'ಬಾಹುಬಲಿ: ಆರಂಭ' ಸ್ಟಾರ್ಟರ್ಸ್ ಆಗಿತ್ತು, ನಿಜವಾದ ಊಟ ಈಗ ಬರಲಿದೆ: ರಾಜಮೌಳಿ
ಬಹುನಿರೀಕ್ಷಿತ 'ಬಾಹುಬಲಿ:ಮುಕ್ತಾಯ' ಸಿನೆಮಾದ ಚಿತ್ರೀಕರಣ ನಂತರದ ಕಾರ್ಯಗಳಲ್ಲಿ ನಿರತರಾಗಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ, ಮೊದಲ ಭಾಗ ಕೇವಲ ಸ್ಟಾರ್ಟರ್ಸ್ ಆಗಿತ್ತು ಎಂದಿದ್ದಾರೆ.

Published On :
ಮುಂಬೈ: ಬಹುನಿರೀಕ್ಷಿತ 'ಬಾಹುಬಲಿ:ಮುಕ್ತಾಯ' ಸಿನೆಮಾದ ಚಿತ್ರೀಕರಣ ನಂತರದ ಕಾರ್ಯಗಳಲ್ಲಿ ನಿರತರಾಗಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ, ಮೊದಲ ಭಾಗ ಕೇವಲ ಸ್ಟಾರ್ಟರ್ಸ್ ಆಗಿತ್ತು ಎಂದಿದ್ದಾರೆ.
ಅಂತರ್ಜಾಲ ತಾಣವೊಂದರಲ್ಲಿ ವಿಮರ್ಶಕಿ ಅನುಪಮಾ ಚೋಪ್ರಾ ಅವರೊಂದಿಗೆ ಸಂದರ್ಶನ ನೀಡಿರುವ ರಾಜಮೌಳಿ ತಮ್ಮ ಸಿನೆಮಾ 'ಬಾಹುಬಲಿ:ಮುಕ್ತಾಯ'ದ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
'ಬಾಹುಬಲಿ-೨' ರಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ "ಮೊದಲನೇ ಭಾಗ ಪಾತ್ರಗಳ ಪರಿಚಯವಾಗಿತ್ತು. ಮೊದಲ ಭಾಗ ಸ್ಟಾರ್ಟರ್ಸ್ ಇದ್ದಂತೆ, ನಿಜವಾದ ಊಟ ಈಗ ಬರಲಿದೆ" ಎಂದಿದ್ದಾರೆ.
ಈ ಯೋಜನೆಗಾಗಿ ಐದು ವರ್ಷ ದುಡಿದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ "ನಾನು ನಿರ್ದೇಶಕನಿಗಿಂತಲೂ ಅತ್ಯುತ್ತಮ ಕಥೆಗಾರ" ಎನ್ನುತ್ತಾರೆ.
"ನಾನು ಕಥೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ ಆತ್ಮವಿಶ್ವಾಸದಿಂದಿರುತ್ತೇನೆ. ನಿರ್ದೇಶನಕ್ಕೆ ಬಂದಾಗ ಅಷ್ಟು ಆತ್ಮವಿಶ್ವಾಸ ಇರುವುದಿಲ್ಲ. ನನ್ನ ತಲೆಯಲ್ಲಿ ಹಲವಾರು ಸಂದೇಹಗಳು ಓಡುತ್ತಿರುತ್ತವೆ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ಖಚಿತತೆ ಇರುವುದಿಲ್ಲ ಅದಕ್ಕೆ ಹಿಂದಕ್ಕೆ ಮುಂದಕ್ಕೆ ಚಲಿಸುತ್ತಿರುತ್ತೇನೆ" ಎಂದಿದ್ದಾರೆ ರಾಜಮೌಳಿ.
ಸಿನೆಮಾ ಸೆಟ್ ನಲ್ಲಿ ಅತಿ ಹೆಚ್ಚು ಕಿರುಚಾಡುತ್ತಿರುತ್ತೇನೆ ಎಂದು ತಿಳಿಸುವ ಪದ್ಮಶ್ರೀ ಪುರಸ್ಕೃತ ನಿರ್ದೇಶಕ "ಸಣ್ಣ ಸಂಗತಿಗಳು ಕೂಡ ನನಗೆ ಕಿರಿಕಿರಿ ಮಾಡುತ್ತವೆ. ಆದರೂ ಕೆಲವು ತಪ್ಪುಗಳನ್ನು ಸಹಿಸಿಕೊಂಡುಬಿಡುತ್ತೇನೆ. ನಾನು ಕೂಡ ಮನುಷ್ಯ" ಎನ್ನುತ್ತಾರೆ 'ಮಗಧೀರ', 'ಈಗ' ಸಿನೆಮಾಗಳಿಗೆ ಪ್ರಖ್ಯಾತರಾದ ನಿರ್ದೇಶಕ.
ಈ ಸಿನೆಮಾದ ನಂತರ ಸಣ್ಣ ಸಿನೆಮಾಗಳನ್ನು ಮಾಡುತ್ತೀರಾ ಎಂಬ ಪ್ರಶ್ನೆಗೆ "ನಾನು ದೊಡ್ಡ ಸಿನೆಮಾಗಳನ್ನಷ್ಟೇ ಮಾಡುತ್ತೇನೆ ಎಂಬುದು ತಪ್ಪು. ಸಿನೆಮಾದ ವಿಷಯ ಅದನ್ನು ದೊಡ್ಡದು ಅಥವಾ ಸಣ್ಣದಾಗಿಸುತ್ತದೆ. ವಿಷಯ ತನ್ನದೇ ದಾರಿಯಲ್ಲಿ ನಡೆಯುತ್ತದೆ. ವಿಷಯದ ಆಧಾರವಾಗಿ ತಾರಾಗಣ, ಬಜೆಟ್, ತಂಡ, ಆರ್ಥಿಕ ವಿಷಯಗಳು ಎಲ್ಲವು ನಿಶ್ಚಯವಾಗುತ್ತವೆ" ಎನ್ನುತ್ತಾರೆ.
ನಿರ್ದೇಶಕನಿಗೆ ಸಹನೆ ಮತ್ತು ಕಷ್ಟ ಪಟ್ಟು ದುಡಿಯುವ ಗುಣಗಳು ಅವಶ್ಯಕ ಎನ್ನುವ ರಾಜಮೌಳಿ, ಏಕಕಾಲಕ್ಕೆ ಹಲವು ಕೆಲಸಗಳನ್ನು ನಿಭಾಯಿಸುವ ಶಕ್ತಿ ತಮಗಿದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


