ಸಿನಿಮಾ ಸುದ್ದಿ

ಬರಲಿದೆಯೆ 'ಆಪರೇಷನ್ ಅಲಮೇಲಮ್ಮ' ಭಾಗ ಎರಡು?

ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಸಿನೆಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಆದರೆ ಎರಡನೇ ಭಾಗದ ಬಗ್ಗೆ ಚರ್ಚೆಗಳು ನಡೆದಿವೆ. ನಿರ್ದೇಶಕನ ಚೊಚ್ಚಲ ಸಿನೆಮಾ

ಬರಲಿದೆಯೆ 'ಆಪರೇಷನ್ ಅಲಮೇಲಮ್ಮ' ಭಾಗ ಎರಡು?
'ಆಪರೇಷನ್ ಅಲಮೇಲಮ್ಮ' ಸಿನೆಮಾ ಸ್ಟಿಲ್
Published On :
ಬೆಂಗಳೂರು: ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಸಿನೆಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಆದರೆ ಎರಡನೇ ಭಾಗದ ಬಗ್ಗೆ ಚರ್ಚೆಗಳು ನಡೆದಿವೆ. ನಿರ್ದೇಶಕನ ಚೊಚ್ಚಲ ಸಿನೆಮಾ 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ'ಯಷ್ಟೇ ಈ ಸಿನೆಮಾ ಕೂಡ ಚರ್ಚೆಯನ್ನು ಎಬ್ಬಿಸಿದೆ. ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ನಟಿಸಿರುವ ಪರ್ಮಿ ಹಾಗು ಅನನ್ಯ ಟೀಚರ್ ಪಾತ್ರಗಳು ಮತ್ತು ಜುಡಾ ಸ್ಯಾಂಡಿ ಸಂಗೀತದಲ್ಲಿ ಮೂಡಿರುವ ಹಾಡುಗಳು ಜನರ ಮನಸ್ಸನ್ನು ಗೆದ್ದಿವೆ. ಇಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಸಿನೆಮಾ ಇನ್ನಷ್ಟು ಅಭಿಮಾನಿಗಳನ್ನು ಸೆಳೆಯಲಿದೆ ಎನ್ನಲಾಗುತ್ತಿದೆ.
"ನಮ್ಮ ಹಿಂದಿನ ಟೀಸರ್ ಗಳು ಮುಖ್ಯ ಪಾತ್ರಗಳನ್ನು ಮಾತ್ರ ಪರಿಚಯ ಮಾಡಿಕೊಟ್ಟಿದ್ದವು. ಈಗ ಹೊಸ ಟ್ರೇಲರ್ ಹಾಸ್ಯ ಕಥೆಯ ಮೇಲೆ ಬೆಳಕು ಚೆಲ್ಲಲಿದೆ" ಎನ್ನುವ ನಿರ್ದೇಶಕ ಸುನಿ, ಜುಲೈ ಮೊದಲ ವಾರದ ಬಿಡುಗಡೆಗೆ ಎದುರುನೋಡುತ್ತಿರುವುದಾಗಿ ಹೇಳುತ್ತಾರೆ. 
'ಆಪರೇಷನ್ ಅಲಮೇಲಮ್ಮ' ಸಿನೆಮಾವನ್ನು ಹೊಂಬಾಳೆ ಫಿಲಂಸ್ ನ ಕಾರ್ತಿಕ್ ಗೌಡ ವಿತರಣೆ ಮಾಡುತ್ತಿದ್ದಾರೆ. "ವಿತರಣೆ ಹಕ್ಕುಗಳನ್ನು ಕೊಳ್ಳುವ ಮುಂಚೆಯೇ ಅವರು ನಮ್ಮ ಸಿನೆಮಾ ನೋಡಿದರು ಮತ್ತು ಅವರಿಗೆ ಆತ್ಮವಿಶ್ವಾಸ ಮೂಡಿದೆ" ಎನ್ನುತ್ತಾರೆ ಸುನಿ. ರಿಷಿ ಅವರ ನಟನೆಯಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದು, ಈಗ ಅವರು ತಮ್ಮ ಎರಡನೇ ಸಿನೆಮಾವನ್ನು ಕೂಡ ಪಡೆದಿದ್ದಾರಂತೆ. ಈ ಸಿನೆಮಾವನ್ನು ಹೇಮಂತ್ ಎಂ ರಾವ್ ನಿರ್ದೇಶಿಸುತ್ತಿದ್ದು, ಪುನೀತ್ ರಾಜಕುಮಾರ್ ಮತ್ತು ಕಾರ್ತಿಕ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಆದರೆ ಅಧಿಕೃತ ಘೋಷಣೆ ಇನ್ನು ಆಗಬೇಕಿದೆ. 
ಈಮಧ್ಯೆ 'ಆಪರೇಷನ್ ಅಲಮೇಲಮ್ಮ' ಎರಡನೇ ಭಾಗಕ್ಕೂ ಯೋಜನೆ ರೂಪಿಸಲಾಗುತ್ತಿದೆಯಂತೆ. "ರಿಷಿ ಮತ್ತು ನಾನು ಇದರ ಬಗ್ಗೆ ಚರ್ಚಿಸಿದ್ದೇವೆ ಮತ್ತು ಒಂದು ಸಾಲಿನ ಸ್ಕ್ರಿಪ್ಟ್ ನೊಂದಿಗೆ ನಾವು ಈಗ ಸಿದ್ಧರಿದ್ದೇವೆ" ಎನ್ನುವ ಸುನಿ "'ಆಪರೇಷನ್ ಅಲಮೇಲಮ್ಮ' ಸಿನೆಮಾಗೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರೆಯೆ ಮೇರೆಗೆ ಹೊಸ ಸ್ಕ್ರಿಪ್ಟ್ ಅನ್ನು ಮುಂದುವರೆಸುತ್ತೇವೆ. ಈಗಾಗಲೇ ಇಬ್ಬರು ನಿರ್ಮಾಪಕರು ನಮ್ಮನ್ನು ಕೇಳಿದ್ದಾರೆ ಆದರೆ ನಾವಿನ್ನು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ" ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.