ನಟನೆಗೆ ಪಾದಾರ್ಪಣೆ ಮಾಡಲಿರುವ ಗಾಯಕ ಅದ್ನಾನ್ ಸಾಮಿ
ವಿನಯ್ ಸಪ್ರು ಅವರ ಮುಂದಿನ ಸಿನೆಮಾ 'ಆಫ್ಘನ್- ಇನ್ ಸರ್ಚ್ ಆಫ್ ಎ ಹೋಮ್' ಸಿನೆಮಾದಲ್ಲಿ ಜನಪ್ರಿಯ ಗಾಯಕ ಅದ್ನಾನ್ ಸಾಮಿ, ರಾಧಿಕಾ ರಾವ್ ಅವರೊಂದಿಗೆ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ.

Published On :
ಮುಂಬೈ: ವಿನಯ್ ಸಪ್ರು ಅವರ ಮುಂದಿನ ಸಿನೆಮಾ 'ಆಫ್ಘನ್- ಇನ್ ಸರ್ಚ್ ಆಫ್ ಎ ಹೋಮ್' ಸಿನೆಮಾದಲ್ಲಿ ಜನಪ್ರಿಯ ಗಾಯಕ ಅದ್ನಾನ್ ಸಾಮಿ, ರಾಧಿಕಾ ರಾವ್ ಅವರೊಂದಿಗೆ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಸಂಗೀತ ತುಂಬಿರುವ ಈ ಭಾವನಾತ್ಮಕ ಸಿನೆಮಾದಲ್ಲಿ ಅದ್ನಾನ್ ಸಾಮಿ ಸಂಗೀತಕಾರನ ಪಾತ್ರ ನಿರ್ವಹಿಸಲಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಯುದ್ಧದ ಸಮಯದಲ್ಲಿ ದೇಶ ತೊರೆದು ನಿರಾಶ್ರಿತನಾಗಿ ಬರುವ ಸಂಗೀತಕಾರ ತನ್ನ ಗುರುತನ್ನು ಉಳಿಸಿಕೊಳ್ಳುವ ಮತ್ತು ಅದೇ ಸಮಯದಲ್ಲಿ ಮನೆ ಹುಡುಕಲು ಪ್ರಯತ್ನಿಸುವ ಕರುಣಾಜನಕ ಕಥೆ ಈ ಸಿನೆಮಾ ಹೊಂದಿದೆ. ಯಾವುದೇ ಹಿಂಸೆ ಮತ್ತು ಯುದ್ಧಕ್ಕೆ ಮೊದಲು ಬಲಿಯಾಗುವ ಸಂಸ್ಕೃತಿ, ಸಂಗೀತ ಮತ್ತು ಸಂಗೀತಕಾರನಿಗೆ ಅನ್ವಯಾಗುವ ಸಿನೆಮಾ ಇದು ಎನ್ನಲಾಗಿದೆ.
ರಾಧಿಕಾ ಮತ್ತು ವಿನಯ್, ಅದ್ನಾನ್ ಸಾಮಿಗೆ ಕಥೆ ಹೇಳಿದ ತಕ್ಷಣ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಮೂವರು ಈ ಹಿಂದೆ 'ಲಕ್ಕಿ.. ನೋ ಟೈಮ್ ಫಾರ್ ಲವ್' ಸಿನೆಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಈ ಸಿನೆಮಾದ ಕಥೆ ನನ್ನ ಹೃದಯಕ್ಕೆ ಹತ್ತಿರವಾಗಿದ್ದು, ನಟನಾಗಿ ಮತ್ತು ಭಾರತೀಯನಾಗಿ ಇದು ನನ್ನ ಮೊದಲ ಸಿನೆಮಾ ಎಂದಿದ್ದಾರೆ ಅದ್ನಾನ್. ಭಾರತದ ಸಂವಿಧಾನದಡಿ, ಅತಿ ವಿರಳ ಪ್ರಸಂಗಗಳಲ್ಲಿ ನೀಡುವ ಅವಕಾಶದಲ್ಲಿ, ಭಾರತದ ನಾಗರಿಕ ಸದಸ್ಯತ್ವ ಪಡೆದ ಮೊದಲ ಪಾಕಿಸ್ತಾನಿ ಅದ್ನಾನ್ ಸಾಮಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Adnan SamiRadhika RaoVinay SapruAfghan - In Search Of A Homeಅದ್ನಾನ್ ಸಾಮಿವಿನಯ್ ಸಪ್ರುಆಫ್ಘನ್- ಇನ್ ಸರ್ಚ್ ಆಫ್ ಎ ಹೋಮ್ರಾಧಿಕಾ ರಾವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


