ಸಿನಿಮಾ ಸುದ್ದಿ

ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ

ಆಧ್ಯಾತ್ಮಿಕವಾಗಿ ಧರ್ಮದ ಕಡೆಗೆ ಒಲವು ತೋರುತ್ತದೆ. ಈ ಕಾರಣದಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ನನ್ನ ಸಹೋದರಿಯಂತೆ ನಾನು ...

ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ
ಅಕ್ಷರ ಹಾಸನ್
Published On :
ಚೆನ್ನೈ: ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರ ಹಾಸನ್  ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಬೌದ್ಧಧರ್ಮವು ಆಧ್ಯಾತ್ಮಿಕವಾಗಿ ಧರ್ಮದ ಕಡೆಗೆ ಒಲವು ತೋರುತ್ತದೆ. ಈ ಕಾರಣದಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ನನ್ನ ಸಹೋದರಿಯಂತೆ ನಾನು ನಾಸ್ತಿಕಳು. ನನಗೆ ಬೌದ್ಧ ಧರ್ಮನದ ಆಚರಣೆ ತತ್ವ ಸಿದ್ಧಾಂತಗಳು ಇಷ್ಟವಾಯಿತು. ಹೀಗಾಗಿ ಮತಾಂತರೊಗೊಂಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. 
ನನ್ನ ತಂದೆ, ತಾಯಿ ಮತ್ತು, ಸಹೋದರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡುವುದು ನನ್ನ ಬಯಕೆಯಾಗಿದೆ. ಆ ಮೂಲಕ ನಾನು ನಿರ್ದೇಶನಕ್ಕೆ ಸೂಕ್ತವಾದವಳು ಎಂಬುದನ್ನು ತೋರಿಸುತ್ತೇನೆ ಎಂದು ವಿವರಿಸಿದ್ದಾರೆ. 
ಅಕ್ಷರ ಧನುಷ್ ಜೊತೆ ಹಿಂದಿ ಚಿತ್ರ ಶಮಿತಾಬ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಜಿತ್ ಜೊತೆ ನಟಿಸಿರುವ ವಿವೇಗಮ್ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಈಕೆಯ ಸಹೋದರಿ ಶೃತಿ ಹಾಸನ್ ಕೂಡ ತಮಿಳಿನ ಖ್ಯಾತ ನಟಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.