ಸಿನಿಮಾ ಸುದ್ದಿ

ಹುಟ್ಟುಹಬ್ಬಕ್ಕೆ ಅಭಿಮಾನಿ ಸಂಘಗಳಿಗೆ ಗಿಡ ನೆಡುವ ಅಭಿಯಾನ ಸೂಚಿಸಿದ ಸೃಜನ್

ಕಿರುತೆರೆ ರಿಯಾಲಿಟಿ ಕಾರ್ಯಕ್ರಮ, ಬೆಳ್ಳಿ ತೆರೆಯಲ್ಲಿನ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ ಸೃಜನ್ ಲೋಕೇಶ್, ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು,

ಹುಟ್ಟುಹಬ್ಬಕ್ಕೆ ಅಭಿಮಾನಿ ಸಂಘಗಳಿಗೆ ಗಿಡ ನೆಡುವ ಅಭಿಯಾನ ಸೂಚಿಸಿದ ಸೃಜನ್
ನಟ ಸೃಜನ್ ಲೋಕೇಶ್
Published On :
ಬೆಂಗಳೂರು: ಕಿರುತೆರೆ ರಿಯಾಲಿಟಿ ಕಾರ್ಯಕ್ರಮ, ಬೆಳ್ಳಿ ತೆರೆಯಲ್ಲಿನ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ ಸೃಜನ್ ಲೋಕೇಶ್, ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದೆ ಸಮಯದಲ್ಲಿ ಸುಮಾರು ಏಳು ಅಭಿಮಾನಿಗಳ ಸಂಘಗಳ ಹುಟ್ಟನ್ನು ನೋಡುತ್ತಿದ್ದಾರೆ. 
ತಮ್ಮ ಹೆಸರಿನಲ್ಲಿ ಅಭಿಮಾನಿ ಸಂಘಗಳನ್ನು ತೆರೆಯುವುದನ್ನು ಹಲವು ದಿನಗಳಿಂದ ವಿರೋಧಿಸುತ್ತಾ ಬಂದಿದ್ದ ನಟ, ಈಗ ಒಪ್ಪಿಗೆ ನೀಡಿದ್ದು ಅವುಗಳನ್ನು ಸಾಮಾಜಿಕ ಒಳಿತಿನ ಕಾರ್ಯಗಳಿಗೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 
ಆರಂಭಕ್ಕೆ ಸೃಜನ್ ತಮ್ಮ ಅಭಿಮಾನಿ ಸಂಘಗಳ ಮೂಲಕ ಕರ್ನಾಟಕದಾದ್ಯಂತ ೧ ಲಕ್ಷ ಗಿಡ ನೆಡುವ ಅಭಿಯಾನವನ್ನು ಪ್ರಾರಂಭಿಸಿದ್ದು, ಸುಮಾರು ೧೦೦೦ ಗಿಡಗಳನ್ನು ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 
ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ರಿಯಾಲಿಟಿ ಕಾರ್ಯಕ್ರಮ ೨೫೦ ಆವೃತ್ತಿಗಳನ್ನು ಪೂರೈಸಿದ್ದು ಈಗ ಜನಪ್ರಿಯ ನಟ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿರುವ ಭಾಗ ಈ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವುದಕ್ಕೆ ಅತೀವ ಸಂತಸದಿಂದಿದ್ದಾರೆ. 
ಈಮಧ್ಯೆ ತಮ್ಮ ಮುಂದಿನ ಚಿತ್ರ 'ಹ್ಯಾಪಿ ಜರ್ನಿ' ಬಿಡುಗಡೆಗೂ ನಟ ಸಿದ್ಧಾರಾಗಿದ್ದಾರೆ. ಚೊಚ್ಚಲ ನಿರ್ದೇಶಕ ಶ್ಯಾಮ್ ಈ ಸಿನೆಮಾ ನಿರ್ದೇಶಿಸಿದ್ದು, ಶೀಘ್ರದಲ್ಲೇ ಕರ್ನಾಟಕದಾದ್ಯಂತ ತೆರೆ ಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.