ಸಿನಿಮಾ ಸುದ್ದಿ

ದಂಡುಪಾಳ್ಯ 2 ಚಿತ್ರದಲ್ಲಿ ಕ್ರೈಂ ಇಲ್ಲ, ಮುಗ್ಧತೆ ಮತ್ತು ನಾಟಕ ಮಾತ್ರ: ಶ್ರೀನಿವಾಸ್ ರಾಜು

ನಿರ್ದೇಶಕ ಶ್ರೀನಿವಾಸ್ ರಾಜು ಅವರು ನಿರ್ದೇಶಿಸಿದ್ದ ಕ್ರೈಂ ಚಿತ್ರ ದಂಡುಪಾಳ್ಯ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ದಂಡುಪಾಳ್ಯದ 2 ಚಿತ್ರ ನಾಳೆ ತೆರೆ ಕಾಣುತ್ತಿದೆ...

ದಂಡುಪಾಳ್ಯ 2 ಚಿತ್ರದಲ್ಲಿ ಕ್ರೈಂ ಇಲ್ಲ, ಮುಗ್ಧತೆ ಮತ್ತು ನಾಟಕ ಮಾತ್ರ: ಶ್ರೀನಿವಾಸ್ ರಾಜು
ದಂಡುಪಾಳ್ಯ 2
Published On :
ನಿರ್ದೇಶಕ ಶ್ರೀನಿವಾಸ್ ರಾಜು ಅವರು ನಿರ್ದೇಶಿಸಿದ್ದ ಕ್ರೈಂ ಚಿತ್ರ ದಂಡುಪಾಳ್ಯ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ದಂಡುಪಾಳ್ಯದ 2 ಚಿತ್ರ ನಾಳೆ ತೆರೆ ಕಾಣುತ್ತಿದೆ. 
ಇನ್ನು ಚಿತ್ರದ ಕುರಿತಂತೆ ಮಾತನಾಡಿರುವ ಶ್ರೀನಿವಾಸ್ ರಾಜು ಅವರು ದಂಡುಪಾಳ್ಯ ಮೊದಲ ಚಿತ್ರದಲ್ಲಿದ್ದಂತೆ ಬೀಭತ್ಸ್ಯ ರೀತಿಯ ಕೊಲೆಗಳ ದೃಶ್ಯಗಳು ದಂಡುಪಾಳ್ಯ 2 ಚಿತ್ರದಲ್ಲಿ ಇರುವುದಿಲ್ಲ. ಇಲ್ಲಿ ಆರೋಪಿಗಳ ಮುಗ್ಧತೆ ಮತ್ತು ನಾಟಕದ ಕುರಿತು ಚಿತ್ರ ಮೂಡಿಬಂದಿದೆ ಎಂದು ಹೇಳಿದ್ದಾರೆ. 
ದಂಡುಪಾಳ್ಯ 2 ಚಿತ್ರ ದಂಡುಪಾಳ್ಯ ಮುಂದುವರೆದ ಭಾಗ 3ಕ್ಕೆ ಏಣಿಯಂತಾಗಲಿದೆ. ದಂಡುಪಾಳ್ಯ 2 ಚಿತ್ರದಲ್ಲಿ ಗ್ಯಾಂಗ್ ಪೊಲೀಸರಿಗೆ ಸಿಕ್ಕಿ ಜೈಲಿನಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದೆ. ಚಿತ್ರಕ್ಕೆ ಸ್ಥಳೀಯ ಕಲಾವಿದರನ್ನೇ ಆಯ್ಕೆ ಮಾಡಲಾಗಿದ್ದು ಪೂಜಾ ಗಾಂಧಿ, ಶೃತಿ, ಸಂಜನ, ಕರಿ ಸುಬ್ಬು, ರವಿ ಕಾಳೆ, ಡ್ಯಾನಿ, ಜಯದೇವ್, ಮುನಿ ಮತ್ತು ಯತಿರಾಜ್ ಅಭಿನಯಿಸಿದ್ದಾರೆ. ಇನ್ನು ಮುಖ್ಯ ಭೂಮಿಕೆಯಲ್ಲಿರುವ ಮಕರಂದ್ ದೇಶಪಾಂಡೆ ಅವರು ಮಾತ್ರ ಹೊರಗಿನಿಂದ ಬಂದವರು ಎಂದು ರಾಜು ಹೇಳಿದ್ದಾರೆ. 
ದಂಡುಪಾಳ್ಯ ಗ್ಯಾಂಗ್ ಅನ್ನು ಯಾರು ಸಹ ನೋಡಿರಲಿಕ್ಕೆ ಸಾಧ್ಯವಿಲ್ಲ. ದಂಡುಪಾಳ್ಯ ಗ್ಯಾಂಗ್ ನ ಮುಖಂಡನನ್ನು ನಾನು ಭೇಟಿ ಮಾಡಿ ಚರ್ಚಿಸಿದೆ. ಆಗ ಹೊಸ ಮುಖದ ಶೋಧದಲ್ಲಿದೆ. ಜತೆಗೆ ಇಲ್ಲಿಯವರೆಗೂ ವಿಲನ್ ಭಿಕ್ಷುಕನಾಗಿ ಕಾಣಿಸಿಕೊಳ್ಳಲ ಪಾತ್ರಧಾರಿಗಾಗಿ ಹುಡುಕುತ್ತಿದ್ದಾಗ ಮಕರಂದ್ ದೇಶಪಾಂಡೆ ಅವರು ಸಿಕ್ಕರು ಎಂದು ಶ್ರೀನಿವಾಸ್ ರಾಜು ಕಲಾವಿದರ ಅನ್ವೇಷಣೆ ಕುರಿತಂತೆ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.