ಸಿನಿಮಾ ಸುದ್ದಿ

'ತಾರಕಾಸುರ' ಸಿನೆಮಾದಲ್ಲಿ ಖಳನಾಯಕನಾಗಿ ಬ್ರಿಟಿಷ್ ನಟ

ಸಿನೆಮಾದ ಬಜೆಟ್ ನ ಬಹುತೇಕ ಭಾಗವನ್ನು ಹೀರೋಗಳಿಗೆ ವಿನಿಯೋಗಿಸುವ ಚಿತ್ರರಂಗದಲ್ಲಿ, ಈಗ ಖಳನಾಯಕನಿಗೆ ಭಾರಿ ಹೂಡಿಕೆ ಮಾಡಿರುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಜರುಗಿದೆ.

'ತಾರಕಾಸುರ' ಸಿನೆಮಾದಲ್ಲಿ ಖಳನಾಯಕನಾಗಿ ಬ್ರಿಟಿಷ್ ನಟ
ಬ್ರಿಟಿಷ್ ನಟ ಡ್ಯಾನಿ ಸಪಾನಿ
Published On :
ಬೆಂಗಳೂರು: ಸಿನೆಮಾದ ಬಜೆಟ್ ನ ಬಹುತೇಕ ಭಾಗವನ್ನು ಹೀರೋಗಳಿಗೆ ವಿನಿಯೋಗಿಸುವ ಚಿತ್ರರಂಗದಲ್ಲಿ, ಈಗ ಖಳನಾಯಕನಿಗೆ ಭಾರಿ ಹೂಡಿಕೆ ಮಾಡಿರುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಜರುಗಿದೆ. 
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ತಮ್ಮ ಮುಂದಿನ ಚಿತ್ರಕ್ಕೆ ಹಾಲಿವುಡ್ ನಟನನ್ನು ಕರೆತಂದಿದ್ದಾರೆ. ಈ ಸಿನೆಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿರುವ ಬ್ರಿಟಿಷ್ ನಟ ಡ್ಯಾನಿ ಸಪಾನಿ ಅವರಿಗೆ ನೀಡಲಿರುವ ಹಣ ಬರ್ರೋಬರ್ರಿ ೧ ಕೋಟಿ!
ಹಲವು ಸಿನೆಮಾಗಳಲ್ಲಿ, ಟೆಲಿ ಧಾರಾವಾಹಿಗಳಲ್ಲಿ ನಟಿಸಿರುವ ಈ ನಟ ಈ ಹಿಂದೆ ತಮಿಳು ಸಿನೆಮಾ 'ಸಿಂಗಂ ೨' ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ಸ್ಯಾಂಡಲ್ ವುಡ್ ನಲ್ಲಿ ಅವರು ಚೊಚ್ಚಲ ನಟ ವೈಭವ್ ಎದುರು ಸೆಣಸಲಿದ್ದಾರೆ. 
ಜೂನ್ ೫ ರಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ಡ್ಯಾನಿ ಅಂದೇ ಸೆಟ್ ಸೇರಲಿದ್ದಾರೆ. "ನಮಗೆ ರಾಕ್ಷಸನ ಕಳೆ ಹೊಂದಿರುವ ನಟನ ಅವಶ್ಯಕತೆ ಇತ್ತು. ಇದಕ್ಕೆ ಡ್ಯಾನಿ ಬಹಳವಾಗಿ ಹೊಂದಿಕೊಳ್ಳುತ್ತಾರೆ. ಅಲ್ಲದೆ ನಮಗೆ ತಾಜಾ ಮುಖವೊಂದನ್ನು ತೊಡಗಿಸಿಕೊಳ್ಳಬೇಕಿತ್ತು. ಅವರಿಗೆ ಕೊಟ್ಟಿರುವ ಪ್ರತಿ ಪೈಸೆಗೂ ಅವರು ಅರ್ಹ" ಎನ್ನುತ್ತಾರೆ ಈ ಆಯ್ಕೆಯ ಬಗ್ಗೆ ಭರವಸೆ ಹೊಂದಿರುವ ಬಂಡಿಯಪ್ಪ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.