ಸಿನಿಮಾ ಸುದ್ದಿ

ತೆಲುಗು ಮತ್ತು ಕನ್ನಡದಲ್ಲಿ ಉಪೇಂದ್ರ ನಟನೆಯ ಹೋಂ-ಮಿನಿಸ್ಟರ್

ಹಲವು ದಿನಗಳಿಂದ ಪೆಂಡಿಂಗ್ ಉಳಿದಿದ್ದ ಪ್ರಾಜೆಕ್ಟ್ ಆರಂಭವಾಗಿದೆ. ಪೂರ್ಣನಾಯ್ಡು ನಿರ್ಮಾಣದ ಮುಂದಿನ ಸಿನಿಮಾದಲ್ಲಿ ರಿಯಲ್ ಸ್ಟಾರ್ ...

ತೆಲುಗು ಮತ್ತು ಕನ್ನಡದಲ್ಲಿ ಉಪೇಂದ್ರ ನಟನೆಯ ಹೋಂ-ಮಿನಿಸ್ಟರ್
ಉಪೇಂದ್ರ
Published On :
ಬೆಂಗಳೂರು: ಹಲವು ದಿನಗಳಿಂದ ಪೆಂಡಿಂಗ್ ಉಳಿದಿದ್ದ ಪ್ರಾಜೆಕ್ಟ್ ಆರಂಭವಾಗಿದೆ. ಪೂರ್ಣನಾಯ್ಡು ನಿರ್ಮಾಣದ ಮುಂದಿನ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿದ್ದಾರೆ. ಹೋಂ ಮಿನಿಸ್ಟರ್ ಎಂಬ ಟೈಟಲ್ ನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿದೆ.
ಇಷ್ಟು ದಿನಗಳ ಕಾಲ ನಟ ಉಪೇಂದ್ರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾಯುತ್ತಿದ್ದರು. ಆದರೆ ಉಪೇಂದ್ರ ಅವರಿಗಾಗಿ ಕಾದಿದ್ದು ನನಗೆ ಬೇಸರ ತರಿಸಿಲ್ಲ, ಏಕೆಂದರೆ ಚಿತ್ರದ ಪಾತ್ರಕ್ಕೆ ಉಪೇಂದ್ರ ಅವರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂಬುದು ನಿರ್ಮಾಪಕರ ಅಭಿಪ್ರಾಯ.
ಜೊತೆಗೆ ಉಪೇಂದ್ರ ತೆಲುಗು ಸಿನಿಮಾರಂಗದಲ್ಲಿ ಪ್ರಸಿದ್ದರಾಗಿದ್ದಾರೆ. ಹೋಂ ಮಿನಿಸ್ಚರ್ ಸಿನಿಮಾವನ್ನು ಸುಜಯ್ ಕೆ ಶ್ರೀ ಹರಿ ನಿರ್ದೇಶಿಸುತ್ತಿದ್ದಾರೆ.
ಟಾಲಿವುಡ್ ನಲ್ಲಿ ಶ್ರೀಹರಿ ನಾನು ಎಂದೇ ಪ್ರಸಿದ್ಧವಾಗಿರುವ ಅವರು ಸದ್ಯ ಮಹೇಶ್ ಬಾಬು ಅವರ ಹೊಸ ಸಿನಿಮಾ ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ. 
ಹೋಂ ಮಿನಿಸ್ಟರ್  ಕೌಟುಂಬಿಕ ಚಿತ್ರವಾಗಿದ್ದು, ನಂತರ ಕಥೆ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಹೀಗಾಗಿ ಸಿನಿಮಾ ಕೂತೂಹಲ ಹೆಚ್ಚಿಸಿದೆ. ಚಿತ್ರತಂಡ ನಾಯಕಿ ನಟಿಗಾಗಿ ಹುಡುಕಾಟ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.