ಟ್ರೆಂಡಿ ಹಾಡಿಗಾಗಿ ವಿಳಂಬವಾದ 'ಪಂಟ'; ಶೀಘ್ರದಲ್ಲೇ ಬಿಡುಗಡೆ
ಎಸ್ ನಾರಾಯಣ್ ನಿರ್ದೇಶನದ ಅನೂಪ್ ರೇವಣ್ಣ ನಟಿಸಿದ್ದ 'ಪಂಟ' ಮೊದಲು ನಿಗದಿಯಾದಂತೆ ಫೆಬ್ರವರಿ ೧೭ಕ್ಕೆ ಬಿಡುಗಡೆಯಾಗಬೇಕಿತ್ತು ಆದರೆ ಅದು ಕೊನೆಯ ಕ್ಷಣದಲ್ಲಿ ಬದಲಾಗಿತ್ತು.

Published On :
ಬೆಂಗಳೂರು: ಎಸ್ ನಾರಾಯಣ್ ನಿರ್ದೇಶನದ ಅನೂಪ್ ರೇವಣ್ಣ ನಟಿಸಿದ್ದ 'ಪಂಟ' ಮೊದಲು ನಿಗದಿಯಾದಂತೆ ಫೆಬ್ರವರಿ ೧೭ಕ್ಕೆ ಬಿಡುಗಡೆಯಾಗಬೇಕಿತ್ತು ಆದರೆ ಅದು ಕೊನೆಯ ಕ್ಷಣದಲ್ಲಿ ಬದಲಾಗಿತ್ತು. ಕಾರಣ ನಿರ್ಮಾಪಕ ಸುಬ್ರಮಣ್ಯಮ್ ಟ್ರೆಂಡಿ ಹಾಡೊಂದನ್ನು ಸೇರಿಸುವುದಕ್ಕೆ ಮಾಡಿದ ಮನವಿಯನ್ನು ನಿರ್ದೇಶಕ ಪುರಸ್ಕರಿಸಿದ್ದು. ಅಲ್ಲದೆ ಅದೇ ವಾರ ಅನೂಪ್ ನಟನೆಯ ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕ್ ಗೆ ತೆರಳುವವರಿದ್ದರು. ಆದುದರಿಂದ ಚಿತ್ರತಂಡ ಅವರು ಹಿಂದಿರುಗುವವರೆಗೂ ಕಾಯಲು ನಿಶ್ಚಯಿಸಿತ್ತು.
ಈಗ ನಟ ಎರಡು ವಾರಗಳ ಹಿಂದೆ ಹಿಂದಿರುಗಿದ್ದು, ಇಂದಿನಿಂದ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಜರುಗಲಿದೆ.
"ನಿರ್ದೇಶಕರು ಸಿನೆಮಾವನ್ನು ಜೂನ್ ೨೩ ಕ್ಕೆ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ. ಅದಕ್ಕೂ ಮುಂಚೆ ಈ ಒಂದು ಹಾಡನ್ನು ಮುಗಿಸಬೇಕಿದೆ" ಎನ್ನುತ್ತಾರೆ ಅನೂಪ್.
ಸಿನೆಮಾಗೆ ಮೂರು ಹಾಡುಗಳು ಸಿದ್ಧವಾಗಿದ್ದರೂ, ಕೊನೆಗೆ ಎರಡು ಹಾಡುಗಳನ್ನು ಮಾತ್ರ ಉಳಿಸಿಕೊಳ್ಳಲು ನಿರ್ದೇಶಕ ಯೋಜಿಸಿದ್ದಾರಂತೆ. "ಚಿತ್ರೀಕರಣ ಸಂಪೂರ್ಣಗೊಂಡ ಮೇಲೆ ಯಾವ ಹಾಡುಗಳನ್ನು ಉಳಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರೇ ನಿರ್ಧರಿಸಲಿದ್ದಾರೆ" ಎನ್ನುತ್ತಾರೆ ಅನೂಪ್.
ಮೊನಿಕಾ ಸಿನೆಮಾದ ನಾಯಕ ನಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


