'ರಾಜಕುಮಾರ' ಚಿತ್ರ ತೆಲುಗಿಗೆ ರಿಮೇಕ್: ಸಂತೋಷ್ ಆನಂದ್ ರಾಮ್ ನಿರ್ದೇಶನ?
: ಹೊಂಬಾಳೆ ಪಿಲ್ಮ್ಸ್ ನ ಕ್ರಿಯೆಟಿವ್ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇತ್ತೀಚೆಗೆ ಹೈದರಾಬಾದ್ ನಲ್ಲಿ...

Published On :
ಬೆಂಗಳೂರು: ಹೊಂಬಾಳೆ ಪಿಲ್ಮ್ಸ್ ನ ಕ್ರಿಯೆಟಿವ್ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇತ್ತೀಚೆಗೆ ಹೈದರಾಬಾದ್ ನಲ್ಲಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕನ್ನಡದ ಯಶಸ್ವಿ ರಾಜಕುಮಾರ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡುತ್ದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಸಂಬಂಧ ಮಾಹಿತಿ ನೀಡಲು ಕಾರ್ತಿಕ್ ಮತ್ತು ಸಂತೋಷ್ ನಿರಾಕರಿಸಿದ್ದಾರೆ. ರಾಜಕುಮಾರ ಸಿನಿಮಾ ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕುಮಾರ ಸಿನಿಮಾ ರಿಮೇಕ್ ರೈಟ್ಸ್ ಗೆ ಸಾಕಷ್ಟು ಬೇಡಿಕೆಯಿದೆಯಂತೆ, ಹೊಂಬಾಳೆ ಫಿಲ್ಮ್ಸ್ ಮೊದಲ ಬಾರಿಗೆ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. ತೆಲಗಿನಲ್ಲಿಯೂ ಕೂಡ ಸಂತೋಷ್ ಆನಂದ್ ರಾಮ್ ನಿರ್ದೇಶಿಸಲಿದ್ದಾರೆ. ನಿನ್ನಿಂದಲೇ ಸಿನಿಮಾದಿಂದ ಪ್ರೊಡಕ್ಷನ್ ಆರಂಭಿಸಿದ ಹೊಂಬಾಳೆ ಫಿಲ್ಮ್ಸ್ ಮಾಸ್ಟರ್ ಫೀಸ್ ಮತ್ತು ರಾಜಕುಮಾರ ಸಿನಿಮಾ ನಿರ್ಮಾಣ ಮಾಡಿತ್ತು. ಸದ್ಯ ಯಶ್ ಅಭಿನಯದ ಕೆಜಿಎಫ್ ಚತ್ರ ನಿರ್ಮಿಸುತ್ತಿದೆ.
ಕಾರ್ತಿಕ್ ಗೌಡ ಸಂತೋಷ್ ಆನಂದ್ ರಾಮ್ ರಾಜ ಕುಮಾರ ಸಿನಿಮಾವನ್ನು ತೆಲುಗಿನಲ್ಲಿ ತಯಾರಿಸಿದರೇ ನಾಯಕ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಇನ್ನೂ ಹೈದರಾಬಾದ್ ನಲ್ಲಿ ಕಾರ್ತಿಕ್ ಗೌಡ ಮತ್ತು ಸಂತೋಷ್ ಆನಂದ್ ರಾಮ್ ನಿರ್ದೇಶಕ ರಾಜಮೌಳಿ ಅವರನ್ನು ಭೇಟಿ ಮಾಡಿದ್ದಾರೆ. ರಾಜಮೌಳಿ ನಿವಾಸಕ್ಕೆ ತೆರಳಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾಗಿ ಕಾರ್ತಿಕ್ ಗೌಡ ಹೇಳಿದ್ದಾರೆ. ರಾಜಕುಮಾರ ಸಿನಿಮಾ ಬಗ್ಗೆ ಅದರಲ್ಲೂ ಬೊಂಬೆ ಹೇಳುತೈತೆ ಹಾಡಿನ ಬಗ್ಗೆ ರಾಜಮೌಳಿ ವಿಚಾರಿಸಿದ್ದರಂತೆ. ಆದರೆ ತಮ್ಮ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದ ಕಾರಣ ಹಾಡು ಕೇಳಲು ಸಾಘ್ಯವಾಗಿಲ್ಲ , ನಂತರ ರಾಜಮೌಳಿ ಮತ್ತು ಅವರ ಪತ್ನಿ ಇಬ್ಬರು ಹಾಡನ್ನು ನೋಡಿ ಮೆಚ್ಚಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karthik Gowdaಕಾರ್ತಿಕ್ ಗೌಡSanthosh AnanddramSS Rajamouliಎಸ್ ಎಸ್ ರಾಜಮೌಳಿRajakumaraರಾಜಕುಮಾರಸಂತೋಷ ಆನಂದ ರಾಮ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


