ನಟಿ ಕಿಡ್ನಾಪ್ ಪ್ರಕರಣದಲ್ಲಿ ನಟ ಬಂಧನ: ದಿಲೀಪ್ 3 ಸಿನಿಮಾಗಾಗಿ 60 ಕೋಟಿ ರು. ಹೂಡಿಕೆ
ಮಲಯಾಳಂ ನಟಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೊಳಪಟ್ಟಿರುವ ನಟ ದಿಲೀಪ್ ಸಿನಿಮಾಗಳ ...

Published On :
ಕೊಚ್ಚಿ: ಮಲಯಾಳಂ ನಟಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೊಳಪಟ್ಟಿರುವ ನಟ ದಿಲೀಪ್ ಸಿನಿಮಾಗಳ ಮೇಲೆ ಸುಮಾರು 60 ಕೋಟಿ ರು ಬಂಡವಾಳ ಹೂಡಲಾಗಿದೆ.
2017 ನೇ ವರ್ಷದ ಹಲವು ಪ್ರಾಜೆಕ್ಟ್ ಗಳಿಗಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಸಿನಿಮಾಗಳಿಗಾಗಿ ಹಾಕಲಾಗಿದೆ. ನಟಿಯ ಕಿಡ್ನಾಪ್ ಪ್ರಕರಣದಲ್ಲಿ ದಿಲೀಪ್ ಕೈವಾಡವಿದೆಯಂದು ಪೊಲೀಸರು ಸ್ಷಷ್ಟ ಪಡಿಸಿದ್ದಾರೆ.
ದಿಲೀಪ್ ಅಭಿನಯಿಸುತ್ತಿರುವ ಮೂರು ಸಿನಿಮಾಗಳು ಸೆಟ್ಟೇರಿವೆ, ಸದ್ಯ ರಾಥೀಶ್ ಅಂಬಟ್ ನಿರ್ದೇಶನದ ಕಮ್ಮಾರಸಂಭವಂ ಎಂಬ ಸಿನಿಮಾದಲ್ಲಿ ದಿಲೀಪ್ ನಟಿಸುತ್ತಿದ್ದರು. ಪೊಲೀಸರು ಬಂಧಿಸುವ ಮುನ್ನ ಈ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ದಿಲೀಪ್ ಕಾಣಿಸಿಕೊಂಡಿದ್ದರು.
ಶ್ರೀ ಗೋಕುಲಂ ಫಿಲ್ಮ್ ಬ್ಯಾನರ್ ಅಡಿ 20 ಕೋಟಿ ರು ವೆಚ್ಚದಲ್ಲಿ ಗೋಕುಲಂ ಗೋಪಾಲನ್ ಸಿನಿಮಾ ನಿರ್ಮಿಸುತ್ತಿದ್ದು, ತಮಿಳು ನಟ ಸಿದ್ದಾರ್ಥ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ನವೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗುತ್ತದೆಂದು ಹೇಳಲಾಗುತ್ತಿತ್ತು.
ಅರುಣ್ ಗೋಪಿ ನಿರ್ದೇಶನದ ರಾಮ್ ಲೀಲಾ ಕೂಡ ಸೆಟ್ಟೇರಿದ್ದು, ಇದೊಂದು ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದೆ, ಸಚಿ ಚಿತ್ರಕಥೆ ಬರೆದಿದ್ದಾರೆ. ಪ್ರಯಾಗ ಮಾರ್ಟಿನ್ ನಾಯಕಿಯಾಗಿ ನಟಿಸಿದ್ದಾರೆ.
ರಾಮ್ ಲೀಲಾ ಟೋಮಿಚಾನ್ ಮುಲಕುಪ್ಪದಂ ಪ್ರೊಡಕ್ಷನ್ ನ ಸಿನಿಮಾವಾಗಿದೆ ಪುಲಿಮುರುಗನ್ ಸಿನಿಮಾ ನಿರ್ಮಿಸಿದ್ದ ಮುಲಕುಪ್ಪದಂ ನಿರ್ಮಾಣ ಸಂಸ್ಥೆ ರಂಜಾನ್ ಗೆ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿ ಈಗಾಗಲೇ 15 ಕೋಟಿ ಹಣ ವ್ಯಯಿಸಿದೆ, ಸದ್ಯ ನಡೆಯಬೇಕಿದ್ದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಂದಾಡಲಾಗಿದ್ದು, ಬಿಡುಗಡೆ ದಿನಾಂಕವನ್ನು ಸಹ ಪೋಸ್ಟ್ ಪೋನ್ ಮಾಡಲಾಗಿದೆ.
ದಿಲೀಪ್ ನಟನೆಯ ಪ್ರೊ.ಡಿಂಕನ್ ಕೂಡ ತ್ರಿಡಿ ಚಿತ್ರವಾಗಿದ್ದುಷ ಇದು ಕೂಡ ಬಿಗ್ ಬಜೆಟೆ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ದಿಲೀಪ್ ಮಾಂತ್ರಿಕನ ಪಾತ್ರದಲ್ಲಿ ನಟಿಸಬೇಕಿತ್ತು. ಈ ಚಿತ್ರ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲೇ ಅತಿ ಹೆಚ್ಚು ಬಜೆಟ್ ನ ಸಿನಿಮಾವಾಗಿದೆ.
ನಿರ್ದೇಶಕ ರವಿ ಸಂಭಾಷಣೆ ಬರೆದಿದ್ದು, ಸನಾಲ್ ತೊಟ್ಟಮ್ ನಿರ್ಮಿಸುತ್ತಿದ್ದರು. ಇದಲ್ಲದೆ ನಟ ದಿಲೀಪ್ ಮತ್ತೆ ಹಲವು ಪ್ರಾಜೆಕ್ಟ್ ಗಳಿಗೆ ಕಮಿಟ್ ಆಗಿದ್ದರು. ನಾದಿರ್ ಶಾ ಮತ್ತು ಜಯಸೂರ್ಯ ಅವರ ಸಸ್ಪೆನ್ಸ್ ಸಿನಿಮಾಗಳಿಗೂ ದಿಲೀಪ್ ಸಹಿ ಮಾಡಿದ್ದರು.
2017ರಲ್ಲಿ ದಿಲೀಪ್ ನಟನೆಯ ಪ್ರಮುಖ ಸಿನಿಮಾ ಜಾರ್ಜೆಟ್ಟನ್ ಪೂರಂ ಬಿಡುಗಡೆಯಾಗಿತ್ತು. ಆದರೆ ಬಾಕ್ಸ್ ಆಫಿಸ್ ನಲ್ಲಿ ಸಿನಿಮಾ ಸೋತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ArrestಬಂಧನDileepದಿಲೀಪ್60 crore3 cinemaActress Harrassment Case60 ಕೋಟಿ ರು. ನಟಿ ದೌರ್ಜನ್ಯ ಪ್ರಕರಣ3 ಸಿನಿಮಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


