ಮನೆಯಲ್ಲಿ ಗಾಂಜಾ ಸಂಗ್ರಹ: ನಟಿ ಕಾಜಲ್ ಅಗರ್ ವಾಲ್ ಮ್ಯಾನೇಜರ್ ಬಂಧನ
ತೀವ್ರ ಸಂಚಲನ ಮೂಡಿಸಿರುವ ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ಕಾಜಲ್ ಅಗರ್ ವಾಲ್ ಮ್ಯಾನೇಜರ್ ನನ್ನು ...

Published On :
ಹೈದರಾಬಾದ್: ತೀವ್ರ ಸಂಚಲನ ಮೂಡಿಸಿರುವ ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ಕಾಜಲ್ ಅಗರ್ ವಾಲ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಟಿ ಕಾಜಲ್ ಮ್ಯಾನೇಜರ್ ಪುಟ್ಕರ್ ರಾನ್ಸನ್ ಜೋಸೆಫ್ ಅಲಿಯಾಸ್ ಜಾನಿ ಜೊಸೆಪ್ ಮನೆಯಲ್ಲಿ 4 ಗ್ರಾಂ ಗಾಂಜಾ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
38 ವರ್ಷದ ರಾನ್ಸನ್ ಜೊಸೆಫ್ ವಾಸವಿರುವ ಮನಿಕೊಂಡದ ಪ್ರೈಡ್ ಅಪಾರ್ಟ್ ಮೆಂಟ್ ನಲ್ಲಿ ಗಾಂಜಾ ಪತ್ತೆಯಾಗಿದೆ. ಮಾದಕ ದ್ರವ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎಸ್ ಐಟಿ ಈಗಾಗಲೇ 12 ಟಾಲಿವುಡ್ ಕಲಾವಿದರಿಗೆ ಸಮನ್ಸ್ ನೀಡಿದೆ.ಡ್ರಗ್ಸ್ ಕೇಸ್ ಸಂಬಂಧ ಪಟ್ಟಂತೆ ರಾನ್ಸನ್ ಜೊಸೆಫ್ ಸೇರಿದಂತೆ ಇದುವರೆಗೂ 19 ಮಂದಿಯನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಈವರೆಗೆ ಚಿತ್ರರಂಗದವರನ್ನು ವಿಚಾರಣೆಗೆ ಒಳಪಡಿಸಿರುವ ಎಸ್ ಐಟಿ ಅಧಿಕಾರಿಗಳು ಅವರು ನೀಡಿದ ಮಾಹಿತಿ ಆಧರಿಸಿಯೇ ಜೋಸೆಫ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇಂತಹ ಹಲವಾರು ವ್ಯಕ್ತಿಗಳ ಮೇಲೆ ಪೊಲೀಸರು ದೃಷ್ಟಿ ಹಾಯಿಸಿದ್ದು ಮತ್ತಷ್ಟು ಸೆಲಬ್ಧರಿಟಿಗಳು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arrestಮ್ಯಾನೇಜರ್managerKajal AggarwalJohny JosephDrug Caseಕಾಜಲ್ ಅಗರ್ ವಾಲ್ಜಾನಿ ಜೋಸೆಫ್ಬಂಧನ. ಡ್ರಗ್ ಪ್ರಕರಣ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


