ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡ ಬಾಲಿವುಡ್ ನಟಿ ಸನ್ನಿ ಲಿಯೋನ್!
ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಪತಿ ಡೆನಿಯಲ್ ವೆಬರ್ ಈಗ 21 ತಿಂಗಳ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ...

Published On :
ಮುಂಬಯಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಪತಿ ಡೆನಿಯಲ್ ವೆಬರ್ ಈಗ 21 ತಿಂಗಳ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಗುವನ್ನು ದತ್ತು ಪಡೆಯಲು ಅನಾಥಾಶ್ರಮಕ್ಕೆ ಮನವಿ ಮಾಡಿದ್ದರು. ಅಂತಿಮವಾಗಿ ಸನ್ನಿ ಲಿಯೋನ್ ದಂಪತಿಯ ಕನಸು ನನಸಾಗಿದ್ದು.
ಮಹಾರಾಷ್ಟ್ರದ ಲಾತೂರ್‌ನಿಂದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಡಲಾಗಿದೆ.
ಮಗುವನ್ನು ಕಾನೂನಾತ್ಮಕವಾಗಿ ಮನೆಗೆ ಕರೆದುಕೊಂಡು ಹೋಗಲು ಅವಕಾಶ ಪಡೆದು ಸಂಭ್ರಮಿಸಿದ್ದಾರೆ.
ಕಾನೂನು ಅನ್ವಯ ದತ್ತು ಪಡೆಯಲು ಹಲವು ಪತ್ರಗಳನ್ನು ಸಿದ್ದಪಡಿಸಲು ಹೆಚ್ಚು ತಿರುಗಾಡಬೇಕಾಯಿತು.ಈಗ ನಿಶಾಳ ಮುಖ ನೋಡಿ ಖುಷಿ ಎನಿಸುತ್ತಿದೆ ಎಂದು ಡೆನಿಯಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sunny Leoneಸನ್ನಿ ಲಿಯೋನ್baby girlಹೆಣ್ಣು ಮಗುದತ್ತು ಸ್ವೀಕಾರDaniel WeberNisha Kaur Weberadoptsಡೇನಿಯಲ್ ವೇಬರ್ನಿಶಾ ಕೌರ್ ವೇಬರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


