳಾ ದಿನಾಚರಣೆ ದಿನದಂದು ಉದ್ದೇಶಪೂರಕವಲ್ಲದ, ಸೂಕ್ಷ್ಮಯುತ ಟ್ವೀಟ್ ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
ನನ್ನ ಕ್ಷಮೆಯೇನಿದ್ದರೂ, ಪ್ರಮಾಣಿಕತೆಯುಳ್ಳ ಜನರಿಗೆ ಮಾತ್ರವೇ ಹೊರತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಬೆದರಿಕೆ ಹಾಕಿದವರಿಗಾಗಿ ಅಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಎನ್ ಸಿಪಿ ನಾಯಕಿ ವಿದ್ಯಾಚವಣ್ ಅವರು, ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರಿಗೆ ಶೂನಿಂದ ಹೊಡೆಯುತ್ತೇವೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tweetಕ್ಷಮೆSunny Leoneಸನ್ನಿ ಲಿಯೋನ್ಟ್ವೀಟ್apologyಮಹಿಳಾ ದಿನಾಚರಣೆRam Gopal Varmaರಾಮ್ ಗೋಪಾಲ್ ವರ್ಮಾWomen\'s day
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


