ಸಿನಿಮಾ ಸುದ್ದಿ

ಮುಫ್ತಿ ಟೀಸರ್ ಬಿಡುಗಡೆ: ಈ ಹಿಂದೆ ನೋಡಿರದ ವಿಭಿನ್ನ ಅವತಾರದಲ್ಲಿ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮುಫ್ತಿ ಚಿತ್ರ ತಂಡ ಹುಟ್ಟು ಹಬ್ಬದ ಅಂಗವಾಗಿ ...

ಮುಫ್ತಿ ಟೀಸರ್ ಬಿಡುಗಡೆ: ಈ ಹಿಂದೆ ನೋಡಿರದ ವಿಭಿನ್ನ ಅವತಾರದಲ್ಲಿ ಶಿವಣ್ಣ
ಮುಪ್ತಿ ಚಿತ್ರದ ಪೋಸ್ಟರ್
Published On :
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  56ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮುಫ್ತಿ ಚಿತ್ರ ತಂಡ ಹುಟ್ಟು ಹಬ್ಬದ ಅಂಗವಾಗಿ ಜುಲೈ12 ರ ಮಧ್ಯರಾತ್ರಿಯಂದು ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದೆ.
ಮುಫ್ತಿ ಸಿನಿಮಾ ಪೋಸ್ಟರ್ ನಲ್ಲಿ ಶಿವರಾಜ್ ಕುಮಾರ್ ಮತ್ತು ಶ್ರೀಮುರುಳಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿರುವ ಶಿವಣ್ಣ ಚಿತ್ರ ಅನುಪಮವಾದದ್ದಾಗಿದೆ. ಈ ಹಿಂದಿನ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿರದ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಟ್ಟ ಬಿಟ್ಟಿರುವ ಶಿವರಾಜ್ ಕುಮಾರ್ ಪಂಚೆ ತೊಟ್ಟಿದ್ದಾರೆ.
ಜಯಣ್ಣ ನಿರ್ಮಿಸುತ್ತಿರುವ ಮುಫ್ತಿ ಸಿನಿಮಾದಲ್ಲಿ ಶಿವಣ್ಣಗೆ ಸಾನ್ವಿ ಶ್ರೀವಾತ್ಸವ್ ನಾಯಕಿಯಾಗಿದ್ದಾರೆ. ಶಿವಣ್ಣನ ಹೊಸ ಲುಕ್ ಗಾಗಿ ಚಿತ್ರತಂಡ ಸುಮಾರು ಒಂದೂವರೆ ವರ್ಷದಿಂದ ಕಾಯುತ್ತಿತ್ತು, ಹಲವಾರು ಕಾರಣಗಳಿಂದಾಗಿ ಚಿತ್ರ ವಿಳಂಬವಾಗಿದೆ. ಸಿನಿಮಾದಲ್ಲಿ ಶ್ರೀ ಮುರುಳಿ ಪಾತ್ರ ಏನು ಎಂಬುದನ್ನು ಬಹಿರಂಗಪಡಿಸಿಲ್ಲ,
ನಾನು ಮತ್ತು ಶಿವಣ್ಣ ಒಟ್ಟಾಗಿ ಅಭಿನಯಿಸುತ್ತಿರುವುದು ಹಲವಾರು ನಿರೀಕ್ಷೆಗಳನ್ನು ಮೂಡಿಸಿದೆ. ಸ್ಟೋರಿ ಲೈನ್ ನೋಡಿ ಪ್ರೇಕ್ಷಕರು  ಅವರದ್ದೇ ಆದ ಕಲ್ಪನೆಯ ಮೇಲೆ ಸಿನಿಮ ನೋಡಲು ಬರುತ್ತಾರೆ. ಈ ಸಿನಿಮಾದಲ್ಲಿ ಯಾರೋ ಒಬ್ಬರಿಗಾಗಿ ಶಿವಣ್ಣ ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಾರೆ ಎಂದು ಮುರುಳಿ ವಿವರಿಸಿದ್ದಾರೆ.
ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ಶೇ, 20 ರಷ್ಟು ಮಾತ್ರ ಬಾಕಿ ಉಳಿದಿದ್ದು ಅಂತಿಮ ಹಂತ ತಲುಪಿದೆ, ಶೀಘ್ರವೇ ರಿಲೀಸ್ ದಿನಾಂಕ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ. ನರ್ತನ್ ನಿರ್ದೇಶನದ ಈ ಸಿನಿಮಾಗೆ ರವಿ ಬರ್ಸೂರು ಸಂಗೀತ ನಿರ್ದೇಶನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.