'ರಾಜಕುಮಾರ' ಕ್ರೇಜ್; ಮೊದಲ ಹಾಡಿನ ಯಶಸ್ಸಿನ ನಂತರ ಈಗ ಆಲ್ಬಮ್ ಬಿಡುಗಡೆಗೆ ಸಿದ್ಧ
ಪುನೀತ್ ರಾಜಕುಮಾರ್ ನಟನೆಯ 'ರಾಜಕುಮಾರ' ಸಿನೆಮಾದ ಮೊದಲ ಹಾಡು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆಯಂತೆ. ವಿ ಹರಿಕೃಷ್ಣ ಸಂಗೀತ ನೀಡಿರುವ, ದೇವಿಶ್ರೀ ಪ್ರಸಾದ್ ಹಾಡಿರುವ ಈ ಹಾಡು

Published On :
ಬೆಂಗಳೂರು: ಪುನೀತ್ ರಾಜಕುಮಾರ್ ನಟನೆಯ 'ರಾಜಕುಮಾರ' ಸಿನೆಮಾದ ಮೊದಲ ಹಾಡು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆಯಂತೆ. ವಿ ಹರಿಕೃಷ್ಣ ಸಂಗೀತ ನೀಡಿರುವ, ದೇವಿಶ್ರೀ ಪ್ರಸಾದ್ ಹಾಡಿರುವ ಈ ಹಾಡು ಒಂದೇ ವಾರದಲ್ಲಿ ೮ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದ್ದು ಈಗ ನಿರ್ಮಾಪಕರು ಟ್ರೇಲರ್ ಜೊತೆಗೆ ಸಿನೆಮಾದ ಆಲ್ಬಮ್ ಬಿಡುಗಡೆಗೆ ಸಿದ್ಧರಾಗಿದ್ದಾರೆ.
ಈ ಆಲ್ಬಮ್ ನಲ್ಲಿ ಕಸ್ತೂರಿ ನಿವಾಸದ ಒಂದು ಜನಪ್ರಿಯ ಹಾಡು ರಿಮಿಕ್ಸ್ ಆಗಿ ಒಳಗೊಂಡಿದೆ ಎಂದು ಕೂಡ ತಿಳಿದುಬಂದಿದೆ. ಶಶಾಂಕ್ ಶೇಷಗಿರಿ, ಸಂತೋಷ್, ವೆಂಕಿ, ಪ್ರಿಯಾ ಹಿಮೇಶ್ ಮತ್ತು ಸೋನು ನಿಗಮ್ ಉಳಿದ ಹಾಡುಗಳನ್ನು ಹಾಡಿದ್ದಾರಂತೆ.
"ಪರಿಚಯಾತ್ಮಕ ಹಾಡಿನಿಂದ ಹಿಡಿದು ಆಲ್ಬಮ್ ನಲ್ಲಿರುವ ಪ್ರತಿಯೊಂದು ಹಾಡು ಕಥೆಯ ಜೊತೆಗೆ ಹೊಂದಿಕೊಳ್ಳುತ್ತದೆ. ಇದರ ಬಗ್ಗೆ ನಿರ್ದೇಶಕ ಸಂತೋಷ್ ಆನಂದರಾಮ್ ಖಚಿತವಾಗಿದ್ದರು ಮತ್ತು ಅವುಗಳನ್ನು ನೋಡಿದಾಗ ನಿಮಗೆ ತಿಳಿಯಲಿದೆ" ಎನ್ನುತ್ತಾರೆ ಹರಿಕೃಷ್ಣ.
ಹೊಂಬಾಳೆ ಫಿಲಂಸ್ ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳುವಂತೆ 'ರಾಜಕುಮಾರ' ಟ್ರೇಲರ್ ಸಿನೆಮಾದ ಕೇಂದ್ರ ವಸ್ತುವಿನ ಬಗ್ಗೆ ಸುಳಿವು ನೀಡಲಿದೆ ಎನ್ನುತ್ತಾರೆ. "'ರಾಜಕುಮಾರ' ಶೀರ್ಷಿಕೆ ಇರುವುದರಿಂದ ವಸ್ತುವಿನ ಬಗ್ಗೆ ಹಲವು ಊಹಾಪೋಹಗಳಿಗೆ ಅವಕಾಶ ನೀಡುತ್ತದೆ. ಆದರೆ ಟ್ರೇಲರ್ ಎಲ್ಲವನ್ನು ಸ್ಪಷ್ಟಪಡಿಸುತ್ತದೆ. ಇದು ಕೌಟುಂಬಿಕ ಮನರಂಜನಾ ಚಿತ್ರ" ಎನ್ನುತ್ತಾರೆ.
ಮೂರು ಹಾಡುಗಳಿಗೆ ಸಂತೋಷ್ ಆನಂದರಾಮ್ ಗೀತರಚನೆ ಮಾಡಿದ್ದಾರೆ ಇನ್ನೆರಡು ಹಾಡುಗಳನ್ನು ಯೋಗರಾಜ್ ಭಟ್ ಬರೆದಿದ್ದಾರಂತೆ.
ಈ ಸಿನೆಮಾದಲ್ಲಿ ಪುನೀತ್ ಎದುರು ಪ್ರಿಯಾ ಆನಂದ್ ನಟಿಸುತ್ತಿದ್ದು ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಹಾಗೆಯೇ ಅನಂತ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್ ಕೂಡ ನಟಿಸುತ್ತಿದ್ದಾರೆ. ಯುಗಾದಿ ಹಬ್ಬಕ್ಕೆ ಮುಂಚಿತವಾಗಿ ಮಾರ್ಚ್ ೨೪ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth Rajkumarಪುನೀತ್ ರಾಜಕುಮಾರ್ರಾಜಕುಮಾರSantosh Anandaramಸಂತೋಷ್ ಆನಂದರಾಮ್V Harikrishnaವಿ ಹರಿಕೃಷ್ಣRaajakumara
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


