ಸಿನಿಮಾ ಸುದ್ದಿ

'ಕಾಲ' ಮುಂಬೈ ಚಿತ್ರೀಕರಣ ಮುಗಿಸಿದ ರಜನಿಕಾಂತ್

ಭೂಗತ ಲೋಕದ ತಮಿಳು ಸಿನೆಮಾ 'ಕಾಲ'ದ ಮುಂಬೈ ಭಾಗದ ಚಿತ್ರೀಕರಣವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಕಾಲ' ಮುಂಬೈ ಚಿತ್ರೀಕರಣ ಮುಗಿಸಿದ ರಜನಿಕಾಂತ್
'ಕಾಲ' ಸಿನೆಮಾದ ಸ್ಟಿಲ್
Published On :
ಚೆನ್ನೈ: ಭೂಗತ ಲೋಕದ ತಮಿಳು ಸಿನೆಮಾ 'ಕಾಲ'ದ ಮುಂಬೈ ಭಾಗದ ಚಿತ್ರೀಕರಣವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
"ರಜನಿ ಸರ್ ತಮ್ಮ ಭಾಗವನ್ನು ಸಂಪೂರ್ಣಗೊಳಿಸಿದ್ದು, ಅವರು ಈ ವಾರ ಚೆನ್ನೈಗೆ ಹಿಂದಿರುಗಲಿದ್ದಾರೆ. ಅವರು ಕಳೆದ ಎರಡು ವಾರಗಳವರೆಗೆ ವಿರಾಮವಿಲ್ಲದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಉಳಿದ ಚಿತ್ರತಂಡ ಇನ್ನೊಂದು ವಾರ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ" ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 
ಎರಡನೇ ಹಂತದ ಚಿತ್ರೀಕರಣ ಚೆನ್ನೈನಲ್ಲಿ ತಲೆ ಎತ್ತಿರುವ ಧರವಿ ಸ್ಲಮ್ ಸೆಟ್ ನಲ್ಲಿ ನಡೆಯಲಿದೆ. 
"ರಜನಿ ಸರ್ ಇದರಲ್ಲಿ ಸ್ಲಮ್ ದೊರೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲು ಇದನ್ನು ಧರವಿಯಲ್ಲೇ ಶೂಟ್ ಮಾಡುವ ಯೋಜನೆ ಇತ್ತು ಆದರೆ ಇದು ಅಸಾಧ್ಯ ಎಂದು ನಮಗೆ ನಂತರ ಅರಿವಾಯಿತು. ಆದುದರಿಂದ ಚೆನ್ನೈನಲ್ಲಿಯೇ ವಿಸ್ತೃತವಾದ ಸೆಟ್ ಹಾಕಲಾಗಿದೆ" ಎಂದು ಮೂಲಗಳು ತಿಳಿಸಿವೆ. 
ಪ ರಂಜಿತ್ ನಿರ್ದೇಶನದ ಈ ಸಿನೆಮಾದಲ್ಲಿ ನಾನಾ ಪಾಟೇಕರ್, ಹುಮಾ ಖುರೇಷಿ, ಅಂಜಲಿ ಪಾಟೀಲ್, ಸಮುದ್ರಕಿಣಿ ಮತ್ತು ಪಂಕಜ್ ತ್ರಿಪಾಠಿ ನಟಿಸುತ್ತಿದ್ದಾರೆ. 
ಕಳೆದ ವರ್ಷದ 'ಕಬಾಲಿ' ಸಿನೆಮಾದ ನಂತರ ರಜನಿಕಾಂತ್ ಮತ್ತು ರಂಜಿತ್ ಮತ್ತೆ ಒಂದಾಗಿದ್ದಾರೆ. ಧನುಷ್ ಈ ಸಿನೆಮಾವನ್ನು ನಿರ್ಮಿಸುತ್ತಿದ್ದು, ಅವರು ಕೂಡ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.