ದಂಡುಪಾಳ್ಯ-2 ನಗ್ನ ವಿಡಿಯೋ ವಿವಾದ: ಸುದ್ದಿಗೋಷ್ಠಿಯಲ್ಲಿ ನಟಿ ಸಂಜನಾ ಸ್ಪಷ್ಟನೆ
ದಂಡುಪಾಳ್ಯ-2 ಚಿತ್ರದಲ್ಲಿನ ನಗ್ನ ವಿಡಿಯೋ ಲೀಕ್ ಆದ ಕುರಿತು ಭಾರಿ ವಿವಾದಕ್ಕೆ ಗ್ರಾಸವಾಗಿರುವ ಹಿನ್ನಲೆಯಲ್ಲಿ ನಟಿ ಸಂಜನಾ ಮಾಧ್ಯಮಗಳ ಮುಂದೆ ವಿವಾದ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ದಂಡುಪಾಳ್ಯ-2 ಚಿತ್ರದಲ್ಲಿನ ನಗ್ನ ವಿಡಿಯೋ ಲೀಕ್ ಆದ ಕುರಿತು ಭಾರಿ ವಿವಾದಕ್ಕೆ ಗ್ರಾಸವಾಗಿರುವ ಹಿನ್ನಲೆಯಲ್ಲಿ ನಟಿ ಸಂಜನಾ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಬುಧವಾರ ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟಿ ಸಂಜನಾ, ನಗ್ನ ವಿಡಿಯೋ ಸಂಬಂಧ ಮಾಧ್ಯಮಗಳು ವರದಿ ಮಾಡಿದ ಪರಿ ಸರಿಯಲ್ಲ. ಮಾಧ್ಯಮಗಳಲ್ಲಿ ಇಂತಹ ನಗ್ನ ದೃಶ್ಯಕ್ಕೆ ನಟಿ ಸಂಜನಾ ಒಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ಇಂತಹ ಪ್ರಶ್ನೆಗಳು ಕೇಳುವ ಮುನ್ನ ಯಾವುದೇ ಮಾಧ್ಯಮಗಳು ಚಿತ್ರೀಕರಣದ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರೇ ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ವಿಡಿಯೋ ಲೀಕ್ ಆದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನಟಿ ಸಂಜನಾ, ವಿಡಿಯೋವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಬೆತ್ತಲಾಗಿರುವ ಸಂಜನಾ ಎಂದು ಬರೆಯಬೇಡಿ ಎಂದು ಮನವಿ ಮಾಡಿದ ಸಂಜನಾ ನಾನು ಕೂಡ ಪ್ರಜ್ಞಾವಂತಳಾಗಿದ್ದೇನೆ. ಚಿತ್ರೋಧ್ಯಮದಲ್ಲಿ ನಾನೂ ಸಾಕಷ್ಟು ಅನುಭವ ಹೊಂದಿದ್ದೇನೆ. ನನ್ನ ಇತಿಮಿತಿ ನನಗರಿವಿದೆ. ಹೀಗಾಗಿ ಇಂತಹ ಕಾರ್ಯಕ್ಕೆ ನಾನು ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.
ನಾನು ಸಂಪೂರ್ಣ ಬೆತ್ತಲಾಗಿಲ್ಲ: ನಟಿ ಸಂಜನಾ ಸ್ಪಷ್ಟನೆ
ಇನ್ನು ವಿವಾದಿತ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ನಟಿ ಸಂಜನಾ, ಚಿತ್ರೀಕರಣದ ವೇಳೆ ನಾನು ಸಂಪೂರ್ಣ ಬೆತ್ತಲಾಗಿಲ್ಲ. ದೇಹದ ಮುಂಭಾಗ ಸಂಪೂರ್ಣ ಮುಚ್ಚಲಾಗಿತ್ತು. ಹಿಂಬದಿಯ ಬೆನ್ನಿನ ಭಾಗ ಮಾತ್ರ ತೆರೆದ ರೀತಿಯಲ್ಲಿತ್ತು ಎಂದು ಹೇಳಿದ್ದಾರೆ. ಅಂತೆಯೇ ಈ ಬಗ್ಗೆ ಚಿತ್ರೀಕರಣದ ವಿಡಿಯೋಗಳನ್ನೂ ಕೂಡ ಸಂಜನಾ ಬಿಡುಗಡೆ ಮಾಡಿದ್ದು, ವಿಡಿಯೋ ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.
ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುತ್ತೇವೆ: ನಿರ್ಮಾಪಕ ಕೆ ಮಂಜು
ಇದೇ ವೇಳೆ ಸುದ್ದಿಗೋಷ್ಠಿ ಪಾಲ್ಗೊಂಡಿದ್ದ ನಿರ್ಮಾಪಕ ಕೆ ಮಂಜು ಅವರು ಮಾತನಾಡಿ, ಈ ವಿವಾದದಲ್ಲಿ ಚಿತ್ರ ನಿರ್ಮಾಪಕರದ್ದು ಯಾವುದೇ ತಪ್ಪಿಲ್ಲ. ಈ ವಿಡಿಯೋದ ಸಂಪೂರ್ಣ ಹೊಣೆ ನಿರ್ದೇಶಕ ಶ್ರೀನಿವಾಸರಾಜು ಅವರದ್ದೇ ಆಗಿರುತ್ತದೆ. ವಿಡಿಯೋದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಮಾಡಲಾಗಿದ್ದು, ಉದ್ದೇಶಪೂರ್ವಕವಾಗಿ ವಿಡಿಯೋ ತಿರುಚಲಾಗಿದೆ. ತಾಂತ್ರಿಕವಾಗಿ ಬಟ್ಟೆ ತೆಗೆದು ಹಾಕಲಾಗಿದೆ. ಇದು ಕೇವಲ ಪ್ರಚಾರ ಗಿಮಿಕ್ ಆಗಿದ್ದು, ಈ ಬಗ್ಗೆ ವಾಣಿಜ್ಯ ಮಂಡಳಿ ಕ್ರಮ ಜರುಗಿಸಲಿದೆ ಎಂದು ಹೇಳಿದ್ದಾರೆ.
ಅಂತೆಯೇ ನಿರ್ದೇಶಕರನ್ನು ಕರೆಸಿ ಚರ್ಚೆ ಮುಂದಿನ ಕ್ರಮದ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೆ ಮಂಜು ಹೇಳಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಕವಿತಾ ಲಂಕೇಶ್ ಅವರೂ ಕೂಡ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


