"ಹೊಡಿ ಒಂಬತ್ತ್": ಜಿಎಸ್ ಟಿ ಬಗ್ಗೆ ಯೋಗರಾಜ್ ಭಟ್ಟರ ಹೊಸ ಹಾಡು!
ದೇಶಾದ್ಯಂತ ಈಗ ಜಿಎಸ್ ಟಿಯದ್ದೇ ಸುದ್ದಿ..ಜಿಎಸ್ ಟಿಯಿಂದಾಗಿ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಚರ್ಚೆಗಳ ನಡುವೆಯೇ ಕನ್ನಡ ಚಿತ್ರ ನಿರ್ದೇಶಕರ ಯೋಗರಾಜ್ ಭಟ್ಟರು ಜಿಎಸ್ ಟಿ ಕುರಿತು ವಿಶೇಷ ಹಾಡೊಂದನ್ನು ಬರೆದಿದ್ದಾರೆ.

ಬೆಂಗಳೂರು: ದೇಶಾದ್ಯಂತ ಈಗ ಜಿಎಸ್ ಟಿಯದ್ದೇ ಸುದ್ದಿ..ಜಿಎಸ್ ಟಿಯಿಂದಾಗಿ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಚರ್ಚೆಗಳ ನಡುವೆಯೇ ಕನ್ನಡ ಚಿತ್ರ ನಿರ್ದೇಶಕರ ಯೋಗರಾಜ್ ಭಟ್ಟರು ಜಿಎಸ್ ಟಿ ಕುರಿತು ವಿಶೇಷ ಹಾಡೊಂದನ್ನು ಬರೆದಿದ್ದಾರೆ.
ಯೋಗರಾಜ್ ಭಟ್ಟರು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೂಡಿ ಮಾಡುತ್ತಿರುವ ಮುಗುಳುನಗೆ ಚಿತ್ರಕ್ಕಾಗಿ ಭಟ್ಟರು ಈ ಹಾಡನ್ನು ಬರೆದಿದ್ದು, ಇದನ್ನು ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆಯಂತೆ. ಈ ವಿಶೇಷ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು ಸಂಗೀತ ನೀಡಿದ್ದು, ಗಣೇಶ್ ಹಾಗೂ ದುನಿಯಾ ವಿಜಯ್ ಈ ಗೀತೆಗೆ ಧ್ವನಿ ನೀಡಿದ್ದಾರೆ. ನಗರದ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಗುರುವಾರ ಈ ಹಾಡಿನ ರೆಕಾರ್ಡಿಂಗ್ ಕೆಲಸ ನಡೆಯಿತು.

ಈ ಹಿಂದೆ ‘ದನ ಕಾಯೋನು' ಚಿತ್ರದ ಬಿಡುಗಡೆಗೂ ಮುನ್ನ ಕಾವೇರಿ ಮೇಲೊಂದು ಸಾಹಿತ್ಯ ಬರೆದು, ಅದನ್ನು ಜನಜನಿತಗೊಳಿಸಿದ್ದರು. ಅದನ್ನು ನಟ ದುನಿಯಾ ವಿಜಯ್ ಹಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ ಹಾಡು ವೈರಲ್ ಆಗಿ, ಸಾಕಷ್ಟುಜನಪ್ರಿಯತೆ ಸಿಕ್ಕಿತ್ತು. ಅದಕ್ಕೂ ಮುನ್ನ ‘ಪರಪಂಚ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಯೋಗರಾಜ್ ಭಟ್ಟರಿಗೆ ಸಿಕ್ಕಿದ್ದು ನಟ ಹುಚ್ಚ ವೆಂಕಟ್. ಬಿಗ್ ಬಾಸ್ ಜನಪ್ರಿಯತೆಯಲ್ಲಿದ್ದ ವೆಂಕಟ್ ಕಡೆಯಿಂದ ಒಂದು ಹಾಡು ಹಾಡಿಸಿ, ಅದನ್ನು ‘ಪರಪಂಚ' ಚಿತ್ರಕ್ಕೆ ಬಳಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


